May 28 ಈ ಮೂರು ರಾಶಿಗಳ ಜನರ ಪಾಲಿಗೆ ವರದಾನ ಸಾಬೀತಾಗಲಿದೆ, ದೇವಿ ಲಕ್ಷ್ಮಿಯ ಕೃಪಾವೃಷ್ಟಿಯಾಗಲಿದೆ

Rashifal - ಗ್ರಹ ನಕ್ಷತ್ರಗಳ ನಡೆಯಿಂದ ವಿವಿಧ ರಾಶಿಗಳ ಕುರಿತು ಅಂದಾಜಿಸಲಾಗುತ್ತದೆ. ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಗ್ರಹಗಳ ಶುಭ ಪ್ರಭಾವದ ಕಾರಣ ಮೇ 28 ಕೆಲ ರಾಶಿಗಳ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ.  

Written by - Nitin Tabib | Last Updated : May 27, 2022, 06:29 PM IST
  • ನಾಳಿನ ದಿನ ಮೂರು ರಾಶಿಗಳ ಪಾಲಿಗೆ ವರದಾನ ಸಾಬೀತಾಗಲಿದೆ.
  • ನೌಕರಿ, ಸುಖ-ಸೌಕರ್ಯದ ವಿಷಯದಲ್ಲಿ ಭಾಗ್ಯದ ಸಾಥ್ ಸಿಗಲಿದೆ
  • ಯಾವ ಮೂರು ರಾಶಿಗಳಿಗೆ ನಾಳಿನ ದಿನ ಉತ್ತಮವಾಗಿರಲಿದೆ ತಿಳಿದುಕೊಳ್ಳೋಣ ಬನ್ನಿ
May 28 ಈ ಮೂರು ರಾಶಿಗಳ ಜನರ ಪಾಲಿಗೆ ವರದಾನ ಸಾಬೀತಾಗಲಿದೆ, ದೇವಿ ಲಕ್ಷ್ಮಿಯ ಕೃಪಾವೃಷ್ಟಿಯಾಗಲಿದೆ title=
Tomorrow Rashifal

Horoscope - ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳ ವರ್ಣತೆ ಇದೆ. ಪ್ರತಿಯೊಂದು ರಾಶಿಗೆ ಒಂದು ಅಧಿಪತಿ ಗ್ರಹ ಇದ್ದೇ ಇರುತ್ತದೆ. ಗ್ರಹ-ನಕ್ಷತ್ರಗಳ ನಡೆ ಬದಲಾವಣೆಯಿಂದ ವಿವಿಧ ರಾಶಿಗಳ ಜನರ ಭವಿಷ್ಯವನ್ನು ಅಂದಾಜಿಸಲಾಗುತ್ತದೆ. ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಮೇ 28 ಕೆಲ ರಾಶಿಗಳ ಪಾಲಿಗೆ ತುಂಬಾ ಶುಭ ಸಾಬೀತಾಗಲಿದೆ. ಈ ರಾಶಿಗಳ ಜನರಿಗೆ ಮೇ 28 ವರದಾನಕ್ಕಿಂತ ಕಮ್ಮಿಯೇನಿಲ್ಲ ಎಂದರೆ ತಪ್ಪಾಗಲಾರದು. ಹಾಗಾದರೆ ಬನ್ನಿ ನಾಳಿನ ದಿನ ಯಾವ ಮೂರು ರಾಶಿಗಳ ಭಾಗ್ಯವನ್ನು ಬೆಳಗಲಿದೆ ತಿಳಿದುಕೊಳ್ಳೋಣ, 

ಮೇಷ ರಾಶಿ 
ಕೆಲಸ ಕಾರ್ಯಗಳ ಪ್ರತಿ ಉತ್ಸಾಹ ಇರಲಿದೆ. ಧರ್ಮ-ಕಾರ್ಯಗಳ ಪ್ರತಿ ಆಸಕ್ತಿ ಹೆಚ್ಚಾಗಲಿದೆ. ತಾಯಿಯ ಬೆಂಬಲ ಸಿಗಲಿದೆ. ತಾಯಿಯಿಂದ ಧನಲಾಭದ ಯೋಗಗಳು ಕೂಡ ಗೋಚರಿಸುತ್ತಿವೆ. ಸ್ನೇಹಿತನೊಬ್ಬನ ಆಗಮನದ ಸಾಧ್ಯತೆ ಇದೆ. ಬೌದ್ಧಿಕ ಕಾರ್ಯಗಳಲ್ಲಿ ಧನಪ್ರಾಪ್ತಿಯ ಲಕ್ಷಣಗಳು ಕಂಡುಬರುತ್ತಿವೆ. ನೌಕರಿಯಲ್ಲಿ ಸ್ಥಾನ ಪರಿವರ್ತನೆಯ ಸಾಧ್ಯತೆಗಳಿವೆ. ಕುಟುಂಬಸ್ಥರ ಜೊತೆಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವಿರಿ.

ಮಿಥುನ ರಾಶಿ
ವ್ಯಾಪಾರ ವಿಸ್ತಾರದ ಯೋಜನೆ ಸಾಕಾರಗೊಳ್ಳಲಿದೆ. ಸಹೋದರರ ಸಾಥ್ ಸಿಗಲಿದೆ. ಪರಿಶ್ರಮ ಕೂಡ ಹೆಚ್ಚಾಗಲಿದೆ. ಮನೆಯಲ್ಲಿ ಮಂಗಳ ಕಾರ್ಯ ನೆರವೇರುವ ಸಾಧ್ಯತೆ ಇದೆ. ವಸ್ತ್ರಗಳು ಉಡುಗೊರೆಯ ರೂಪದಲ್ಲಿ ಸಿಗಬಹುದು. ನೌಕರಿಯಲ್ಲಿ ಬದಲಾವಣೆಯ ಜೊತೆಗೆ ಬೇರೆ ಸ್ಥಾನಕ್ಕೂ ಕೂಡ ಹೋಗುವ ಸಾಧ್ಯತೆ ಇದೆ. ಆಮದು-ರಫ್ತಿನ ವ್ಯಾಪಾರದಲ್ಲಿ ಲಾಭದ ಅವಕಾಶಗಳು ಸೃಷ್ಟಿಯಾಗಲಿವೆ. ತಾಯಿಯ ಸಾನಿಧ್ಯ ಲಭಿಸಲಿದೆ. ವಾಹನ ಸುಖದಲ್ಲಿ ಹೆಚ್ಚಳ. ನೌಕರಿಯಲ್ಲಿ ಮೇಲಾಧಿಕಾರಿಗಳಿಂದ ಬೆಂಬಲ ಸಿಗಲಿದೆ.

ಇದನ್ನೂ ಓದಿ-Astro Tips: ಈ ರೀತಿಯ ಕೆಲಸಗಳನ್ನು ಮಾಡಿದರೆ ಜಾತಕದ ಶುಭ ಗ್ರಹಗಳು ಕೂಡ ಅಶುಭ ಫಲಿತಾಂಶ ನೀಡುತ್ತವೆ

ವೃಶ್ಚಿಕ ರಾಶಿ

ಆತ್ಮವಿಶ್ವಾಸ ಹೆಚ್ಚಾಗಲಿದೆ. ಕುಟುಂಬದಲ್ಲಿ ಸುಖ-ಶಾಂತಿ ನೆಮ್ಮದಿ ಇರಲಿದ್ದು, ಸೌಕರ್ಯಗಳಲ್ಲಿ ಹೆಚ್ಚಾಗಲಿದೆ. ಕಾರ್ಯಕ್ಷೇತ್ರದ ಬದಲಾವಣೆಯ ಸಂಕೆತಗಳಿವೆ. ತಾಯಿಯ ಸಾನಿಧ್ಯ ಮತ್ತು ಬೆಂಬಲ ಎರಡೂ ಕೂಡ ಲಭಿಸಲಿದೆ.ನೌಕರಿಯಲ್ಲಿ ಅಧಿಕಾರಿಗಳ ಬೆಂಬಲ, ಕಾರ್ಯಕ್ಷೇತ್ರದ ಬದಲಾವಣೆ ಎರಡೂ ಸಾಧ್ಯತೆಗಳಿವೆ.

ಇದನ್ನೂ ಓದಿ-Good And Bad Indications Of Crow: ಶುಭ ಹಾಗೂ ಅಶುಭಗಳ ಕುರಿತು ತುಂಬಾ ಮಹತ್ವದ ಸಂಕೇತಗಳನ್ನು ನೀಡುತ್ತದೆ ಯಮದೂತ ಕಾಗೆ

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ) 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News