ಮಕ್ಕಳಿಗೆ ಅವಶ್ಯವಿರುವ ಪೌಷ್ಠಿಕಾಂಶ ನಿರ್ವಹಣೆಗೆ ಇಲ್ಲಿದೆ ತಜ್ಞರ ಸಲಹೆ

Children Nutrition: ನಿಮ್ಮ ಮಗು ಆಹಾರ ಸೇವಿಸಲು ಹಠಮಾಡುವುದೇಕೆ ತಿಳಿಯಿರಿ ಮತ್ತು ಪ್ರಾರಂಭಿಕ ವರ್ಷಗಳಲ್ಲಿ ಸರಿಯಾದ ಪೋಷಣೆಯಿಂದ ಅವರು ಬೆಳೆಯುವಂತೆ ಮಾಡಿ. 

Written by - Chetana Devarmani | Last Updated : Jun 6, 2022, 05:37 PM IST
  • ಮಕ್ಕಳಿಗೆ ಅವಶ್ಯವಿರುವ ಪೌಷ್ಠಿಕಾಂಶ ನಿರ್ವಹಣೆ
  • ನಿಮ್ಮ ಮಗು ಆಹಾರ ಸೇವಿಸಲು ಹಠಮಾಡುವುದೇಕೆ ತಿಳಿಯಿರಿ
  • ಪ್ರಾರಂಭಿಕ ವರ್ಷಗಳಲ್ಲಿ ಸರಿಯಾದ ಪೋಷಣೆಯಿಂದ ಅವರು ಬೆಳೆಯುವಂತೆ ಮಾಡಿ
ಮಕ್ಕಳಿಗೆ ಅವಶ್ಯವಿರುವ ಪೌಷ್ಠಿಕಾಂಶ ನಿರ್ವಹಣೆಗೆ ಇಲ್ಲಿದೆ ತಜ್ಞರ ಸಲಹೆ  title=
ಪೌಷ್ಠಿಕಾಂಶ

Children Nutrition: ಮಕ್ಕಳ ಬೆಳವಣಿಗೆ ರೂಪುಗೊಳ್ಳುವ ವರ್ಷಗಳಲ್ಲಿ ಪೋಷಕರು ಹೆಚ್ಚು ಶ್ರಮ ನೀಡುವ ವಿಷಯಗಳಲ್ಲಿ ಪೋಷಕಾಂಶ ನಿರ್ವಹಣೆಯೂ ಒಂದು. ಆದರೆ ಗಡಿಬಿಡಿಯಲ್ಲಿ ತಿನ್ನುವ ಅಭ್ಯಾಸದಿಂದಾಗಿ, ಮಕ್ಕಳ ಆಹಾರ ಸೇವನೆ ಪೋಷಕರಿಗೆ ಬಹಳವೇ ಹತಾಶೆ ಉಂಟುಮಾಡುತ್ತದೆ. ಆರಂಭಿಕ ದಿನಗಳಲ್ಲಿ ಎದೆಹಾಲು ಸೇವನೆಯ ತೊಂದರೆ ಮತ್ತು ಆಹಾರ, ರುಚಿಯ ಆಯ್ಕೆ, ಘನ/ಅರೆ-ಘನ ಪದಾರ್ಥಗಳ ಪರಿಚಯ ತಡವಾದರೆ ಹಾಗೂ ಆಹಾರಕ್ರಮವನ್ನು ಅನುಸರಿಸಲು ಒತ್ತಾಯವಿದ್ದರೆ, ಮಕ್ಕಳಲ್ಲಿ ಈ ಗಡಿಬಿಡಿಯಲ್ಲಿ ತಿನ್ನುವ ಪ್ರವೃತ್ತಿ ಬೆಳೆಯುತ್ತದೆ.  

ನೀವು ಮಕ್ಕಳಿಗೆ ರುಚಿಯಾದ ಸಿಹಿ ಪದಾರ್ಥ ಅಥವಾ ಫಾಸ್ಟ್-ಫುಡ್ ಪದಾರ್ಥಗಳ ಆಸೆ ತೋರಿಸುವ ಮೊದಲು, ಇವೆಲ್ಲ ಏಕೆ ಆಗುತ್ತದೆ ಎಂದು ತಿಳಿಸುತ್ತೇವೆ.

ನಿಮ್ಮ ಮಗು ಗಡಿಬಿಡಿಯಲ್ಲಿ ತಿನ್ನಲು ಐದು ಕಾರಣಗಳು:

1.ರುಚಿ: ಸಾಮಾನ್ಯವಾಗಿ ಮಕ್ಕಳು ಹುಟ್ಟಿನಿಂದಲೆ ಸಿಹಿ ರುಚಿಯನ್ನುಇಷ್ಟಪಡುತ್ತಾರೆ. ದೊಡ್ಡವರಿಗೆ ಹೋಲಿಸಿದರೆ, ಅವರು ಹೆಚ್ಚಿನ ಮಟ್ಟದ ಸಿಹಿಗಾಗಿ ಹಂಬಲಿಸುತ್ತಾರೆ. ಉದಾಹರಣೆಗೆ, ತರಕಾರಿ ತಿನ್ನುವುದನ್ನು ಸಿಹಿ ಪದಾರ್ಥಗಳಷ್ಟು ಆನಂದಿಸುವುದಿಲ್ಲ. ಹಾಗಾಗಿ, ಇದು ಆರೋಗ್ಯಕರ ಆಹಾರವನ್ನು ತಿರಸ್ಕರಿಸಿ, ಗಡಿಬಿಡಿಯಲ್ಲಿ ತಿನ್ನುವ ಪ್ರವೃತ್ತಿ ಬೆಳೆಯುವಂತೆ ಮಾಡುತ್ತದೆ. ಮಕ್ಕಳು ಬೆಳೆದಂತೆ, ಕಹಿ ಅಥವಾ ಹುಳಿ ಪದಾರ್ಥಗಳನ್ನು ಪದೇ ಪದೇ ನೀಡಿದರೆ, ಅವುಗಳನ್ನು ಹೆಚ್ಚು ಇಷ್ಟಪಡಬಹುದು ಮತ್ತು ಅವುಗಳ ಜೊತೆ, ಏನಾದರೂ ಸಿಹಿ ಪದಾರ್ಥ ಇದ್ದರೆ, ರುಚಿ ನೋಡುವ ಗುಣ ಕೂಡ ವಿಕಸಿತಗೊಳ್ಳುತ್ತದೆ.  

ಇದನ್ನೂ ಓದಿ: Jackfruit: ಹಲಸು ತಿಂದ ನಂತರ ಈ ಆಹಾರಗಳನ್ನು ಸೇವಿಸಲೇಬಾರದು

2.ಆಹಾರ ಸಂಯೋಜನೆ: ನೀವು ಗಮನಿಸಿರಬಹುದು, ಟೇಬಲ್ ಮೇಲಿಟ್ಟ ಎಲ್ಲಾ ಆಹಾರಗಳ ಪೈಕಿ ನಿಮ್ಮ ಮಗು ಬ್ರೆಡ್‍ಚೂರು, ಕೇಕ್, ಬ್ರೆಡ್‍ಸ್ಟಿಕ್, ಕುರುಕುರು ತಿಂಡಿ, ಚಿಕನ್ ನಗ್ಗೆಟ್ಸ್, ಚಿಪ್ಸ್, ಇಂಥವುಗಳನ್ನು ಹೆಚ್ಚು ಇಷ್ಟಪಡುತ್ತದೆ. ಇದಕ್ಕೆ ಕಾರಣ, ಇವುಗಳನ್ನು ಅಗಿಯಲು ಮತ್ತು ನುಂಗಲು ಹೆಚ್ಚು ಶ್ರಮ ಬೇಡ;   ಇವೆಲ್ಲ ಯಾವುದೇ ಪೋಷಕಾಂಶಗಳಿರದ ಸಂಸ್ಕರಿತ ಆಹಾರ. ಚಿಕ್ಕವರು ಇವುಗಳನ್ನು ಇಷ್ಟಪಡಲು ಎರಡನೆ ಕಾರಣ, ಇವು ಸ್ಟಾರ್ಚಿ ಕಾರ್ಬೋಹೈಡ್ರೇಟ್‍ಗಳಾಗಿವೆ. ಮಗುವು ತನ್ನ ಶಕ್ತಿಯ ಮೂಲವಾಗಿ ಕಾರ್ಬೋಹೈಡ್ರೇಟನ್ನು ಗಡಿಬಿಡಿಯಲ್ಲಿಕೊಳ್ಳತ್ತದೆ.

3.ಗಮನ ಇಲ್ಲದಿರುವಿಕೆ ಮತ್ತು ಹಸಿವು: ನೀವು ಯವಾಗಲಾದರೂ ನಿಮ್ಮ ಮಗುವಿನ ಊಟ ಹಾಗೂ ತಿಂಡಿಯ ನಡುವಿನ ಅಂತರಕೊಡುವ ಬಗ್ಗೆ ಯೋಚಿಸಿದ್ದೀರಾ? ಊಟವಾದ ಸ್ವಲ್ಪ ಸಮಯದ ನಂತರವೇ ತಿಂಡಿಯನ್ನು ಕೊಡುವುದರಿಂದ ಮಕ್ಕಳು ಊಟ ಮಾಡಲು ಆಸಕ್ತಿ ತೋರದಿರಬಹುದು ಮತ್ತು ಹಸಿವಿಲ್ಲವೆಂದು ಹೇಳಬಹುದು. ಊಟ ಮತ್ತು ತಿಂಡಿಯ ಸಮಯವನ್ನು ನಿಗದಿಪಡಿಸುವುದು ಒಳ್ಳೆಯದು; ಜೊತೆಗೆ ಅವರ ಮುಂದೆ ಯಾವುದೇ ಸ್ಕ್ರೀನ್ ಇಲ್ಲದೆ. ಸ್ಕ್ರೀನ್ ನೋಡುತ್ತ ಊಟ ಮಾಡಿದರೆ, ದೊಡ್ಡವರಾದ ಮೇಲೆ ಮಕ್ಕಳು ಅವಶ್ಯಕತೆಗಿಂತ ಹೆಚ್ಚು ತಿನ್ನಬಹುದು ಅಥವಾ ಬೇಕಾದಷ್ಟು ತಿನ್ನದೆಯೂ ಇರಬಹುದು.  

4.ಬೇರೆಯವರು ತಿನ್ನಿಸಿವುದು/ಕೈತುತ್ತು(ಸ್ಪೂನ್ ಫೀಡಿಂಗ್): ಪೋಷಕರು ತಟ್ಟೆತುಂಬಾ ಬಡಿಸಿದರೆ, ಖಂಡಿತವಾಗಿಯೂ ಮಕ್ಕಳು ಹೆಚ್ಚು ತಿನ್ನುತ್ತಾರೆ. ಆದರೆ, ಮುಂಬರುವ ದಿನಗಳಲ್ಲಿ ಹೀಗಾಗುವುದು ನಮಗೆ ಬೇಕಿಲ್ಲ. ನಮ್ಮ ಮುಖ್ಯ ಉದ್ದೇಶ, ಚಿಕ್ಕ ಮಕ್ಕಳು ತಮ್ಮ ಹಸಿವನ್ನು ಮತ್ತು ಹೊಟ್ಟೆ ತುಂಬಿದ ಸ್ಥಿತಿಯನ್ನು ತಾವೇ ಅರ್ಥಮಾಡಿಕೊಳ್ಳಬೇಕು ಎಂದು. ಪೋಷಕರ ಮೇಲ್ವಿಚಾರಣೆಯಲ್ಲಿ ಅವರು ತಾವೇ ಊಟಮಾಡಿ, ಹೊಟ್ಟೆ ತುಂಬಿದ ಸ್ಥಿತಿಯನ್ನು ತಿಳಿದು, ನೆನಪಿಟ್ಟುಕೊಳ್ಳುವಂತೆ ಮಾಡುವುದು ಉತ್ತಮ. 

5.ಚಟುವಟಿಕೆಯ ಮಟ್ಟ: ನಿಮ್ಮ ಮಗು ರಜೆಯಲ್ಲಿ ಪಾರ್ಕ್ ಸುತ್ತ ಓಡಿದ್ದರೆ, ದಿನವಿಡೀ ಚಟುವಟಿಕೆಯಲ್ಲಿ ನಿರತರಾಗಿದ್ದರೆ, ಹೊಸ ಜಾಗಕ್ಕೆ ಭೇಟಿಕೊಟ್ಟು ಅಥವಾ ಹೊಸ ವಿಷಯವನ್ನು ಕಲಿಯಲು ಮೆದುಳಿಗೆ ಶ್ರಮ ನೀಡಿದ್ದರೆ, ಅದರಿಂದ ಮಗುವಿನ ಹಸಿವು ಹೆಚ್ಚುತ್ತದೆ. ಆದರೆ ಯಾವುದೇ ದೈಹಿಕ ಚಟುವಟಿಕೆಗಳಿಲ್ಲದಿದ್ದರೆ, ಯಾವಾಗಲೂ ತಿನ್ನುವಷ್ಟು ಕೂಡ ತಿನ್ನದಿರಬಹುದು. ಇದರ ಅರ್ಥ ಏನೆಂದರೆ, ಸುಸ್ತಾಗುವುದರಿಂದ ಮತ್ತು ಚಟುವಟಿಕೆಯ ಮಟ್ಟ ಮಕ್ಕಳ ಹಸಿವಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು.  

ಗಡಿಬಿಡಿಯಲ್ಲಿ ತಿನ್ನುವ ಪ್ರವೃತ್ತಿಯುಳ್ಳವರನ್ನು ಹೇಗೆ ನಿಭಾಯಿಸುವುದು:

ಗಡಿಬಿಡಿಯಲ್ಲಿ ತಿನ್ನುವ ಪ್ರವೃತ್ತಿಯಿಂದ ಕೇವಲ ಪೋಷಕರು ಹತಾಶೆಗೊಳ್ಳುವುದಷ್ಟೇ ಅಲ್ಲ, ಇದರಿಂದ ಮಕ್ಕಳಲ್ಲಿ ರೋಗನಿರೋಧಕತೆ, ನಿಗಧಿತ ತೂಕ ಮತ್ತು ಎತ್ತರ ಕಡಿಮೆಯಾಗುತ್ತದೆ.

ನೀವು ನಿಮ್ಮ ಮಗುವಿನ ಗಡಿಬಿಡಿಯಲ್ಲಿ ತಿನ್ನುವ ಪ್ರವೃತ್ತಿಯನ್ನು ನಿಭಾಯಿಸಬಹುದು ಮತ್ತು ಅವರಿಗೆ ಉತ್ತಮರೀತಿಯಲ್ಲಿ ತಿನ್ನುವ ಅಭ್ಯಾಸದ ಮಹತ್ವವನ್ನು ಈ ರೀತಿಯಲ್ಲಿ ಹೇಳಿಕೊಡಬಹುದು:

1. ಊಟದ ಸಮಯ ನಿಗದಿಪಡಿಸಿ

2. ಆರೋಗ್ಯಕರ ಆಹಾರ ಪದ್ಧತಿಯನ್ನು ಪರಿಚಯಿಸಿ ಮತ್ತು ದಿನದಲ್ಲಿ ಒಮ್ಮೆ ಒಂದು ಹೊಸ ರುಚಿ ಹಾಗೂ ಪೌಷ್ಟಿಕ ಆಹಾರವನ್ನು ಪರಿಚಯಿಸಿ 

3. ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಅಥವಾ ತೊಂದರೆ ಇಲ್ಲದಿರುವ ಜಾಗದಲ್ಲಿ ಎಲ್ಲರೂ ಒಟ್ಟಿಗೇ ಊಟ ಮಾಡುವಂತೆ ಫ್ಯಾಮಿಲಿ ಟೇಬಲ್(ಕೂಡು ಭೋಜನ) ಇರಿಸಿ 

4. ನಿಮ್ಮ ಮಗುವಿನ ಊಟದಲ್ಲಿ ಒಂದು ಪೌಷ್ಟಿಕಂಶವುಳ್ಳ ಪೂರಕ ಪದಾರ್ಥ ಅಥವಾ ಪೀಡಿಯಾಶ್ಯುರ್‍ನಂತ ಪೇಯವನ್ನು ಸೇರಿಸಬಹುದು. 37 ಪೌಷ್ಟಿಕಾಂಶವುಳ್ಳ ಇದು ಸಂಪೂರ್ಣ ಮತ್ತು ಸಮತೋಲಿತ ಪೋಷಣೆ ನೀಡುತ್ತದೆ ಹಾಗೂ ಗಡಿಬಿಡಿಯಲಿ ್ಲತಿನ್ನುವ ಪ್ರವೃತ್ತಿಯಿಂದ ಉಂಟಾದ ಪೋಷಣೆಯ ಕೊರತೆಯನ್ನು ನೀಗಿಸುತ್ತದೆ 

5. ತಿನ್ನುವುದನ್ನು ಮೋಜುಮಯಗೊಳಿಸಿ: ನೀವು ಕೊಡುವ ಉತ್ತಮ ಆಹಾರವನ್ನು ನಿಮ್ಮ ಸೃಜನಶೀಲತೆಯಿಂದ ಚೆಂದಗೊಳಿಸಿ; ರುಚಿಯಿರಬೇಕೆಂದಿಲ್ಲ. ಅವರು ಇಷ್ಟಪಡುವ ಪಾಸ್ತಾದಲ್ಲಿ ಎಲ್ಲ ತರಕಾರಿಗಳು, ತಟ್ಟೆಯಲ್ಲಿನ ಬ್ರೊಕೋಲಿ ಜೊತೆ ಹಚ್ಚಿಕೊಳ್ಳಲು ಸಾಸ್. ಊಟವು ಮೋಜಿನಿಂದ ಕೂಡುವಂತೆ ಮಾಡಿ  

ಇದನ್ನೂ ಓದಿ: Diabetes Mellitus: ಸಕ್ಕರೆ ಕಾಯಿಲೆ ಇರುವವರಿಗೆ ಈ ನೀರು ಒಂದು ವರದಾನವೇ ಇದ್ದಂತೆ

ಎಲ್ಲ ಮಕ್ಕಳಿಗೆ ಅನ್ವಯವಾಗುವ ಪೋಷಣೆಯ ಮೂಲಭೂತ ತತ್ವಗಳು; ನಿಮ್ಮ ಮಗು ಎಲ್ಲವನ್ನು ತಿನ್ನುತ್ತಾರೆಯೋ, ಗಡಿಬಿಡಿಯಲ್ಲಿ ತಿನ್ನುತ್ತಾರೋ ಅಥವಾ ಯಾವುದನ್ನಾದರು ಒಮ್ಮೆ ರುಚಿ ನೋಡುತ್ತಾರೋ, ಅವರಿಗೆ ಎಲ್ಲ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಸಿಗುವುದು ಮುಖ್ಯ. ಇದು ಅವರಿಗೆ ಆರೋಗ್ಯವಂತ ದೇಹ, ಬಲವಾದ ಮೂಳೆ ಮತ್ತು ಚುರುಕು ಬುದ್ಧಿ ಪಡೆಯಲು ಸಹಾಯಕ.

ಒಂದು ಮಗುವಿನ ಊಟದ ಪಟ್ಟಿಯಲ್ಲಿ ಈ ಎಲ್ಲ ಆಹಾರದ ವಿಧಗಳು ಮತ್ತು ಪೋಷಕಾಂಶಗಳು ಇರಬೇಕು:

1. ಪ್ರೋಟೀನ್: ಮಾಂಸಖಂಡ, ಬೇರೆ ಟಿಶ್ಯೂಗಳು ಮತ್ತು ಉತ್ತಮ ರೋಗನಿರೋಧಕ ವ್ಯವಸ್ಥೆ ಬೆಳೆಯಲು

2. ಹಣ್ಣು ಮತ್ತು ತರಕಾರಿಗಳು: ದೇಹಕ್ಕೆ ಬೇಕಾದ ನಾರು, ವಿಟಮಿನ್ ಹಾಗೂ ಮಿನರಲ್‍ಗಳ ಮೂಲ

3. ಕಾಲುಗಳು: ಕಾರ್ಬೋಹೈಡ್ರೇಟ್ ಮತ್ತು ಶಕ್ತಿಯ ಮೂಲ

4. ಕಬ್ಬಿಣ: ದೇಹದ ಪೂರ್ತಿ ಆಮ್ಲಜನಕವನ್ನು ಪೂರೈಸುವ ಮತ್ತು ಅನಿಮಿಯಾ(ರಕ್ತಹೀನತೆ) ತಡೆಯಬಲ್ಲ ಆರೋಗ್ಯಕರ ಕೆಂಪು ರಕ್ತಕಣ ತಯಾರಿಸಲು

5. ವಿಟಮಿನ್ ಡಿ: ಬಲವಾದ, ಆರೋಗ್ಯಕರ ಮೂಳೆಗಾಗಿ

6. ಕ್ಯಾಲ್ಶಿಯಂ: ಬಲವಾದ ಮೂಳೆಯನ್ನು ನಿರ್ಮಿಸಲು ಸಹಾಯಕ

7. ಒಳ್ಳೆಯ ಕೊಬ್ಬು: ಮೆದುಳು ಹಾಗೂ ನರಗಳ ಅಭಿವೃದ್ಧಿಗಾಗಿ; ಪೋಷಕಾಂಶಗಳನ್ನು ಹೀರಿಕೊಳ್ಳಲು ಕೂಡ ಸಹಾಯಕ

8. ವಿಟಮಿನ್ ಸಿ: ಉತ್ತಮ ರೋಗನಿರೋಧಕ ವ್ಯವಸ್ಥೆಗಾಗಿ, ಗಾಯ ಒಣಗುವುದಕ್ಕೆ ಮತ್ತು ಕಬ್ಬಿಣವನ್ನು ಹೀರಿಕೊಳ್ಳಲು 

ಮಕ್ಕಳ ಗಡಿಬಿಡಿಯಲ್ಲಿ ತಿನ್ನುವ ಪ್ರವೃತ್ತಿಯು ಸವಾಲಾಗಿರಬಹುದು ಆದರೆ ನಿರಾಶರಾಗಬೇಡಿ. ಏಕೆಂದರೆ ಬಹಳಷ್ಟು ಮಕ್ಕಳದ್ದು ಇದೇ ನಡವಳಕೆ. ಕೇವಲ ಆರೋಗ್ಯಕರ ಆಹಾರದ ಆಯ್ಕೆಗಳನ್ನೇ ಕೊಡಿ ಮತ್ತು ಸಮಯ ಕಳೆದಂತೆ ನಿಮ್ಮ ಮಗುವಿನ ಹಸಿವು ಹಾಗೂ ಆಹಾರ ಸೇವಿಸುವ ಕ್ರಮ ವಿಕಸನಗೊಳ್ಳುತ್ತದೆ

- ಲೇಖಕರು: ಡಾ. ಗಣೇಶ್ ಕಾಧೆ, ಸಹಾಯಕ ನಿರ್ದೇಶಕರು, ವೈದ್ಯಕೀಯ ಮತ್ತು ವಿಜ್ಞಾನ ವ್ಯವಹಾರಗಳು, ಅಬ್ಬಾಟ್ ನ ನ್ಯುಟ್ರಿಷನ್ ಬ್ಯುಸಿನೆಸ್ (ಮೆಡಿಕಲ್ ಅಂಡ್ ಸೈಂಟಿಫಿಕ್ ಅಫೇರ್ಸ್ ಎಟ್ ಅಬ್ಬಾಟ್ ನ  ನ್ಯುಟ್ರಿಷನ್ ಬ್ಯುಸಿನೆಸ್)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News