ಸಿನಿಮಾ ಕ್ಷೇತ್ರಕ್ಕೆ ನಟ ಶಿವಣ್ಣ ಪುತ್ರಿ ನಿವೇದಿತಾ ರಾಜ್‌ಕುಮಾರ್ ಭರ್ಜರಿ ಎಂಟ್ರಿ..!

Written by - Malathesha M | Edited by - Manjunath N | Last Updated : May 12, 2022, 09:22 PM IST
  • ಕನ್ನಡದಲ್ಲಿ ಕಮರ್ಷಿಯಲ್‌ ಸಿನಿಮಾಗಳ ನಡುವೆ ಮೌಲ್ಯಾಧಾರಿತ ಚಿತ್ರಗಳು ಕೂಡ ಸದ್ದು ಮಾಡುತ್ತಿವೆ.
  • ಇದರ ಜೊತೆಗೆ ಕಮರ್ಷಿಯಲ್‌ ಕಥೆ ಹೇಳುವಂಥ ವೆಬ್‌ ಸೀರಿಸ್‌ಗಳಿಗೆ ಯಾವುದೇ ಕೊರತೆ ಇಲ್ಲ ಅನ್ನೋದನ್ನ ತೋರಿಸೋದಕ್ಕೆ ಎಂಟ್ರಿಕೊಡುತ್ತಿದೆ 'ಹನಿಮೂನ್' ಕಹಾನಿ.
 ಸಿನಿಮಾ ಕ್ಷೇತ್ರಕ್ಕೆ ನಟ ಶಿವಣ್ಣ ಪುತ್ರಿ ನಿವೇದಿತಾ ರಾಜ್‌ಕುಮಾರ್ ಭರ್ಜರಿ ಎಂಟ್ರಿ..! title=

ವರನಟ, ಕನ್ನಡ ಸಿನಿ ಪ್ರಿಯರ ಆರಾಧ್ಯದೈವ ಡಾ.ರಾಜ್‌ಕುಮಾರ್‌ ಕುಟುಂಬದಿಂದ ಮತ್ತೊಬ್ಬ ಸದಸ್ಯರು ಸಿನಿಮಾ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ‌ ಕೊಟ್ಟಿದ್ದಾರೆ.ನಟ ಡಾ.ಶಿವರಾಜ್‌ಕುಮಾರ್‌ ಅವರ ಪುತ್ರಿ ನಿವೇದಿತಾ ರಾಜ್‌ಕುಮಾರ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದು, ಹೊಸ ಪ್ರತಿಭೆಗಳಿಗೆ ಸಾಥ್‌ ಕೊಟ್ಟಿದ್ದಾರೆ.

ಕನ್ನಡದಲ್ಲಿ ಕಮರ್ಷಿಯಲ್‌ ಸಿನಿಮಾಗಳ ನಡುವೆ ಮೌಲ್ಯಾಧಾರಿತ ಚಿತ್ರಗಳು ಕೂಡ ಸದ್ದು ಮಾಡುತ್ತಿವೆ. ಇದರ ಜೊತೆಗೆ ಕಮರ್ಷಿಯಲ್‌ ಕಥೆ ಹೇಳುವಂಥ ವೆಬ್‌ ಸೀರಿಸ್‌ಗಳಿಗೆ ಯಾವುದೇ ಕೊರತೆ ಇಲ್ಲ ಅನ್ನೋದನ್ನ ತೋರಿಸೋದಕ್ಕೆ ಎಂಟ್ರಿಕೊಡುತ್ತಿದೆ 'ಹನಿಮೂನ್' ಕಹಾನಿ.

ಹೌದು, ವೀಕ್ಷಕರನ್ನು ಮತ್ತೆ ರಂಜಿಸಲು ವೆಬ್‌ ಸೀರಿಸ್‌ ಮೂಲಕ ಅಟೆಂಡೆನ್ಸ್‌ ಹಾಕುತ್ತಿದ್ದಾರೆ ನಾಗಭೂಷಣ್‌. ಓಟಿಟಿ ಮೂಲಕ 'ಹನಿಮೂನ್' ಕಥೆ ಹೇಳಲು ನಾಗಭೂಷಣ್ & ಟೀಂ ಸಜ್ಜಾಗಿದ್ದು, ಮತ್ತೆ ಕನ್ನಡ ಪ್ರೇಕ್ಷಕರು ನಗೆಗಡಲಲ್ಲಿ ತೆಲೋದು ಗ್ಯಾರಂಟಿ. ಅದ್ರಲ್ಲೂ ನಟ ಡಾ. ಶಿವರಾಜ್‌ಕುಮಾರ್‌ ಅವರ ಪುತ್ರಿ ಈ ವೆಬ್‌ ಸೀರಿಸ್‌ ಮೂಲಕ ನಿರ್ಮಾಣ ಕ್ಷೇತ್ರಕ್ಕೂ ಎಂಟ್ರಿ ಕೊಡುತ್ತಿದ್ದಾರೆ.No description available.

ಇದನ್ನೂ ಓದಿ: ಬೆಂಗಳೂರಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ಮಹರ್ಷಿ ಶ್ರೀ ಅರವಿಂದರ ತತ್ವಬೋಧನೆ

ನಟ ಶಿವಣ್ಣ ಸಾಥ್

'ಹನಿಮೂನ್'‌ ವೆಬ್‌ ಸೀರಿಸ್‌ ಲಾಂಚ್‌ಗೆ ರೆಡಿಯಾಗಿರುವ ಹೊತ್ತಲ್ಲೇ, ದೊಡ್ಡ ಕಾರ್ಯಕ್ರಮ ಮಾಡಿದೆ. ಕಾರ್ಯಕ್ರಮಕ್ಕೆ ನಟ ಶಿವಣ್ಣ ಸಾಥ್‌ ನೀಡಿದ್ದರು. ಹಾಗೇ ಹೊಸತಂಡಕ್ಕೆ ಶುಭಹಾರೈಸಿದ ನಟ ಶಿವಣ್ಣ ಒಂದಷ್ಟು ಸಲಹೆಗಳನ್ನ ನೀಡಿದ್ದಾರೆ.ಈ ಮೂಲಕ ಪುತ್ರಿಯ ಹೊಸ ಪ್ರಯತ್ನಕ್ಕೆ ಸಾಥ್‌ ಕೊಟ್ಟಿದ್ದಾರೆ ಡಾ. ಶಿವರಾಜ್‌ಕುಮಾರ್.

ಇದನ್ನೂ ಓದಿ: ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!

ಇ‌ನ್ನು ಈಗಾಗಲೇ ಹಲವು ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರ ಮನಗೆದ್ದಿರುವ ನಾಗಭೂಷಣ್, ಜನರ ಮನಸ್ಸಿಗೆ ಈ ವೆಬ್‌ ಸೀರಿಸ್‌ ಮೂಲಕ ಮತ್ತಷ್ಟು ಹತ್ತಿರವಾಗಲಿದ್ದಾರಂತೆ.'ಹನಿಮೂನ್'‌ ಅನ್ನೋ ಟೈಟಲ್‌ ಜೊತೆಗೆ ಸಂಸಾರದ ಪಾಠ ಹೇಳಲಿದ್ದಾರೆ ನಾಗಭೂಷಣ್. ಇನ್ನು ನಟ ನಾಗಭೂಷಣ್‌ಗೆ ಜೋಡಿಯಾಗಿ ಸಂಜನಾ ಆನಂದ್‌ ಸಾಥ್‌ ನೀಡಿದ್ದು, ಹೊಸ ಮದುವೆಯಾದ ಹುಡುಗನಿಗೆ ದಾರಿ ತೋರಿಸಲು ಲೂಸಿಯಾ ಪವನ್ ‌ಎಂಟ್ರಿ ಕೊಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News