Snake Viral Video: ನಿಮ್ಮ ಮನೆಯಲ್ಲಿಯೂ ಇಂತಹ ಕುರ್ಚಿ ಇದ್ದರೆ ಹುಷಾರ್!

Snake Viral Video: ಕೆಲವರು ಹಾವಿನ ಹೆಸರು ಕೇಳಿದರೆ ಸಾಕು ಹೆದರುತ್ತಾರೆ. ಇನ್ನೂ ಕೆಲವರಿಗೆ ಹಾವನ್ನು ನೆನೆಸಿಕೊಂಡರೆ ರಾತ್ರಿ ಕಣ್ಣು ಮುಚ್ಚಲೂ ಭಯವಾಗುತ್ತದೆ. ಆದರೆ, ಕುಳಿತುಕೊಳ್ಳುವ ಖುರ್ಚಿಯಲ್ಲೇ ಹಾವು ಇದ್ದರೆ ಹೇಗಿರುತ್ತೆ?

Written by - Yashaswini V | Last Updated : Jun 24, 2022, 11:40 AM IST
  • ನಿಮ್ಮ ಮನೆಯಲ್ಲಿಯೂ ಇಂತಹ ಕುರ್ಚಿ ಇದ್ದರೆ ಕೂರುವ ಮೊದಲು ಒಮ್ಮೆಯಾದರೂ ಸರಿಯಾಗಿ ನೋಡಿ.
  • ಇತ್ತೀಚಿನ ದಿನಗಳಲ್ಲಿ ಹಲವು ಬಗೆಯ ವಿವಿಧ ಶೈಲಿಯ ಕುರ್ಚಿಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು.
  • ಅಂತಹದರಲ್ಲೇ ಒಂದು ಹಿಂಬದಿಯ ಕಾಲುಗಳಲ್ಲಿ ರಂಧ್ರವಿರುವ ಕುರ್ಚಿಗಳು.
Snake Viral Video: ನಿಮ್ಮ ಮನೆಯಲ್ಲಿಯೂ ಇಂತಹ ಕುರ್ಚಿ ಇದ್ದರೆ ಹುಷಾರ್! title=
Snake viral Video

ಹಾವಿನ ವೈರಲ್ ವಿಡಿಯೋ: ಬೇಸಿಗೆ ಕಾಲದಲ್ಲಿ ಸರೀಸೃಪಗಳು ತಂಪಾದ ಸ್ಥಳಗಳಲ್ಲಿ ಶಾಂತವಾಗಿ ಕುಳಿತುಕೊಳ್ಳಲು ಇಷ್ಟಪಡುತ್ತವೆ. ಅಂತಹ ಸರೀಸೃಪಗಳಲ್ಲಿ ಹಾವುಗಳೂ ಸೇರಿವೆ.  ನಾವು ಆಗಾಗ್ಗೆ ಮನೆಯಲ್ಲಿ ಅದರಲ್ಲೂ ಬಚ್ಚಲು ಮನೆಯಲ್ಲಿ ಹಾವು ಇರುವ ಬಗ್ಗೆ ವರದಿಗಳನ್ನು ನೋಡಿಯೇ ಇರುತ್ತೇವೆ. ಆದಾಗ್ಯೂ, ಹಾವನ್ನು ನೋಡುವುದಿರಲಿ ಹಾವಿನ ಹೆಸರು ಕೇಳಿದರೆ ಕೈ-ಕಾಲು ನಡುಗುತ್ತೆ... ಆದರೆ, ನಾವು ಕುಳಿತುಕೊಳ್ಳುವ ಜಾಗದಲ್ಲೇ ಹಾವಿದ್ದರೆ ಹೇಗಿರುತ್ತೇ... ಅಬ್ಬಬ್ಬಾ ನೆನೆಸಿಕೊಂಡರೂ ಎದೆ ಝಲ್ ಎನಿಸುತ್ತದೆ. ಯಾರೂ ನಿರೀಕ್ಷಿಸದ ಜಾಗದಲ್ಲಿ ಹಾವೊಂದು ಹೋಗಿ ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. 

ಹೌದು, ನಿಮ್ಮ ಮನೆಯಲ್ಲಿಯೂ ಇಂತಹ ಕುರ್ಚಿ ಇದ್ದರೆ ಕೂರುವ ಮೊದಲು ಒಮ್ಮೆಯಾದರೂ ಸರಿಯಾಗಿ ನೋಡಿ. ಏಕೆಂದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಾವೊಂದು  ಕುರ್ಚಿಯ ಒಳಗೆ ಹೋಗಿ ಕುಳಿತಿರುವುದನ್ನು ಕಾಣಬಹುದು. 

ಇದನ್ನೂ ಓದಿ- Viral Video: ನಾಗರಹಾವಿನೊಂದಿಗೆ ಕೋಳಿ ಕಾಳಗ ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಹಲವು ಬಗೆಯ ವಿವಿಧ ಶೈಲಿಯ ಕುರ್ಚಿಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ಅಂತಹದರಲ್ಲೇ ಒಂದು ಹಿಂಬದಿಯ ಕಾಲುಗಳಲ್ಲಿ ರಂಧ್ರವಿರುವ ಕುರ್ಚಿಗಳು. ಈ ರೀತಿಯ ಒಂದು  ಕುರ್ಚಿಯಲ್ಲಿ ನಾಗರಾಜ ಅವಿತು  ಕುಳಿತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ನಿಮ್ಮ ಮನೆಗಳಲ್ಲಿಯೂ ಇಂತಹ ಕುರ್ಚಿಗಳಿದ್ದರೆ ಕುಳಿತುಕೊಳ್ಳುವ ಮೊದಲು ಒಮ್ಮೆ ಸರಿಯಾಗಿ ಪರಿಶೀಲಿಸಿ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಿ.

 
 
 
 

 
 
 
 
 
 
 
 
 
 
 

A post shared by Bhutni_ke (@bhutni_ke_memes)

ಇದನ್ನೂ ಓದಿ- Viral Video: ಶಾಕಿಂಗ್! ಶೂನಲ್ಲಿ ಅಡಗಿದ್ದ ಹಾವು!

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಹಾವಿನ ಈ ವಿಡಿಯೋವನ್ನು bhutni_ke_memes ಹೆಸರಿನ ಖಾತೆಯಿಂದ  Instagram ನಲ್ಲಿ ಹಂಚಿಕೊಳ್ಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

Trending News