ನವದೆಹಲಿ: ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ 27 ನೇ ವಯಸ್ಸಿನಲ್ಲಿ ಟಾನ್ಸಿಲ್ಗಳನ್ನು ತೆಗೆದುಹಾಕಲು ವಾಡಿಕೆಯ ಶಸ್ತ್ರಚಿಕಿತ್ಸೆಯ ನಂತರ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದಿಂದ ನಿಧನರಾದರು.
ಇಂಡಿಪೆಂಡೆಂಟ್ ವರದಿ ಪ್ರಕಾರ, 2018 ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟವನ್ನು ಧರಿಸಿದ್ದ ಕೊರಿಯಾ ಅವರು ಸೋಮವಾರ ಖಾಸಗಿ ಕ್ಲಿನಿಕ್‌ನಲ್ಲಿ ನಿಧನರಾಗಿದ್ದಾರೆ.
ಕಳೆದ ಎರಡು ತಿಂಗಳಿಂದ ಆಕೆ ಕೋಮಾ ಸ್ಥಿತಿಯಲ್ಲಿದ್ದ ಅವರು ಟಾನ್ಸಿಲ್‌ಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.ಆದರೆ ಕೆಲವು ದಿನಗಳ ನಂತರ ಭಾರೀ ರಕ್ತಸ್ರಾವವಾಗಿದ್ದರಿಂದಾಗಿ ಏಪ್ರಿಲ್ 4ರಂದು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ.ಕೊರಿಯಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಪರೀಕ್ಷಕರಿಗೆ ಕಳುಹಿಸಲಾಗಿದೆ.
ಇದೇ ವೇಳೆ ವಾಷಿಂಗ್ಟನ್ ಪೋಸ್ಟ್ ಜೊತೆ ಮಾತನಾಡುತ್ತಾ, ಕುಟುಂಬದ ಪಾದ್ರಿ ಲಿಡಿಯಾನ್ ಅಲ್ವೆಸ್ “ಈ ನಷ್ಟದಿಂದ ನಾವು ತುಂಬಾ ದುಃಖಿತರಾಗಿದ್ದೇವೆ. ಅವರು ಅದ್ಭುತ ಮಹಿಳೆ ಮತ್ತು ಎಲ್ಲರೂ ಅವರನ್ನು ತುಂಬಾ ಇಷ್ಟಪಟ್ಟಿದ್ದರು, ಅವರ ನಗು ಮತ್ತು ಹೊಳಪಿಲ್ಲದೆ ಬದುಕುವುದು ಸುಲಭವಲ್ಲ" ಎಂದು ದುಃಖತಪ್ತರಾಗಿದ್ದಾರೆ.ಮಾಡೆಲ್ ಆಗಿ ಜನಪ್ರಿಯರಾಗಿದ್ದ ಅವರು ಇನ್ಸ್ಟಾಗ್ರಾಂನಲ್ಲಿ ಅವರು ಸುಮಾರು 56,000 ಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.