ಬೆಂಗಳೂರು: RSS ತಂಟೆಗೆ ಬರಬೇಡಿ…ಹುಷಾರ್! ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಅವರು, ‘RSS ತಂಟೆಗೆ ಬಂದರೆ ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ’ ಎಂದು ವಾರ್ನಿಂಗ್ ಮಾಡಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿವಾಸದ ಮುಂಭಾಗ NSUI ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದ್ದಾರೆಂಬ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ‘ರಾಜ್ಯದಾದ್ಯಂತ ಚಡ್ಡಿಗೆ ಬೆಂಕಿ ಹಾಕುವ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು.
ರಾವಣ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ…. ಲಂಕೆಯೇ ಸುಟ್ಟು ಹೋಯಿತು ….. ಕಾಂಗ್ರೇಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ … ಆ ಕೆಲಸ ನಿಮಗಿಂತ ಚನ್ನಾಗಿ ಇನ್ಯಾರು ಮಾಡಲು ಸಾಧ್ಯ …. ಚಡ್ಜಿಗೆ ನೀವು ಬೆಂಕಿ ಹಚ್ಜಿ ನೋಡಿ ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ RSS ತಂಟೆಗೆ ಬರಬೇಡಿ…ಹುಷಾರ್#siddaramaiah
— K S Eshwarappa (@ikseshwarappa) June 4, 2022
ಇದನ್ನೂ ಓದಿ: ನನಗೆ ಈ ಶಿಕ್ಷೆ ಕಡಿಮೆ, ಇನ್ನೂ ಶಿಕ್ಷೆ ಆಗ್ಬೇಕು: ಯುವತಿ ಒಪ್ಪಿದ್ರೆ ಮದುವೆ ಆಗ್ತಾನಂತೆ ಆ್ಯಸಿಡ್ ನಾಗ
ಸಿದ್ದರಾಮಯ್ಯ ಹೇಳಿಕೆಯಿಂದ ಗರಂ ಆಗಿರುವ ಕೆ.ಎಸ್.ಈಶ್ವರಪ್ಪ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ‘ರಾವಣ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ, ಲಂಕೆಯೇ ಸುಟ್ಟು ಹೋಯಿತು. ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ. ಆ ಕೆಲಸ ನಿಮಗಿಂತ ಚೆನ್ನಾಗಿ ಇನ್ಯಾರು ಮಾಡಲು ಸಾಧ್ಯ? ಚಡ್ಜಿಗೆ ನೀವು ಬೆಂಕಿ ಹಚ್ಜಿ ನೋಡಿ ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ. RSS ತಂಟೆಗೆ ಬರಬೇಡಿ…ಹುಷಾರ್’ ಎಂದು ಎಚ್ಚರಿಸಿದ್ದಾರೆ.
ಚಡ್ಡಿಯನ್ನೇ ಬಿಜೆಪಿ ಧ್ವಜವನ್ನಾಗಿ ಸ್ವೀಕರಿಸಿದೆಯಾ..?
'@ikseshwarappa ಅವರ ಭ್ರಷ್ಟಾಚಾರದ ಬೆಂಕಿ ರಾಜ್ಯವನ್ನಷ್ಟೇ ಅಲ್ಲ, ಗುತ್ತಿಗೆದಾರರ ಬದುಕನ್ನೇ ಸುಟ್ಟಿದೆ.
'ಚಡ್ಡಿ' ಅಂದರೆ ಬಿಜೆಪಿಗರಿಗೆ ಏಕಿಷ್ಟು ಅಮರಪ್ರೇಮ? ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ?
ಚಡ್ಡಿಗೆ ಬಿಜೆಪಿ ಪೇಟೆಂಟ್ ಇದೆಯಾ?ಅಥವಾ ಚಡ್ಡಿಯನ್ನೇ ಬಿಜೆಪಿ ಧ್ವಜವನ್ನಾಗಿ ಸ್ವೀಕರಿಸಿದೆಯಾ..? pic.twitter.com/bBnWsGTxOI
— Karnataka Congress (@INCKarnataka) June 4, 2022
ಕೆ.ಎಸ್.ಈಶ್ವರಪ್ಪನವರ ಟ್ವೀಟ್‍ಗೆ ತಿರುಗೇಟು ನೀಡಿರುವ ಕಾಂಗ್ರೆಸ್, ‘ಈಶ್ವರಪ್ಪನವರ ಭ್ರಷ್ಟಾಚಾರದ ಬೆಂಕಿ ರಾಜ್ಯವನ್ನಷ್ಟೇ ಅಲ್ಲ, ಗುತ್ತಿಗೆದಾರರ ಬದುಕನ್ನೇ ಸುಟ್ಟಿದೆ. ‘ಚಡ್ಡಿ’ ಅಂದರೆ ಬಿಜೆಪಿಗರಿಗೆ ಏಕಿಷ್ಟು ಅಮರಪ್ರೇಮ? ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ? ಚಡ್ಡಿಗೆ ಬಿಜೆಪಿ ಪೇಟೆಂಟ್ ಇದೆಯಾ? ಅಥವಾ ಚಡ್ಡಿಯನ್ನೇ ಬಿಜೆಪಿ ಧ್ವಜವನ್ನಾಗಿ ಸ್ವೀಕರಿಸಿದೆಯಾ..?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಖರ್ಗೆ ಮೇಲುಗೈ ಆಗುತ್ತದೆಂಬ ಭಯದಿಂದ ಡಿಕೆಶಿ-ಸಿದ್ದರಾಮಯ್ಯರಿಂದ ಹೊಂದಾಣಿಕೆ ನಾಟಕ: ಬಿಜೆಪಿ
ಲೋಕೋದ್ಧಾರಕ್ಕಾಗಿ ಈಶ್ವರ ವಿಷ ನುಂಗಿ ವಿಷಕಂಠನಾದ. ಆದರೆ 40% ಕಮಿಷನ್‌ಗಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಷ ನುಂಗುವಂತೆ ಮಾಡಿದ ಪ್ರಾಣಕಂಟಕ ಗಂಜಿಗಿರಾಕಿ ನೀವು.
ಕೈ ಜಾರಿ ಹೋಗಿರುವ ಮಂತ್ರಿಗಿರಿಗಾಗಿ ಆರೆಸ್ಸೆಸ್‌ಗೆ ಅದೆಷ್ಟು ಬಕೆಟ್ ಹಿಡಿಯುತ್ತೀರಿ?
ನೀವು ಬಕೆಟ್ ಅಲ್ಲ ಹಂಡೆ ಹಿಡಿದರೂ ಜನರ ವಿಶ್ವಾಸ ಪಾತ್ರೆ ತುಂಬುವುದಿಲ್ಲ.
— Karnataka Congress (@INCKarnataka) June 4, 2022
‘ಲೋಕೋದ್ಧಾರಕ್ಕಾಗಿ ಈಶ್ವರ ವಿಷ ನುಂಗಿ ವಿಷಕಂಠನಾದ. ಆದರೆ 40% ಕಮಿಷನ್‌ಗಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಷ ನುಂಗುವಂತೆ ಮಾಡಿದ ಪ್ರಾಣಕಂಟಕ ಗಂಜಿಗಿರಾಕಿ ನೀವು. ಕೈ ಜಾರಿ ಹೋಗಿರುವ ಮಂತ್ರಿಗಿರಿಗಾಗಿ ಆರೆಸ್ಸೆಸ್‌ಗೆ ಅದೆಷ್ಟು ಬಕೆಟ್ ಹಿಡಿಯುತ್ತೀರಿ? ನೀವು ಬಕೆಟ್ ಅಲ್ಲ ಹಂಡೆ ಹಿಡಿದರೂ ಜನರ ವಿಶ್ವಾಸ ಪಾತ್ರೆ ತುಂಬುವುದಿಲ್ಲ’ವೆಂದು ಕಾಂಗ್ರೆಸ್ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.