'ಸಲಾರ್‌ ಅಪ್‌ಡೇಟ್‌ ಕೊಡಿ, ಇಲ್ಲ ಸತ್ತು ಹೋಗ್ತಿನಿ': ಪ್ರಭಾಸ್‌ ಅಭಿಮಾನಿ ಹುಚ್ಚಾಟ..!

Written by - Malathesha M | Edited by - Manjunath N | Last Updated : May 12, 2022, 08:58 PM IST
  • ಸಿನಿಮಾ ನೋಡಿಲ್ಲ ಅಂದ್ರೆ ಯಾರಾದ್ರೂ ಸತ್ತು ಹೋಗ್ತಾರಾ..? ಇಲ್ಲ ಅಲ್ವಾ..? ಆದ್ರೆ ಇಲ್ಲೊಬ್ಬ ಹುಚ್ಚು ಅಭಿಮಾನಿ ಅಂತಹ ಬೆದರಿಕೆ ಪತ್ರ ಬರೆದಿದ್ದಾನೆ.
  • ಅದು ಬೇರೆ ಯಾರಿಗೂ ಅಲ್ಲ, ಟಾಲಿವುಡ್‌ ಯಂಗ್‌ ರೆಬೆಲ್‌ ಪ್ರಭಾಸ್‌ ಅವರಿಗೆ..!
  'ಸಲಾರ್‌ ಅಪ್‌ಡೇಟ್‌ ಕೊಡಿ, ಇಲ್ಲ ಸತ್ತು ಹೋಗ್ತಿನಿ': ಪ್ರಭಾಸ್‌ ಅಭಿಮಾನಿ ಹುಚ್ಚಾಟ..! title=
file photo

ಸಿನಿಮಾ ನೋಡಿಲ್ಲ ಅಂದ್ರೆ ಯಾರಾದ್ರೂ ಸತ್ತು ಹೋಗ್ತಾರಾ..? ಇಲ್ಲ ಅಲ್ವಾ..? ಆದ್ರೆ ಇಲ್ಲೊಬ್ಬ ಹುಚ್ಚು ಅಭಿಮಾನಿ ಅಂತಹ ಬೆದರಿಕೆ ಪತ್ರ ಬರೆದಿದ್ದಾನೆ. ಅದು ಬೇರೆ ಯಾರಿಗೂ ಅಲ್ಲ, ಟಾಲಿವುಡ್‌ ಯಂಗ್‌ ರೆಬೆಲ್‌ ಪ್ರಭಾಸ್‌ ಅವರಿಗೆ..!

ಅಂದಹಾಗೆ ನಟ ಪ್ರಭಾಸ್ ಅವರ ಕಟ್ಟಾ ಅಭಿಮಾನಿಯೊಬ್ಬ 'ಸಲಾರ್‌' ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಲೆಟರ್‌ ಬರೆದು, ಸಂಚಲನ ಸೃಷ್ಟಿಸಿದ್ದಾನೆ. 'ಸಲಾರ್‌' ಸೌತ್ ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿರುವ ಮತ್ತೊಂದು ಚಿತ್ರ. 200 ಕೋಟಿ ರೂಪಾಯಿ ವೆಚ್ಚದಲ್ಲಿ 'ಸಲಾರ್‌' ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ.ಕನ್ನಡಿಗ ಪ್ರಶಾಂತ್‌ ನೀಲ್‌ ಡೈರೆಕ್ಷನ್‌ನಲ್ಲಿ, ಪ್ರಭಾಸ್‌ ನಟನೆಯಲ್ಲಿ 'ಸಲಾರ್‌' ನಿರ್ಮಾಣವಾಗುತ್ತಿದೆ. ಆದರೆ ಚಿತ್ರದ ಬಗ್ಗೆ ಸರಿಯಾದ ಅಪ್‌ಡೇಟ್‌ ಸಿಕ್ಕಿಲ್ಲ ಅಂತಾ ಅಭಿಮಾನಿ ಒಬ್ಬ ಪತ್ರ ಬರೆದು, ಶಾಕ್‌ ಕೊಟ್ಟಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ಮಹರ್ಷಿ ಶ್ರೀ ಅರವಿಂದರ ತತ್ವಬೋಧನೆ

ಎಲ್ಲೆಲ್ಲೂ ವೈರಲ್‌
ಅಂದಹಾಗೆ 'ಸಲಾರ್‌' ಅಪ್‌ಡೇಟ್‌ ಕೊಡದೇ ಇದ್ರೆ ಜೀವ ಕಳೆದುಕೊಳ್ಳುತ್ತೇನೆ ಅಂತಾ‌ ಪ್ರಭಾಸ್‌ ಅಭಿಮಾನಿ ಬರೆದಿರುವ ಪತ್ರ ಎಲ್ಲೆಲ್ಲೂ ವೈರಲ್‌ ಆಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಪ್ರಭಾಸ್‌ ಅಭಿಮಾನಿ ಪತ್ರ ಹವಾ ಎಬ್ಬಿಸಿದೆ. ಅಭಿಮಾನಿಯ ಹುಚ್ಚಾಟ ಕಂಡು ನೆಟ್ಟಿಗರು ನಗುತ್ತಿದ್ದಾರೆ. ಕೆಲವರು ಈ ಪತ್ರ ಹಿಡಿದು ಟ್ರೋಲ್‌ ಮಾಡುತ್ತಿದ್ರೆ, ಇನ್ನೂ ಕೆಲವ್ರು ಇವನು ಅದೆಂತಹ ಹುಚ್ಚು ಅಭಿಮಾನಿ‌ ಅಂತಾ ಗೊಣಗುತ್ತಿದ್ದಾರೆ.

ಇದನ್ನೂ ಓದಿ: ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!

ಒಟ್ಟಾರೆ ಹೇಳುವುದಾದರೆ ಮತ್ತೊಂದು ಸೌತ್‌ ಇಂಡಿಯನ್‌ ಸಿನಿಮಾ ಸದ್ಯಕ್ಕೆ ಬಾಲಿವುಡ್‌ ರೂಲ್‌ ಮಾಡಲು ಸಜ್ಜಾಗುತ್ತಿದೆ. ಈ ಮೂಲಕ ದಕ್ಷಿಣ ಭಾರತದ ಸಿನಿ ಪ್ರಿಯರಿಗೆ ಹಬ್ಬದೂಟ ಸಿಗಲಿದೆ. ಅದ್ರಲ್ಲೂ ಕನ್ನಡದ ಬ್ಲಾಕ್‌ ಬಸ್ಟರ್‌, ವರ್ಲ್ಡ್‌ ಬಾಕ್ಸ್‌ ಆಫಿಸ್‌ ಅನ್ನೇ ನಡುಗಿಸಿದ 'ಕೆಜಿಎ‌ಫ್‌' ಸಿನಿಮಾ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ 'ಸಲಾರ್‌' ಭಾರಿ ಸದ್ದು ಮಾಡುತ್ತಿದ್ದು, 'ಸಲಾರ್‌' ಯಾವೆಲ್ಲಾ ರೆಕಾರ್ಡ್‌ ಉಡೀಸ್‌ ಮಾಡುತ್ತೆ ಅನ್ನೋದನ್ನ ತಿಳಿಯಲು ಒಂದಷ್ಟು ದಿನಗಳ ಕಾಲ ಕಾಯಲೇಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News