ಇಂಥಹ ಎರಡು ರೂಪಾಯಿ ನೋಟು ಇದ್ದರೆ ಕುಳಿತಲ್ಲೇ ಸಿಗಲಿದೆ ಲಕ್ಷ ಲಕ್ಷ ರೂಪಾಯಿ..! ನಿಮ್ಮ ಬಳಿಯೂ ಇದೆಯೇ ಒಮ್ಮೆ ನೋಡಿಕೊಳ್ಳಿ

ಮಾಧ್ಯಮಗಳ ವರದಿ ಪ್ರಕಾರ, 2 ರೂಪಾಯಿಯ ಈ ವಿಶೇಷ ನೋಟಿನ ವಿಶೇಷತೆ ಏನೆಂದರೆ ಅದರ ಮೇಲೆ '786' ಎಂದು ಬರೆದಿರಬೇಕು. ಇದಲ್ಲದೆ, ಈ ನೋಟು  ಗುಲಾಬಿ ಬಣ್ಣದ್ದಾಗಿರಬೇಕು.

Written by - Ranjitha R K | Last Updated : Jun 15, 2022, 08:52 AM IST
  • ಹಳೆಯ ಎರಡು ರೂ. ನೋಟ್ ಇದ್ದರೆ ಕುಳಿತಲ್ಲಿಯೇ ಮಿಲಿಯನೇರ್ ಆಗಬಹುದು.
  • ಆನ್ ಲೈನ್ ನಲ್ಲಿ 5 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದೆ ನೋಟು
  • ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಹೀಗಿದೆ
ಇಂಥಹ ಎರಡು ರೂಪಾಯಿ ನೋಟು ಇದ್ದರೆ ಕುಳಿತಲ್ಲೇ ಸಿಗಲಿದೆ  ಲಕ್ಷ ಲಕ್ಷ ರೂಪಾಯಿ..! ನಿಮ್ಮ ಬಳಿಯೂ ಇದೆಯೇ ಒಮ್ಮೆ ನೋಡಿಕೊಳ್ಳಿ    title=
old note sale (file photo)

ಬೆಂಗಳೂರು : ನಿಮ್ಮ ಕಲೆಕ್ಷನ್ ಬಾಕ್ಸ್ ನಲ್ಲಿ ಅಥವಾ ಪರ್ಸ್ ನಲ್ಲಿ ಹಳೆಯ  ಎರಡು ರೂಪಾಯಿಯ ನೋಟ್ ಇದ್ದರೆ ಕುಳಿತಲ್ಲಿಯೇ ಮಿಲಿಯನೇರ್ ಆಗಬಹುದು.  ಹೌದು ಕೇವಲ ಎರಡು ರೂಪಾಯಿ ನೋಟುಗಳಿಂದ ರಾತ್ರೋರಾತ್ರಿ ಶ್ರೀಮಂತರಾಗಬಹುದು. ಅದಕ್ಕಾಗಿ, ನಿಮ್ಮಲ್ಲಿರುವ ಹಳೆಯ ಎರಡು ರೂಪಾಯಿ ನೋಟುಗಳು ಕೆಲವು ಮಾನದಂಡಗಳಿಗೆ ಹೊಂದಿಕೆಯಾಗುತ್ತವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಮಾಧ್ಯಮ ವರದಿಗಳ ಪ್ರಕಾರ, ಎರಡು ರೂಪಾಯಿಯ ನೋಟುಗಳು ಆನ್ ಲೈನ್ ನಲ್ಲಿ  5 ಲಕ್ಷ ರೂ.ವರೆಗೆ ಹರಾಜಾಗಿದೆ. ನೋಟುಗಳ ಮಾರಾಟ ಮತ್ತು ನೋಟುಗಳ ಖರೀದಿಗಾಗಿ ಅತಿ ಹೆಚ್ಚು ಪ್ರೀಮಿಯಂನಲ್ಲಿ ವ್ಯವಹರಿಸುವ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.

ಮಾಧ್ಯಮಗಳ ವರದಿ ಪ್ರಕಾರ, 2 ರೂಪಾಯಿಯ ಈ ವಿಶೇಷ ನೋಟಿನ ವಿಶೇಷತೆ ಏನೆಂದರೆ ಅದರ ಮೇಲೆ '786' ಎಂದು ಬರೆದಿರಬೇಕು. ಇದಲ್ಲದೆ, ಈ ನೋಟು  ಗುಲಾಬಿ ಬಣ್ಣದ್ದಾಗಿರಬೇಕು. ಅಲ್ಲದೆ, ಈ ನೋಟು ಆರ್‌ಬಿಐ ಮಾಜಿ ಗವರ್ನರ್ ಮನಮೋಹನ್ ಸಿಂಗ್ ಅವರ ಸಹಿಯನ್ನು ಹೊಂದಿರಬೇಕು. ಇಷ್ಟಿದ್ದರೆ ಸಾಲದು. ನಿಮ್ಮಲ್ಲಿರುವ ಹಳೆಯ ನೋಟುಗಳನ್ನು ಯಾವ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಬಹುದು ಎನ್ನುವುದು ಕೂಡಾ ತಿಳಿದಿರಬೇಕು. Quickr, Olx ಅಥವಾ eBay ನಂತಹ ವೆಬ್‌ಸೈಟ್‌ಗಳಲ್ಲಿ ಹಳೆಯ ಭಾರತೀಯ ಕರೆನ್ಸಿ ನೋಟುಗಳನ್ನು ಮಾರಾಟ ಮಾಡಬಹುದು. 

ಇದನ್ನೂ ಓದಿ : Gold Silver Price: ಚಿನ್ನ-ಬೆಳ್ಳಿಯ ಬೆಲೆಯಲ್ಲಿ ಭಾರೀ ಕುಸಿತ

ಮಾರಾಟ ಅಥವಾ ಖರೀದಿಸುವ ಪ್ರಕ್ರಿಯೆ ಏನು?
1.ನೀವು ಮಾರಾಟ ಮಾಡಲು ಬಯಸುವ ನೋಟಿನ ಸ್ಪಷ್ಟ ಚಿತ್ರವನ್ನು ತೆಗೆದುಕೊಳ್ಳಿ.
2. eBay, Quickr ಅಥವಾ Olx ಗೆ ಅಪ್‌ಲೋಡ್ ಮಾಡಿ. 
3. ಕಂಪನಿಯು ಈ ನೋಟಿನ ಬಗ್ಗೆ ಜಾಹೀರಾತನ್ನು ಒದಗಿಸುತ್ತದೆ.
4.ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸಲು ಬಯಸುವ ಆಸಕ್ತರು, ಜಾಹೀರಾತು ಬಿಡುಗಡೆಯಾದ ನಂತರ ನಿಮ್ಮನ್ನು ಸಂಪರ್ಕಿಸುತ್ತಾರೆ.
5. ಅವರೊಡನೆ ಮಾತುಕತೆ ನಡೆಸಿ ಡೀಲ್ ಇತ್ಯರ್ಥ ಮಾಡಿಕೊಳ್ಳಬಹುದು. 
 
ಹಳೆಯ ನೋಟುಗಳು ಮತ್ತು ನಾಣ್ಯಗಳ ಆನ್‌ಲೈನ್ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ, ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ಸಂದೇಶವನ್ನು ನೀಡಿತ್ತು. ಹಳೆಯ ನೋಟು ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಆರ್ ಬಿಐ ಸಾರ್ವಜನಿಕರಿಂದ ಸುಂಕ/ಕಮಿಷನ್/ತೆರಿಗೆಯನ್ನು ಪಡೆಯುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿತ್ತು. ಅಲ್ಲದೆ ಈ ವ್ಯವಹಾರಗಳಿಗೂ , ಆರ್ ಬಿಐಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವುದನ್ನು ಕೂಡಾ ಹೇಳಿತ್ತು.  

ಇದನ್ನೂ ಓದಿ : PM Kisan Yojana: ರೈತರು ಈ ತಪ್ಪು ಮಾಡಿದ್ದರೆ ಹಿಂದಿರುಗಿಸಬೇಕಾಗುತ್ತದೆ ಪಿಎಂ ಕಿಸಾನ್ ಹಣ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News