ಮುಂಬೈ: ಸಚಿವ ಮತ್ತು ಶಿವಸೇನಾ ನಾಯಕ ಏಕನಾಥ್ ಶಿಂಧೆ ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ನಲ್ಲಿರುವ ಹೋಟೆಲ್‌ಗೆ 21 ಇತರ ಶಾಸಕರೊಂದಿಗೆ ತೆರಳಿದ್ದಾರೆಂದು ವರದಿಯಾದ ನಂತರ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರವು ಇಕ್ಕಟ್ಟಿಗೆ ಸಿಲುಕಿದೆ. ಇದು ‘ಮಹಾ ಸರ್ಕಾರ’ದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಇಂದು(ಜೂ.21)ಸಂಜೆಯ ವೇಳೆಗೆ ಮಹಾರಾಷ್ಟ್ರ ಸರ್ಕಾರ ಪತನವಾಗಿ, ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಪ್ರಸ್ತುತ ಏಕನಾಥ್ ಶಿಂಧೆ ಜೊತೆಗೆ ಸೂರತ್‌ನಲ್ಲಿ 29 ಶಿವಸೇನಾ ಶಾಸಕರಿದ್ದಾರೆ. ನಾವು ಕಾಂಗ್ರೆಸ್-ಎನ್‍ಸಿಪಿಯನ್ನು ಬೆಂಬಲಿಸುವುದಿಲ್ಲವೆಂದು ಈ ಶಾಸಕರು ರಾಜ್ಯಪಾಲರಿಗೆ ಪತ್ರ ನೀಡಬಹುದು. ಆದರೆ, ಈ ಪತ್ರದಲ್ಲಿ ಶಿವಸೇನಾ ಹೆಸರನ್ನು ತೆಗೆದುಕೊಳ್ಳಲಾಗುವುದಿಲ್ಲವೆಂದು ಹೇಳಲಾಗುತ್ತಿದೆ.
Shiv Sena leaders met the Deputy Speaker of Maharashtra Assembly Narhari Zirwal and handed over him a letter requesting to remove Eknath Shinde from the Legislative party leader's post and replace him with Ajay Chaudhary as Shiv Sena Legislative party leader. pic.twitter.com/95075UHVy9
— ANI (@ANI) June 21, 2022
ಇದನ್ನೂ ಓದಿ: Venkaiah Naidu: ಎಂ.ವೆಂಕಯ್ಯ ನಾಯ್ಡು ಮುಂದಿನ ರಾಷ್ಟ್ರಪತಿ..?
ಇದಲ್ಲದೆ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸಭೆಯಲ್ಲಿ ಪ್ರಸ್ತುತ ಹಾಜರಿರುವ 7 ಶಾಸಕರು ಏಕನಾಥ್ ಶಿಂಧೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಸೋಮವಾರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ. ಈ ನಡುವೆ ‘ಮಹಾ ಸರ್ಕಾರ’ದಲ್ಲಿ ನಂಬರ್ ಗೇಮ್ ಶುರುವಾಗಿದೆ.
‘ಮಹಾ ಸರ್ಕಾರ’ದ ನಂಬರ್ ಗೇಮ್ ಹೀಗಿದೆ ನೋಡಿ
Gujarat | Shiv Sena leaders Milind Narvekar and Ravi Pathak leave from Le Meridien hotel in Surat after meeting Shiv Sena leaders who are staying there. pic.twitter.com/NIKlJTuQ8E
— ANI (@ANI) June 21, 2022
- ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಸಂಖ್ಯಾಬಲ 288. ಒಬ್ಬ ಶಾಸಕರ ಸಾವಿನೊಂದಿಗೆ ಈ ಸಂಖ್ಯೆ 287ಕ್ಕೆ ಇಳಿದಿದೆ. ಇದರರ್ಥ ವಿಧಾನಸಭೆಯಲ್ಲಿ ವಿಶ್ವಾಸ ಮತದ ಸಂದರ್ಭದಲ್ಲಿ ಮ್ಯಾಜಿಕ್ ನಂಬರ್ 144 ಆಗಲಿದೆ.
- ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್‌ನ ಮಹಾ ವಿಕಾಸ್ ಅಘಾಡಿ ಸರ್ಕಾರವು ಪ್ರಸ್ತುತ 152 ಶಾಸಕರನ್ನು ಹೊಂದಿದೆ.
- ಶಿವಸೇನೆ 55 ಶಾಸಕರನ್ನು ಹೊಂದಿದೆ. ಈ ಪೈಕಿ 21 ಶಾಸಕರು ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿ ಸೂರತ್ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ಏಕನಾಥ್ ಶಿಂಧೆ ನೇತೃತ್ವದ ಈ ಶಾಸಕರು ರಾಜೀನಾಮೆ ನೀಡಿದರೆ, ಶಿವಸೇನೆಯ ಸಂಖ್ಯೆ 34ಕ್ಕೆ ಇಳಿಯುತ್ತದೆ.
- ಇದು ಸದನದಲ್ಲಿ ಮಹಾ ವಿಕಾಸ್ ಅಘಾಡಿ ಬಲವನ್ನು 131ಕ್ಕೆ ಇಳಿಸುತ್ತದೆ. 22 ಶಾಸಕರು ರಾಜೀನಾಮೆ ನೀಡುವುದರೊಂದಿಗೆ, ಸದನದಲ್ಲಿ ಹೊಸ ಮ್ಯಾಜಿಕ್ ನಂಬರ್‍ನ ಸಂಖ್ಯೆ 133 ಆಗಲಿದೆ.
- ಬಿಜೆಪಿ ಈಗ ಬಹುಮತಕ್ಕಿಂತ ಹೆಚ್ಚು ಅಂದರೆ 135 ಶಾಸಕರ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಏಕನಾಥ್ ಶಿಂಧೆ ಜೊತೆಗಿರುವ 21 ಶಿವಸೇನಾ ಶಾಸಕರು ಪಕ್ಷ ತೊರೆಯಲು ನಿರ್ಧರಿಸಿದರೆ, ಅವರು ಪಕ್ಷಾಂತರ ವಿರೋಧಿ ಕಾನೂನಿನಡಿ ರಾಜೀನಾಮೆ ನೀಡಬೇಕು ಮತ್ತು ಉಪಚುನಾವಣೆಯಲ್ಲಿ ಮತ್ತೆ ಆಯ್ಕೆಯಾಗಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.