PSI Recruitment Scam : 'ಪಿಎಸ್ಐ ಹಗರಣ ಕಂಡು ಹಿಡಿದಿದ್ದೇ ಗೃಹ ಸಚಿವರು'

ಚುನಾವಣೆ ವೇಳೆ ಈ ರೀತಿಯ ಗಿಮಿಕ್ ಕಾಂಗ್ರೆಸ್ ಗೆ ರಕ್ತಗತ. ಪಿಎಸ್ಐ ಹಗರಣ ಕಂಡು ಹಿಡಿದಿದ್ದೇ ಗೃಹ ಸಚಿವರು, ಇದನ್ನಕಾಂಗ್ರೆಸ್ ಗೃಹಸಚಿವರನ್ನು ಅಭಿನಂದಿಸಬೇಕಿತ್ತು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. 

Written by - Zee Kannada News Desk | Last Updated : May 5, 2022, 04:52 PM IST
  • ಚುನಾವಣೆ ವೇಳೆ ಈ ರೀತಿಯ ಗಿಮಿಕ್ ಕಾಂಗ್ರೆಸ್ ಗೆ ರಕ್ತಗತ
  • ಕಾಂಗ್ರೆಸ್ ಸಂತೆ ಭಾಷಣ ಬಿಟ್ಟು ದಾಖಲೆ ಇದ್ದರೆ ಕೊಡಲಿ
  • ನಿಮ್ಮ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿರುವಾಗ ಬಿಜೆಪಿ ತಟ್ಟೆಯಲ್ಲಿ ನೊಣ ಬಿದ್ದಿದೆ ಅಂತಾ ಹೇಳಲು ಬರಬೇಡಿ
PSI Recruitment Scam : 'ಪಿಎಸ್ಐ ಹಗರಣ ಕಂಡು ಹಿಡಿದಿದ್ದೇ ಗೃಹ ಸಚಿವರು' title=

ಬೆಂಗಳೂರು : ಚುನಾವಣೆ ವೇಳೆ ಈ ರೀತಿಯ ಗಿಮಿಕ್ ಕಾಂಗ್ರೆಸ್ ಗೆ ರಕ್ತಗತ. ಪಿಎಸ್ಐ ಹಗರಣ ಕಂಡು ಹಿಡಿದಿದ್ದೇ ಗೃಹ ಸಚಿವರು, ಇದನ್ನಕಾಂಗ್ರೆಸ್ ಗೃಹಸಚಿವರನ್ನು ಅಭಿನಂದಿಸಬೇಕಿತ್ತು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. 

ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರ್ ಅಶೋಕ್, ಏಕಾಏಕಿ ಈಗ ಪ್ರಕರಣದಲ್ಲಿ ಉತ್ತರ ಕರ್ನಾಟಕದಲ್ಲಿ ಓಡಾಡ್ತಿದ್ದುದನ್ನು ಬೆಂಗಳೂರಿಗೆ ತಂದು ಅಶ್ವಥ್ ನಾರಾಯಣ್ ಮೇಲೆ ಅರೋಪ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡಿದ್ದಾರೆ. ಹಿಂದೆ ಬಿಟ್ ಕಾಯಿನ್ ನಲ್ಲೂ ಹೀಗೆ ಆರೋಪ ಮಾಡಿ ಝೀರೋ ಆಯ್ತು. ಕಾಂಗ್ರೆಸ್ ಸಂತೆ ಭಾಷಣ ಬಿಟ್ಟು ದಾಖಲೆ ಇದ್ದರೆ ಕೊಡಲಿ ಎಂದು ಗುಡುಗಿದ್ದಾರೆ. 

ಇದನ್ನೂ ಓದಿ : ಅಶ್ವತ್ಥ ನಾರಾಯಣ ಭ್ರಷ್ಟಾಚಾರಕ್ಕೇ ವಿಶ್ವಮಾನವ: ಡಿ.ಕೆ.ಶಿವಕುಮಾರ್

ಇನ್ನು ಮುಂದುವರೆದು ಮಾತನಾಡಿದ ಅವರು, ಚುನಾವಣಾ ಗಿಮಿಕ್ ಮಾಡಲು ಅವರಿಗೆ ಇನ್ನೂ ಸಮಯ ಇದೆ. ನಿಮ್ಮ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿರುವಾಗ ಬಿಜೆಪಿ ತಟ್ಟೆಯಲ್ಲಿ ನೊಣ ಬಿದ್ದಿದೆ ಅಂತಾ ಹೇಳಲು ಬರಬೇಡಿ. ಡಬಲ್ ಇಂಜಿನ್ ಭಯದಿಂದ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಸಿಎಂ ಆಗುವುದು ಎಲ್ಲಾ ಪಾರ್ಟಿ ತೀರ್ಮಾನ ಮಾಡುತ್ತದೆ. ಅಶ್ವಥ್ ನಾರಾಯಣ ಎಲ್ಲೂ ನಾನು ಸಿಎಂ ಆಗ್ತೀನಿ ಅಂತ ಹೇಳಿಲ್ಲ. ಡಿಕೆ ಶಿವಕುಮಾರ್ ಹೇಳಿಕೆಯನ್ನು ಅಶ್ವಥ್ ನಾರಾಯಣ ಉಲ್ಲೇಖ ಮಾಡಿದ್ದಾರೆ. ಎಲ್ಲವೂ ಹೊರಗೆ ಬರಲಿ. ಎಷ್ಟೇ ದೊಡ್ಡವರಾಗಿದ್ದವರೂ ಬಿಡುವುದಿಲ್ಲ. ಗೃಹ ಸಚಿವರ ಪಾತ್ರ ಪ್ರಕರಣದಲ್ಲಿ ಇಲ್ಲ ಎಂದು ಸ್ಪಿಧ್ತಾನೆ ನೀಡಿದ್ದಾರೆ. 

ಸ್ವಪಕ್ಷೀಯರೇ ದಾಖಲೆ ಕೊಟ್ಟಿದ್ದಾರೆ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಕಾಂಗ್ರೆಸ್ ಗಿಂತ ಸ್ವಲ್ಪ ಮುಂದೆ ಹೋಗಿ ಟೀಕೆ ಮಾಡ್ತಿದ್ದಾರೆ. ಸ್ವಲ್ಪ ಅವರ ಪಕ್ಷದಲ್ಲಿ ಏನು ಆಗ್ತಿದೆ ಅಂತಾ ನೋಡಿಕೊಳ್ಳಲಿ. ನಮ್ಮ ಪಕ್ಷದ ವಿಚಾರ ನೋಡಿಕೊಳ್ಳಲು ಬಲಾಢ್ಯ ಕೇಂದ್ರದ ನಾಯಕತ್ವ ಇದೆ. ಜೆಡಿಎಸ್, ಕಾಂಗ್ರೆಸ್ ನಲ್ಲಿ ವಂಶದ ನಾಯಕತ್ವ ಇದೆ. ವಂಶದ ನಾಯಕತ್ವದಿಂದ ಬಿಜೆಪಿ ಕಲಿಯಬೇಕಾಗಿಲ್ಲ. ವೈಯಕ್ತಿಕ ದ್ವೇಷಗಳು ರಾಜಕೀಯವಾಗಿ ಒಳ್ಳೆಯದಲ್ಲ. ಸೈದ್ದಾಂತಿಕವಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ : ‘ಸಿದ್ದರಾಮಯ್ಯ ಸಿಎಂ ಆಗುವುದೂ ಇಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ’

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News