ಹಳದಿ ಹಲ್ಲುಗಳಿಂದ ಉಪಶಮನಬೇಕೇ? ಹಾಗಾದ್ರೆ ಈ ಮನೆಮದ್ದು ಟ್ರೈ ಮಾಡಿ

ಕೆಲವರಿಗೆ ಹಲ್ಲುಜ್ಜದೆ ಟೀ ಬಿಸ್ಕತ್ ತಿನ್ನುವ ಅಭ್ಯಾಸವಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಹಲ್ಲುಗಳು ಹುಳುಕಾಗಲು ಪ್ರಾರಂಭಿಸುತ್ತೀರಿ. ಆದ್ದರಿಂದ ನೀವು ಎದ್ದ ತಕ್ಷಣ ಯಾವಾಗಲೂ ಬ್ರಷ್ ಮಾಡಬೇಕು.

Written by - Bhavishya Shetty | Last Updated : Jun 11, 2022, 02:21 PM IST
  • ಹಳದಿ ಹಲ್ಲುಗಳಿಂದ ನಿಮಗೆ ನಗಲು ಕಷ್ಟವಾಗುತ್ತದೆಯೇ?
  • ಹೆಚ್ಚಿನ ಜನರಿಗೆ ಹಳದಿ ಹಲ್ಲುಗಳ ಸಮಸ್ಯೆ ಇರುತ್ತದೆ
  • ನಿಮ್ಮ ಹಲ್ಲುಗಳು ಮುತ್ತುಗಳಂತೆ ಹೊಳೆಯಲು ಇಲ್ಲಿದೆ ಸಲಹೆ
ಹಳದಿ ಹಲ್ಲುಗಳಿಂದ ಉಪಶಮನಬೇಕೇ? ಹಾಗಾದ್ರೆ ಈ ಮನೆಮದ್ದು ಟ್ರೈ ಮಾಡಿ title=
Yellow Teeth

ಬದಲಾಗುತ್ತಿರುವ ಜೀವನಶೈಲಿಯಲ್ಲಿ, ಹೆಚ್ಚಿನ ಜನರಿಗೆ ಹಳದಿ ಹಲ್ಲುಗಳ ಸಮಸ್ಯೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆ ಸಮಸ್ಯೆಗಳನ್ನು ಎದುರಿಸಲು ಎಲ್ಲಾ ರೀತಿಯ ಸಲಹೆಗಳನ್ನು ಪಡೆದುಕೊಂಡಿರುತ್ತೇವೆ. ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬಂದಿರುವುದಿಲ್ಲ. ಹೀಗಾಗಿ ನಾವು ಕೆಲ ಮನೆಮದ್ದುಗಳ ಬಗ್ಗೆ ತಿಳಿಸಿಕೊಡುತ್ತೇವೆ. ಹಳದಿ ಹಲ್ಲುಗಳಿಂದ ನಿಮಗೆ ನಗಲು ಕಷ್ಟವಾಗಿದ್ದರೆ ಅಥವಾ ಜನರ ಮುಂದೆ ಬಾಯಿ ತೆರೆದು ಮಾತನಾಡಲು ನಾಚಿಕೆಯಾಗುತ್ತಿದೆಯೇ? ಇಲ್ಲಿರುವ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಹಲ್ಲುಗಳು ಮುತ್ತುಗಳಂತೆ ಹೊಳೆಯಲು ಪ್ರಾರಂಭಿಸುತ್ತದೆ. 

ಇದನ್ನೂ ಓದಿ: ವಾಟ್ಸ್ ಆಪ್ ನಿಂದ ಜಬರ್ದಸ್ತ್ ಕ್ಯಾಶ್ ಬ್ಯಾಕ್ ಕೊಡುಗೆ, 1 ರೂ. ಕಳುಹಿಸಿ 35 ರೂ. ಪಡೆಯಿರಿ

ಪ್ರತಿದಿನ ಬ್ರಷ್: ಕೆಲವರಿಗೆ ಹಲ್ಲುಜ್ಜದೆ ಟೀ ಬಿಸ್ಕತ್ ತಿನ್ನುವ ಅಭ್ಯಾಸವಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಹಲ್ಲುಗಳು ಹುಳುಕಾಗಲು ಪ್ರಾರಂಭಿಸುತ್ತೀರಿ. ಆದ್ದರಿಂದ ನೀವು ಎದ್ದ ತಕ್ಷಣ ಯಾವಾಗಲೂ ಬ್ರಷ್ ಮಾಡಬೇಕು. ಇದರೊಂದಿಗೆ ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದು ತಪ್ಪುತ್ತದೆ. 

ಲವಂಗದ ಪುಡಿ: ಲವಂಗದ ಪುಡಿಯಿಂದ ಹಳದಿ ಹಲ್ಲುಗಳನ್ನು ಬಿಳಿಯಾಗಿಸಬಹುದು. ಇದಕ್ಕಾಗಿ, ನೀವು ಲವಂಗದ ಪುಡಿಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಹಲ್ಲುಗಳನ್ನು ಉಜ್ಜಬೇಕು. ಇದು ಬಾಯಿಯ ದುರ್ವಾಸನೆಯನ್ನೂ ಕಡಿಮೆ ಮಾಡುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ.

ನಿಂಬೆ ರಸ : ನಿಂಬೆ ರಸ ಕೂಡ ನಿಮಗೆ ಸಹಾಯ ಮಾಡಬಹುದು. ನಿಂಬೆ ರಸದಲ್ಲಿ ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಬೆರೆಸಿ ಪೇಸ್ಟ್ ತಯಾರಿಸಬೇಕು. ಇದರ ಮೂಲಕ ಹಲ್ಲುಜ್ಜಿದರೆ ಹಳದಿ ಹಲ್ಲುಗಳು ಬಿಳಿಯಾಗಲು ಪ್ರಾರಂಭಿಸುತ್ತವೆ.

ಆಪಲ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು ಸಹ ಸಹಾಯ ಮಾಡುತ್ತದೆ. ಅರ್ಧ ಟೀಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಕಪ್ ನೀರಿನಲ್ಲಿ ಬೆರೆಸಬೇಕು. ಇದರಿಂದ ನಿಧಾನವಾಗಿ ಬ್ರಷ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಹಲ್ಲುಗಳ ಹಳದಿ ಬಣ್ಣವು ಬೇಗನೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ: Indian Railways: ರೈಲ್ವೆಯಿಂದ ಹೊಸ ಸೇವೆ, ಈಗ ನಿಮಗೆ ಶೀಘ್ರವೇ ದೃಢೀಕೃತ ಸೀಟು ಸಿಗಲಿದೆ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News