Tomato Price Hike : ರಾಜ್ಯದಲ್ಲಿ ಭಾರಿ ಮಳೆ ಪರಿಣಾಮ : ಟೊಮ್ಯಾಟೊ ಬೆಲೆ ಗಗನಕ್ಕೆ 

ಆನೆಕಲ್, ಹೊಸಕೋಟೆ ಭಾಗದ ತರಕಾರಿ ಬೆಳೆ ಆಲಿಕಲ್ಲು ಮಳೆಗೆ ಹಾನಿಯಾಗಿದೆ. ಬೇಡಿಕೆ ಇರುವಷ್ಟು ನಗರಕ್ಕೆ ಪೂರೈಕೆಯಾಗದ ಹಿನ್ನಲೆ ದರ ಏರಿಕೆಯಾಗಿದೆ.  

Written by - Sowmyashree Marnad | Last Updated : May 16, 2022, 06:17 PM IST
  • ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ರೈತರ ತರಕಾರಿ ಬೆಲೆಗಳಿಗೆ ಹಾನಿ
  • ಬೆಂಗಳೂರು ನಗರದಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿವೆ
  • ಟೊಮೆಟೊ ಹಣ್ಣಿನ ಬೆಲೆ 100 ರ ಗಡಿ ಸಮೀಪ
Tomato Price Hike : ರಾಜ್ಯದಲ್ಲಿ ಭಾರಿ ಮಳೆ ಪರಿಣಾಮ : ಟೊಮ್ಯಾಟೊ ಬೆಲೆ ಗಗನಕ್ಕೆ  title=

ಬೆಂಗಳೂರು : ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ರೈತರ ತರಕಾರಿ ಬೆಲೆಗಳಿಗೆ ಹಾನಿಯಾಗಿದ್ದು, ನಗರದಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಟೊಮೆಟೊ ಹಣ್ಣಿನ ಬೆಲೆ 100 ರ ಗಡಿ ಸಮೀಪಿಸುತ್ತಿದ್ದು, ಉತ್ತಮ ಟೊಮ್ಯಾಟೊ ಹಣ್ಣಿನ ಬೆಲೆ 80-90 ಕ್ಕೆ ಮಾರಾಟವಾಗ್ತಿದೆ.  

ಆನೆಕಲ್, ಹೊಸಕೋಟೆ ಭಾಗದ ತರಕಾರಿ ಬೆಳೆ ಆಲಿಕಲ್ಲು ಮಳೆಗೆ ಹಾನಿಯಾಗಿದೆ. ಬೇಡಿಕೆ ಇರುವಷ್ಟು ನಗರಕ್ಕೆ ಪೂರೈಕೆಯಾಗದ ಹಿನ್ನಲೆ ದರ ಏರಿಕೆಯಾಗಿದೆ.  

ಇದನ್ನೂ ಓದಿ : Lakhan Jarkiholi : ರಮೇಶ್ ಜಾರಕಿಹೊಳಿ ಆದಷ್ಟು ಬೇಗನೆ ಮಂತ್ರಿ ಆಗುತ್ತಾರೆ : ಲಖನ್ ಜಾರಕಿಹೊಳಿ

ಹಾಪ್ ಕಾಮ್ಸ್ ದರ ಕೆ.ಜಿಗೆ 75 ರೂ ಇದ್ದು, ಚಿಲ್ಲರೆ ತರಕಾರಿ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ ಟೊಮೆಟೋ ಹಣ್ಣುಗಳೇ ಸಿಗುತ್ತಿಲ್ಲ. ಅರ್ಧ ಕ್ವಾಲಿಟಿ ಟೊಮೆಟೊಗಳಿಗೆ 55 ರಿಂದ 70 ರೂಪಾಯಿಗೆ ಮಾರಾಟವಾಗ್ತಿದೆ.  ಮಳೆ ಹೀಗೇ ಮುಂದುವರಿದರೆ ಮತ್ತಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಪ್ರತಾಪ್ ತಿಳಿಸಿದ್ದಾರೆ.

ಟೊಮೆಟೊ ಜೊತೆ ಬೀನ್ಸ್, ಕ್ಯಾರೆಟ್ ಬೆಲೆಗಳೂ ಏರಿಕೆಯಾಗುವೆ. ಬೀನ್ಸ್ ಕೆ.ಜಿ ಗೆ 95 ರೂಪಾಯಿ, ಕೊತ್ತಂಬರಿ ಸೊಪ್ಪು ಕಟ್ಟಿಗೆ 30, ಬೀಟ್ರೂಟ್ ಬೆಲೆ 55 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ; ಕರಾವಳಿಗೆ ರೆಡ್ ಅಲರ್ಟ್..!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News