SBI ಗ್ರಾಹಕರಿಗೆ ಭಾರಿ ಸಂತಸದ ಸುದ್ದಿ, FD ಬಡ್ಡಿ ದರಗಳಲ್ಲಿ ಹೆಚ್ಚಳ

SBI FD Rates 2022: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 211 ರಿನಗಳಿಂದ 3 ವರ್ಷಕ್ಕಿಂತ ಕಡಿಮೆ ಅವಧಿ ಎಫ್ ಡಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮುಂದುವರೆದ ಅನಿಶ್ಚಿತ ವಾತಾವರಣದ ಹಿನ್ನೆಲೆ, ಹೂಡಿಕೆದಾರರಿಗೆ ಎಫ್ ಡಿಯಲ್ಲಿ ಹೂಡಿಕೆ ಮತ್ತಷ್ಟು ಆಕರ್ಷಕವಾಗಲಿದೆ.   

Written by - Nitin Tabib | Last Updated : Jun 17, 2022, 05:44 PM IST
  • ತನ್ನ ಗ್ರಾಹಕರಿಗೆ ಭಾರಿ ಸಂತಸದ ಸುದ್ದಿ ನೀಡಿದ ಎಸ್ಬಿಐ
  • ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್
  • ಎಷ್ಟು ಅವಧಿಯ ಸ್ಥಿರ ಠೇವಣಿ ಮೇಲೆ ಎಷ್ಟು ಬಡ್ಡಿ
SBI ಗ್ರಾಹಕರಿಗೆ ಭಾರಿ ಸಂತಸದ ಸುದ್ದಿ, FD ಬಡ್ಡಿ ದರಗಳಲ್ಲಿ ಹೆಚ್ಚಳ title=
SBI Interest Rate Hike

SBI FD Rates 2022: ದುಬಾರಿಯಾಗುತಿರುವ ಬ್ಯಾಂಕ್ ಸಾಲಗಳ ಜೊತೆಗೆ ಇದೀಗ ಬ್ಯಾಂಕ್‌ಗಳು ತಮ್ಮ ಠೇವಣಿಗಳ ಮೇಲಿನ ಬಡ್ಡಿದರವನ್ನೂ ಹೆಚ್ಚಿಸುತ್ತಿವೆ. ಇತ್ತೀಚಿಗೆ, ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ, 211 ದಿನಗಳಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಯ  ವಿವಿಧ ಮೆಚ್ಯೂರಿಟಿ ಹೊಂದಿರುವ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಇದರಿಂದ, ಮಾರುಕಟ್ಟೆಯಲ್ಲಿ ಮುಂದುವರೆದಿರುವ ಅನಿಶ್ಚಿತತ ವಾತಾವರಣದ ಈ ಕಾಲದಲ್ಲಿ ಲ್ಲಿ ಹೂಡಿಕೆದಾರರಿಗೆ FD ಗಳಲ್ಲಿ ಹೂಡಿಕೆ ಮಾಡುವುದು ಎಂದಿಗಿಂತಲೂ ಹೆಚ್ಚು ಆಕರ್ಷಕವಾಗಲಿದೆ. ದೊಡ್ಡ ವಾಣಿಜ್ಯ ಬ್ಯಾಂಕ್ ಎಸ್‌ಬಿಐನಲ್ಲಿ ವಿವಿಧ ಮೆಚ್ಯೂರಿಟಿ ಅವಧಿಯ ಠೇವಣಿಗಳ ಮೇಲೆ ಎಷ್ಟು ಬಡ್ಡಿ ಲಾಭ ನೀಡುತ್ತಿದೆ  ತಿಳಿದುಕೊಳ್ಳೋಣ ಬನ್ನಿ.

SBI FD: 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  211 ದಿನಗಳು ಮತ್ತು 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ವಾರ್ಷಿಕ ಶೇ.4.40ರಿಂದ ಶೇ.4.60ಕ್ಕೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಬಡ್ಡಿದರವನ್ನು ಶೇ.4.90ರಿಂದ ಶೇ.5.10ಕ್ಕೆ ಹೆಚ್ಚಿಸಿದೆ. ಈ ರೀತಿಯಾಗಿ, ಬ್ಯಾಂಕ್ ಗ್ರಾಹಕರು ಇದೀಗ ಈ ಮೆಚ್ಯೂರಿಟಿ ಅವಧಿಯ ಫಿಕ್ಸೆಡ್ ಡಿಪಾಸಿಟ್ ಮೇಲೆ 20 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ. 

ಇದನ್ನೂ ಓದಿ-Nitin Gadkari Master Plan: ತಪ್ಪಾದ ಜಾಗಗಳಲ್ಲಿ ಪಾರ್ಕ್ ಆದ ವಾಹನಗಳ ಫೋಟೋ ಕಳುಹಿಸುವವರಿಗೆ 500 ರೂ. ಬಹುಮಾನ !

SBI FD: 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿ
ಎಸ್‌ಬಿಐ 1 ವರ್ಷದ ಮತ್ತು 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ವಾರ್ಷಿಕ ಶೇ.5.10ರಿಂದ ಶೇ.5.30ಕ್ಕೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಬಡ್ಡಿದರವನ್ನು ಶೇ.5.60ರಿಂದ ಶೇ.5.80ಕ್ಕೆ ಹೆಚ್ಚಿಸಲಾಗಿದೆ. ಈ ರೀತಿಯಾಗಿ, ಗ್ರಾಹಕರು ಇನ್ಮುಂದೆ ಈ ಮೆಚ್ಯೂರಿಟಿ ಅವಧಿಯ FD ಮೇಲೆ 20 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿಯನ್ನು ಪಡೆಯಲಿದ್ದಾರೆ. 

ಇದನ್ನೂ ಓದಿ-RBI Mastercard Onboarding: ಮಾಸ್ಟರ್‌ಕಾರ್ಡ್ ಮೇಲಿನ ನಿಷೇಧವನ್ನು ತೆಗೆದುಹಾಕಿದ ಆರ್‌ಬಿಐ

SBI FD: 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ
ಎಸ್‌ಬಿಐ 2 ವರ್ಷ ಪೂರ್ಣಗೊಂಡ ಮತ್ತು 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ವಾರ್ಷಿಕ ಶೇ.5.20ರಿಂದ ಶೇ.5.35ಕ್ಕೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಬಡ್ಡಿದರವನ್ನು ಶೇ.5.70ರಿಂದ ಶೇ.5.85ಕ್ಕೆ ಹೆಚ್ಚಿಸಲಾಗಿದೆ. ಈ ರೀತಿಯಾಗಿ, ಗ್ರಾಹಕರು ಇದೀಗ ಈ ಮೆಚ್ಯೂರಿಟಿ ಅವಧಿಯ ಸ್ಥಿರ ಠೇವಣಿ ಮೇಲೆ 15 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿಯನ್ನು ಪಡೆಯಲಿದ್ದಾರೆ. ಹೊಸ ದರಗಳು ಜೂನ್ 14, 2022 ರಿಂದ 2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲೆ ಅನ್ವಯಿಸಲಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News