ಈ ಆಟಗಾರನಿಂದ ಪಂತ್‌ ಭವಿಷ್ಯಕ್ಕೆ ಕುತ್ತು! ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಕಿತ್ತುಕೊಳ್ಳುತ್ತಾ?

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಕಾರ್ತಿಕ್ ಐಪಿಎಲ್ 2022 ರಲ್ಲಿ ಆರ್‌ಸಿಬಿ ತಂಡಕ್ಕೆ ಉತ್ತಮ ಫಿನಿಶರ್ ಆಗಿದ್ದರು. ಆಡಿರುವ 16 ಪಂದ್ಯಗಳಲ್ಲಿ 55 ಸರಾಸರಿ ಹೊಂದಿದ್ದು, 330 ರನ್ ಗಳಿಸಿದ್ದಾರೆ. ಜೊತೆಗೆ 183.33 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕಾರ್ತಿಕ್ ಅವರ ಅಪಾಯಕಾರಿ ಫಾರ್ಮ್ ನೋಡಿ ‘ಬೆಸ್ಟ್ ಸ್ಟ್ರೈಕರ್ ಆಫ್ ದಿ ಸೀಸನ್’ ಎಂಬ ಬಿರುದು ಕೂಡ ನೀಡಲಾಗಿದೆ. 

Written by - Bhavishya Shetty | Last Updated : Jun 5, 2022, 06:01 PM IST
  • ಜೂನ್ 9ರಿಂದ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ
  • ದಿನೇಶ್ ಕಾರ್ತಿಕ್ ಭರ್ಜರಿ ಕಮ್ ಬ್ಯಾಕ್
  • ರಿಷಬ್‌ ಸ್ಥಾನಕ್ಕೆ ಮುಳುವಾಗುವ ಸಾಧ್ಯತೆ
ಈ ಆಟಗಾರನಿಂದ ಪಂತ್‌ ಭವಿಷ್ಯಕ್ಕೆ ಕುತ್ತು! ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಕಿತ್ತುಕೊಳ್ಳುತ್ತಾ? title=
Rishab Pant

ಭಾರತ ತಂಡ ಜೂನ್ 9ರಿಂದ ದಕ್ಷಿಣ ಆಫ್ರಿಕಾ ವಿರುದ್ಧ T20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ಬಾರಿ ಯುವ ಆಟಗಾರರೊಂದಿಗೆ ಕಣಕ್ಕಿಳಿದಿರುವ ಭಾರತ, ಸರಣಿ ಕೈವಶ ಮಾಡಿಕೊಳ್ಳಲು ತಯಾರು ನಡೆಸುತ್ತಿದೆ.  

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಕಾರ್ತಿಕ್ ಐಪಿಎಲ್ 2022 ರಲ್ಲಿ ಆರ್‌ಸಿಬಿ ತಂಡಕ್ಕೆ ಉತ್ತಮ ಫಿನಿಶರ್ ಆಗಿದ್ದರು. ಆಡಿರುವ 16 ಪಂದ್ಯಗಳಲ್ಲಿ 55 ಸರಾಸರಿ ಹೊಂದಿದ್ದು, 330 ರನ್ ಗಳಿಸಿದ್ದಾರೆ. ಜೊತೆಗೆ 183.33 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕಾರ್ತಿಕ್ ಅವರ ಅಪಾಯಕಾರಿ ಫಾರ್ಮ್ ನೋಡಿ ‘ಬೆಸ್ಟ್ ಸ್ಟ್ರೈಕರ್ ಆಫ್ ದಿ ಸೀಸನ್’ ಎಂಬ ಬಿರುದು ಕೂಡ ನೀಡಲಾಗಿದೆ. 

ಇದನ್ನು ಓದಿ: LPG Subsidy: ಉಚಿತ ಎಲ್ಪಿಜಿ ಸಿಲಿಂಡರ್ ನಿಯಮಗಳಲ್ಲಿ ಬದಲಾವಣೆ ಸಾಧ್ಯತೆ! ನೀವೂ ತಿಳಿದುಕೊಳ್ಳಿ

ಮೂರು ವರ್ಷಗಳ ನಂತರ ಕಾರ್ತಿಕ್ ಟೀಂ ಇಂಡಿಯಾಗೆ ಮರಳಿದ್ದಾರೆ. ಕಾರ್ತಿಕ್‌ ವೃತ್ತಿಜೀವನ ಮುಗಿಯಿತು ಎಂದು ಅನೇಕರು ಮಾತನಾಡಿಕೊಳ್ಳುವ ಸಂದರ್ಭದಲ್ಲಿ ಮತ್ತೆ ಫಾರ್ಮ್‌ಗೆ ಮರಳಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. 

ಸದ್ಯ ದಿನೇಶ್ ಕಾರ್ತಿಕ್ ಆಟ ನೋಡಿದರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡಲು ಅವಕಾಶ ಸಿಗಬಹುದು. ಇಂತಹ ಪರಿಸ್ಥಿತಿಯಲ್ಲಿ ರಿಷಬ್ ಪಂತ್ ಅವರನ್ನು ಪ್ಲೇಯಿಂಗ್‌ XI ನಿಂದ ಕೈಬಿಡುವ ಸಾಧ್ಯತೆಯಿದೆ. ಹಲವು ಪಂದ್ಯಗಳಲ್ಲಿ ಪಂತ್ ಅವರ ಕಳಪೆ ಫಾರ್ಮ್‌ನಿಂದ ತಂಡವು ಸೋಲು ಅನುಭವಿಸುವಂತಾಗಿತ್ತು. ಮತ್ತೊಂದೆಡೆ, ದಿನೇಶ್ ಕಾರ್ತಿಕ್ ಅವರ ವಿಕೆಟ್ ಕೀಪಿಂಗ್ ಕೌಶಲ್ಯವೂ ಪಂತ್‌ಗಿಂತ ಉತ್ತಮವಾಗಿದೆ. ಪಂತ್ 2022 ರಲ್ಲಿ ಕೇವಲ 2 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು ಕೇವಲ 60 ರನ್ ಗಳಿಸಿದ್ದಾರೆ.

ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಆಡಲಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗಿದೆ. ದಿನೇಶ್ ಕಾರ್ತಿಕ್‌ಗೆ ಟಿ 20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಬಹುದು, ಏಕೆಂದರೆ ಕಾರ್ತಿಕ್ ಅಪಾರ ಅನುಭವವನ್ನು ಹೊಂದಿದ್ದಾರೆ. ಇದು ತಂಡಕ್ಕೆ ಉಪಯುಕ್ತವಾಗಲಿದೆ. 

ಇದನ್ನು ಓದಿ: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಅಸಲಿಯತ್ತು ಬಯಲು! 

ದಕ್ಷಿಣ ಆಫ್ರಿಕಾ ಸರಣಿಗೆ ಭಾರತದ T20 ತಂಡ:
ಕೆಎಲ್ ರಾಹುಲ್ (ನಾಯಕ), ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ಉಪನಾಯಕ), ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News