ಬೆಂಗಳೂರು: 2021-2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟವಾಗಿದೆ. ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ದ್ವಿತೀಯ ಸ್ಥಾನ ಮತ್ತು ವಿಜಯಪುರ 3ನೇ ಸ್ಥಾನ ಪಡೆದುಕೊಂಡಿದೆ. ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಪರೀಕ್ಷೆಗೆ ಒಟ್ಟು 6,83,563 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 4.22,966(ಶೇ.61.88) ಇದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಶೇ.88.02ರಷ್ಟು, ಉಡುಪಿ ಜಿಲ್ಲೆಯ ಶೇ.86.38ರಷ್ಟು ಹಾಗೂ ವಿಜಯಪುರದ ಶೇ.77.14ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.
ಶೇ.61.88 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.
ಉತ್ತೀರ್ಣ ಪ್ರಮಾಣ:
ಬಾಲಕಿಯರು: ಶೇ.68.72
ಬಾಲಕರು: ಶೇ.55.226,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
4,22,966 ವಿದ್ಯಾರ್ಥಿಗಳು ಉತ್ತೀರ್ಣ.
ಪೂರಕ ಪರೀಕ್ಷೆ ದಿನಾಂಕವನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುವುದು.#PUCResults
— B.C Nagesh (@BCNagesh_bjp) June 18, 2022
ಇದನ್ನೂ ಓದಿ: Karnataka 2nd PUC ಅಂಕಪಟ್ಟಿ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ
ವಿಜ್ಞಾನ ವಿಭಾಗದ ಶೇ.72.53ರಷ್ಟು ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ ಶೇ.64.97ರಷ್ಟು ಹಾಗೂ ಕಲಾ ವಿಭಾಗದಲ್ಲಿ ಶೇ.48.71ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಶೇ.0.6 ರಷ್ಟು ಫಲಿತಾಂಶ ಏರಿಕೆ ಆಗಿದ್ದು, ಆಗಸ್ಟ್ 1ಕ್ಕೆ ಪಿಯು ಪೂರಕ ಪರೀಕ್ಷೆ ನಡೆಯಲಿದೆ ಎಂದು ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.
ದ್ವಿತೀಯ ಪಿಯು ಫಲಿತಾಂಶವನ್ನು
ಇಲಾಖೆಯ ವೆಬ್ಸೈಟ್ನಲ್ಲಿ https://t.co/j1ntn8hcEF ನೋಡಬಹುದು.
ಇಂದು ಮಧ್ಯಾಹ್ನ 12 ಗಂಟೆಯಿಂದ ಫಲಿತಾಂಶ ಲಭ್ಯವಾಗಲಿದೆ. ಶುಭವಾಗಲಿ. 💐#PUCResults— B.C Nagesh (@BCNagesh_bjp) June 18, 2022
ಕಲಾ ವಿಭಾಗದ ಟಾಪರ್ಸ್
- ಶ್ವೇತಾ ಭೀಮಾಶಂಕರ್ ಭೈರಗೊಂಡ ಬಳ್ಳಾರಿ – 594 ಅಂಕ
- ವಿಜಯನಗರದ ಕೊಟ್ಟೂರಿನ ಮಡಿವಾಳರ ಸಹನಾ – 594 ಅಂಕ
ವಾಣಿಜ್ಯ ವಿಭಾಗದಲ್ಲಿ 4 ವಿದ್ಯಾರ್ಥಿಗಳಿಗೆ ಮೊದಲ ರ್ಯಾಂಕ್
- ನೀಲು ಸಿಂಗ್, ಬಿಜಿಎಸ್ ಪಿಯು ಕಾಲೇಜ್ ಬೆಂಗಳೂರು - 596 ಅಂಕ
- ಆಕಾಶ್ ದಾಸ್, ಸೆಂಟ್ ಕ್ಲಾರೆಂಟ್ ಪಿಯು ಕಾಲೇಜ್ ಬೆಂಗಳೂರು -596 ಅಂಕ
- ನೇಹಾ ಬಿಆರ್, SBGNS ಪಿಯು ಕಾಲೇಜ್ ಚಿಕ್ಕಬಳ್ಳಾಪುರ - 596 ಅಂಕ
- ಮಾನವ್ ವಿನಯ್ ಕೇಜ್ರಿವಾಲ್, ಜೈನ್ ಪಿಯು ಕಾಲೇಜ್ ಬೆಂಗಳೂರು – 596 ಅಂಕ
ಇನ್ನು ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಆರ್.ವಿ ಪಿಯು ಕಾಲೇಜಿನ ವಿದ್ಯಾರ್ಥಿ ಸಿರ್ಮನ್ ಶೇಷಾ ರಾವ್ 598 ಅಂಕಗಳನ್ನು ಗಳಿಸುವ ಮೂಲಕ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Textbook Revision Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಇಂದು ಬೃಹತ್ ಪ್ರತಿಭಟನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.