Health Care Tips : ಹಾಲು ಕುಡಿಯಬೇಡಿದ ನಂತರ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಪದಾರ್ಥಗಳನ್ನು!

ಹಾಲು ಕುಡಿದ ತಕ್ಷಣ ನಿಂಬೆ ಹಣ್ಣಿನ ಜ್ಯೂಸ್ ಅಥವಾ ರಸ ಸೇವಿಸಬೇಡಿ, ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಲು ಕುಡಿದ ತಕ್ಷಣ ನಿಂಬೆಯಿಂದ ತಯಾರಿಸಿದ ಯಾವುದನ್ನಾದರೂ ಸೇವಿಸಿದರೆ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.

Written by - Zee Kannada News Desk | Last Updated : Jun 6, 2022, 07:41 PM IST
  • ಹಾಲು ಕುಡಿದ ನಂತರ ಈ ಪದಾರ್ಥಗಳನ್ನು ಸೇವಿಸಬೇಡಿ
  • ಹಾಲು ಕುಡಿದ ತಕ್ಷಣ ನಿಂಬೆ ಹಣ್ಣಿನ ಜ್ಯೂಸ್ ಅಥವಾ ರಸ ಸೇವಿಸಬೇಡಿ
  • ಮೂಲಂಗಿಯನ್ನು ಕೂಡ ಹಾಲು ಕುಡಿದ ತಕ್ಷಣ ಸೇವಿಸಬಾರದು
Health Care Tips : ಹಾಲು ಕುಡಿಯಬೇಡಿದ ನಂತರ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಪದಾರ್ಥಗಳನ್ನು! title=

Do Not Drink Milk After Eating These Things : ಹೆಚ್ಚಾಗಿ ನಾವು ಏನನ್ನೂ ಯೋಚಿಸದೆ ಕೆಲ ಆಹಾರಗಳನ್ನು ತಿನ್ನುತ್ತೇವೆ ಇದು ನಿಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಹೌದು, ಕೆಲವು ಆಹಾರಗಳ ಕಾಂಬಿನೇಶನ್ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ. ಹಾಲು ಕುಡಿದ ನಂತರ ನೀವು ಅಪ್ಪಿತಪ್ಪಿಯೂ ಈ ಕೆಲವು ಪದಾರ್ಥಗಳನ್ನು ಸೇವಿಸಬಾರದು. ಹಾಲು ಕುಡಿದ ನಂತರ ಇವುಗಳನ್ನು ಸೇವಿಸಿದರೆ. ಈ ಪದಾರ್ಥಗಳು ಪಿತ್ತ ದೋಷವನ್ನು ಹೆಚ್ಚಿಸುತ್ತದೆ. ಇದಲ್ಲದೆ, ನೀವು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಲು ಕುಡಿದ ನಂತರ ಯಾವ ಯಾವ ಪದಾರ್ಥಗಳನ್ನು ಸೇವಿಸಬಾರದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಹಾಲು ಕುಡಿದ ನಂತರ ಈ ಪದಾರ್ಥಗಳನ್ನು ಸೇವಿಸಬೇಡಿ

ನಿಂಬೆ ಹಣ್ಣು

ಹಾಲು ಕುಡಿದ ತಕ್ಷಣ ನಿಂಬೆ ಹಣ್ಣಿನ ಜ್ಯೂಸ್ ಅಥವಾ ರಸ ಸೇವಿಸಬೇಡಿ, ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಲು ಕುಡಿದ ತಕ್ಷಣ ನಿಂಬೆಯಿಂದ ತಯಾರಿಸಿದ ಯಾವುದನ್ನಾದರೂ ಸೇವಿಸಿದರೆ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.

ಇದನ್ನೂ ಓದಿ : ಮಕ್ಕಳಿಗೆ ಅವಶ್ಯವಿರುವ ಪೌಷ್ಠಿಕಾಂಶ ನಿರ್ವಹಣೆಗೆ ಇಲ್ಲಿದೆ ತಜ್ಞರ ಸಲಹೆ

ಮೂಲಂಗಿ ಸೇವಿಸಬೇಡಿ

ಮೂಲಂಗಿಯನ್ನು ಕೂಡ ಹಾಲು ಕುಡಿದ ತಕ್ಷಣ ಸೇವಿಸಬಾರದು. ಇದು ಜೀರ್ಣಕ್ರಿಯೆ ಮತ್ತು ಚರ್ಮದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಹಾಲು ಕುಡಿದ ನಂತರವೂ ಮೂಲಂಗಿಯನ್ನು ಅಪ್ಪಿತಪ್ಪಿಯೂ ಸೇವಿಸಬಾರದು.

ಮೀನು 

ಹಾಲು ಕುಡಿಯುವ ಮೊದಲು ಅಥವಾ ನಂತರ ಮೀನು ಸೇವಿಸಬಾರದು. ಮೀನನ್ನು ಸೇವಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಹಾಲು ಕುಡಿದ ನಂತರ ಮೀನು ತಿನ್ನುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು, ಇದರ ಹೊರತಾಗಿ ನಿಮ್ಮ ಜೀರ್ಣಕ್ರಿಯೆಯೂ ತೊಂದರೆಗೊಳಗಾಗಬಹುದು.

ಹುಳಿ ಹಣ್ಣುಗಳನ್ನು ಸೇವಿಸುವುದು 

ಹಾಲು ಕುಡಿದ ತಕ್ಷಣ ಸಿಟ್ರಿಕ್ ಹಣ್ಣನ್ನು(ಹುಳಿ ಹಣ್ಣುಗಳನ್ನು) ಸೇವಿಸಬೇಡಿ. ಹಾಲು ಕುಡಿದ ತಕ್ಷಣ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ, ಕ್ಯಾಲ್ಸಿಯಂ ಹಣ್ಣಿನಲ್ಲಿರುವ ಕಿಣ್ವಗಳನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ದೇಹವು ಪೌಷ್ಟಿಕಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಲು ಕುಡಿದ ನಂತರ, ಕಿತ್ತಳೆ, ಅನಾನಸ್ ಮುಂತಾದ ಹಣ್ಣುಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು.

ಹಲಸಿನ ಹಣ್ಣು 

ಹಾಲು ಕುಡಿದ ನಂತರ ಹಲಸಿನ ಹಣ್ಣನ್ನು ಸೇವಿಸಬೇಡಿ. ಹಲಸಿನ ಹಣ್ಣನ್ನು ತಿನ್ನುವುದರಿಂದ ಚರ್ಮ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ, ಹಾಲು ಕುಡಿದ ತಕ್ಷಣ ಹಲಸು ತಿನ್ನುವುದರಿಂದ ತ್ವಚೆಯಲ್ಲಿ ದದ್ದು, ತುರಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ.

ಇದನ್ನೂ ಓದಿ : Weight Loss Tips: ಒಣದ್ರಾಕ್ಷಿ-ಬೆಲ್ಲದ ನೀರು ಸೇವನೆಯ ಈ ಆರೋಗ್ಯಕರ ಲಾಭ ನಿಮಗೆ ತಿಳಿದಿವೆಯೇ?

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News