ಮೈಸೂರು : ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅಶ್ವಥ್ ನಾರಾಯಣ್ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿರುವ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಯಾವುದೇ ದಾಖಲೆ ಇಲ್ಲದೇ ಕಾಂಗ್ರೆಸ್ ನವರು ಆರೋಪ ಮಾಡುತ್ತಿದ್ದಾರೆ. ಇದು ವೈಯಕ್ತಿಕ ದ್ವೇಷದ ರಾಜಕಾರಣ ಪಿಎಸ್ಐ ಹಗರಣದಲ್ಲಿ ಯಾರೋ ದರ್ಶನ್ ಗೌಡ ಸಿಕ್ಕಿಬಿದ್ದಿದ್ದಾರೆ. ಅವರಿಗೂ ಅಶ್ವಥ್ ನಾರಾಯಣ್‌ಗೂ ಸಂಬಂಧ ಕಲ್ಪಿಸಲು ಹೋಗಬೇಡಿ. ಅಶ್ವಥ್ ನಾರಾಯಣ್ ರವರು ಸಾವಿರಾರು ಕೋಟಿಯ ಸೆಮಿ ಕಂಡಕ್ಟರ್ ಘಟಕವನ್ನ ಕೊಡಿಸಿದ್ದಾರೆ. ಅದರ ಬಗ್ಗೆ ಮಾತನಾಡುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿಲ್ಲ. ಬದಲಿಗೆ ಪಿಎಸ್ಐ ಹಗರಣದಲ್ಲಿ ಸಿಲುಕಿಸಲು ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿಎಂ ಅಧ್ಯಕ್ಷತೆಯಲ್ಲಿ ಸಭೆ
ಮುಂದುವರೆದು ಮಾತನಾಡಿದ ಅವರು, ಬಿ.ಎಲ್. ಸಂತೋಷ್ ರವರ ಹೇಳಿಕೆಗೆ ನನ್ನ ಸಂಪೂರ್ಣ ಸಹಮತ ಇದೆ. ಸಂತೋಷ್ ಹಾಗೂ ಉಳಿದವರು ಅವಕಾಶ ನೀಡಿದ್ದರಿಂದ ನಾನು ಎರಡನೇ ಬಾರಿಗೆ ಸಂಸದನಾಗಿದ್ದೇನೆ. ಇಂತಹ ವಿಶೇಷ ಪ್ರಯತ್ನ ಮೋದಿಯವರ ನೇತೃತ್ವದಲ್ಲಿ ಸದಾ ಆಗುತ್ತಿರುತ್ತದೆ. ಪೊಲೀಸ್ ಇಲಾಖೆ, ಕ್ರೀಡಾ ಕ್ಷೇತ್ರದಿಂದ ರಾಜಕಾರಣಿಗಳಾಗಿದ್ದಾರೆ. ಇಂತಹವರನ್ನು ಕರೆತಂದವರು ಮೋದಿ. ಯಾರು ಕೆಲಸ ಮಾಡುತ್ತಾರೋ ಅವರು ರಾಜಕಾರಣದಲ್ಲಿ ಇರುತ್ತಾರೆ, ಮಾಡದವರು ಮನೆಗೆ ಹೋಗುತ್ತಾರೆ. ರಾಜಕಾರಣ ಯಾರ ಅಪ್ಪನ ಆಸ್ತಿಯೂ ಅಲ್ಲ. ಈ ವಿಚಾರವಾಗಿ ಸಂತೋಷ್ ಯೋಚನೆ ಮಾಡಿಯೇ ಮಾತನಾಡಿದ್ದಾರೆ ಎಂದಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಘರ್ಜಿಸಿದ ಸಿಂಹ
ಹಿಂದೆ ಸಿದ್ದರಾಮಯ್ಯ ಸಚಿವರಾಗಿದ್ದವರು 25 -30 ವರ್ಷದ ಹಿಂದೆ ಕೆಜೆ ಜಾರ್ಜ್, ಎಂ.ಬಿ ಪಾಟೀಲ್ ಡಿ.ಕೆ ಶಿವಕುಮಾರ್ ಏನಾಗಿದ್ರು..? ದೇಶದಲ್ಲಿ ಕಾಂಗ್ರೆಸ್ 10% ಸರ್ಕಾರ ಅನ್ನೋದು ಫೇಮಸ್ ಆಗಿತ್ತು, 30 ವರ್ಷದ ಹಿಂದೆ ಇವರ ಆಸ್ತಿ ಎಷ್ಟು..? ಈಗ ಇರುವ ಆಸ್ತಿ ಎಷ್ಟು ಈಗಿರುವ ಆಸ್ತಿಯನ್ನ ಎಲ್ಲಿ ದುಡಿದರು ಹೇಳಲಿ. ಇವರು ಮಾಡೋದನ್ನ ನೋಡಿದ್ರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗಿದೆ. ತಿನ್ನೋದು ಬದನೆಕಾಯಿ ಹೇಳೋದುಮಾತ್ರ ವೇದಾಂತ ಎಂದು ತಿವಿದಿದ್ದಾರೆ.
ಸಿದ್ರಾಮಯ್ಯನವರು ಸಿದ್ದರಾಮಯ್ಯನ ಹುಂಡಿಯಿಂದ ಬಂದೆ ಅಂತಾರೆ ಅವ್ರಿಗೆ ಒಂದುವರೆ ಕೋಟಿ ವಾಚ್ ಎಲ್ಲಿಂದ ಬಂತು..? ಯಾರಿಗೂ ಲಾಭ ಆಗದೇ ವಾಚ್ ಕೊಟ್ಟರಾ..? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Siddaramaiah : 'PSI 5ನೇ ರ‍್ಯಾಂಕ್ ದರ್ಶನ್, ನಾಗೇಶ್ ಗೌಡ ಅಶ್ವತ್ಥ ನಾರಾಯಣ್ ಸಂಬಂಧಿಕರು'
ಸುಮ್ಮನೆ ಆರೋಪ ಮಾಡೋದು, ಟಾರ್ಗೆಟ್ ಮಾಡೋದನ್ನೆಲ್ಲ ಜನ ಒಪ್ಪೋದು ಇಲ್ಲ, ಇದಕ್ಕೆ ಸೊಪ್ಪು ಹಾಕೋದು ಇಲ್ಲ. ನೀವು ಸಿಎಂ ಆದಾಗಲೇ ನಿಮ್ಮ ಕ್ಷೇತ್ರದ ಜನ ನಿಮ್ಮನ್ನು ಒಪ್ಪಲಿಲ್ಲ, ಸಿದ್ದರಾಮಯ್ಯನವರ ವೈಫಲ್ಯವನ್ನು ನಾವು ಜನರಿಗೆ ಹೇಳಿದಕ್ಕೆ ಜನ ಅವರನ್ನು ಸ್ವಕ್ಷೇತ್ರದಲ್ಲಿ ಸೋಲಿಸಿದ್ದು, ಕಿತ್ತು ಒಗೆದಿದ್ದು ಎಂದು ಕಿಡಿ ಕಾರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.