ವರ್ಷದಲ್ಲಿ ಎರಡು ಬಾರಿ ಐಪಿಎಲ್‌! ವಿಶೇಷ ಪ್ರಾಜೆಕ್ಟ್‌ ಬಗ್ಗೆ ಆಕಾಶ್‌ ಚೋಪ್ರಾ ಹೇಳಿದ್ದೇನು?

ಐಪಿಎಲ್ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದ್ದು, ಇದೀಗ ಈ ಪಟ್ಟಿಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೆಸರೂ ಸೇರ್ಪಡೆಯಾಗಿದೆ. ಶೀಘ್ರದಲ್ಲೇ ಒಂದು ವರ್ಷದಲ್ಲಿ ಎರಡು ಐಪಿಎಲ್‌ಗಳನ್ನು ನೋಡಲಾಗುವುದು ಮತ್ತು ಅದು ಖಚಿತ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. 

Written by - Bhavishya Shetty | Last Updated : Jun 6, 2022, 05:37 PM IST
  • ವರ್ಷದಲ್ಲಿ ಎರಡು ಬಾರಿ ನಡೆಯಲಿದೆ ಐಪಿಎಲ್‌
  • ಮಾಜಿ ಅನುಭವಿ ಆಟಗಾರ ಆಕಾಶ್‌ ಚೋಪ್ರಾ ಹೇಳಿಕೆ
  • ಸಣ್ಣ ಫಾರ್ಮೇಟ್‌ನಲ್ಲಿ ನಡೆಯಲಿದ್ಯಾ ಐಪಿಎಲ್‌
ವರ್ಷದಲ್ಲಿ ಎರಡು ಬಾರಿ ಐಪಿಎಲ್‌! ವಿಶೇಷ ಪ್ರಾಜೆಕ್ಟ್‌ ಬಗ್ಗೆ ಆಕಾಶ್‌ ಚೋಪ್ರಾ ಹೇಳಿದ್ದೇನು? title=
Akash Chopra

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2022ರ ಹಂತವು ಇತ್ತೀಚೆಗೆ ಕೊನೆಗೊಂಡಿದೆ. ಈ ಸೀಸನ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಅಭಿಮಾನಿಗಳಿಗೆ ಸ್ಮರಣೀಯವಾಗಿತ್ತು. ಐಪಿಎಲ್ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಲೀಗ್ ಆಗಿದೆ. ಪ್ರತಿ ವರ್ಷ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರರು ಈ ಲೀಗ್‌ನಲ್ಲಿ ಆಡಲು ಬರುತ್ತಾರೆ. ಇತ್ತೀಚೆಗಷ್ಟೇ ಮಾಜಿ ಅನುಭವಿ ಆಟಗಾರರೊಬ್ಬರು ಐಪಿಎಲ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಐಪಿಎಲ್ ಅನ್ನು ವರ್ಷದಲ್ಲಿ ಒಂದಲ್ಲ ಎರಡು ಬಾರಿ ನೋಡಬಹುದು ಎಂದು ಹೇಳಿಕೆ ನೀಡಿದ್ದಾರೆ. 

ಇದನ್ನು ಓದಿ: IIFA 2022: ಕೆಂಪು ಗೌನ್‌ನಲ್ಲಿ ಮಿಂಚಿದ ದಿವ್ಯಾ ಖೋಸ್ಲಾ ಕುಮಾರ್

ಐಪಿಎಲ್ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದ್ದು, ಇದೀಗ ಈ ಪಟ್ಟಿಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೆಸರೂ ಸೇರ್ಪಡೆಯಾಗಿದೆ. ಶೀಘ್ರದಲ್ಲೇ ಒಂದು ವರ್ಷದಲ್ಲಿ ಎರಡು ಐಪಿಎಲ್‌ಗಳನ್ನು ನೋಡಲಾಗುವುದು ಮತ್ತು ಅದು ಖಚಿತ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಆಕಾಶ್ ಚೋಪ್ರಾ ಆಗಾಗ್ಗ ತಮ್ಮ ಮಾತುಗಳನ್ನು ಯೂಟ್ಯೂಬ್ ಚಾನೆಲ್‌ ಮೂಲಕ ಶೇರ್‌ ಮಾಡುತ್ತಿರುತ್ತಾರೆ. ಅಂತೆಯೇ ಐಪಿಎಲ್‌ ಬಗ್ಗೆ ಸಹ ಮಾತನಾಡಿದ್ದಾರೆ. 

ಆಕಾಶ್ ಚೋಪ್ರಾ, 'ಕಳೆದ ಕೆಲವು ಬಾರಿ ಐಪಿಎಲ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಇದು ಐಪಿಎಲ್ ಮತ್ತಷ್ಟು ಪ್ರಗತಿ ಸಾಧಿಸಿರಬಹುದು ಎಂದು ಸೂಚಿಸುತ್ತದೆ. ಈ ಯೋಜನೆ ಇದ್ದಕ್ಕಿದ್ದಂತೆ ಜಾರಿಗೆ ಬರುವುದಿಲ್ಲ. ಬದಲಿಗೆ 5 ವರ್ಷಗಳನ್ನು ತೆಗೆದುಕೊಳ್ಳಬಹುದು. ಆದರೆ ಇದು ಖಚಿತವಾಗಿ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆʼ ಎಂದು ಹೇಳಿದ್ದಾರೆ. 

ಇದನ್ನು ಓದಿ: ಬೈಕ್‌ ಸವಾರನ ಮೇಲೆ ಕೋಪ: ಸ್ಕಾರ್ಪಿಯೋ ಕಾರು ಚಾಲಕ ಮಾಡಿದ ಕೆಲಸ ನೋಡಿದ್ರೆ ದಂಗಾಗ್ತೀರಾ!

ಐಪಿಎಲ್ 2022 ರಲ್ಲಿ 10 ತಂಡಗಳು ಭಾಗವಹಿಸಿದ್ದು, 74 ಪಂದ್ಯಗಳನ್ನು ಆಯೋಜಿಸಲಾಗಿದೆ. ಒಂದು ವರ್ಷದಲ್ಲಿ ಎರಡು ಐಪಿಎಲ್ ಇದ್ದರೆ ಯಾವ ಫಾರ್ಮೆಟ್‌ನಲ್ಲಿ ಆಡಲಾಗುತ್ತದೆ ಎಂಬ ಉತ್ತರವನ್ನೂ ಆಕಾಶ್ ಚೋಪ್ರಾ ನೀಡಿದ್ದಾರೆ. ಈಗ ಐಪಿಎಲ್‌ನಲ್ಲಿ 10 ತಂಡಗಳಿರುವುದರಿಂದ ಪಂದ್ಯಗಳ ಸಂಖ್ಯೆ ತಾನಾಗಿಯೇ ಹೆಚ್ಚಲಿದೆ’ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ʼಎರಡು ಐಪಿಎಲ್ ನಡೆದರೆ, 94 ಪಂದ್ಯಗಳನ್ನು ಆಡಿಸಬಹುದು. ಆದರೆ ಈ ಪಂದ್ಯಗಳು ಸಣ್ಣ ಫಾರ್ಮೇಟ್‌ನಲ್ಲಿ ಇರಲಿದ್ದು, ಬೇಗ ಮುಗಿಯಬಹುದುʼ ಎಂದಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News