ಬಿಬಿಎಂಪಿ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ಛೀಮಾರಿ

ರಾಜಧಾನಿಯ ಮಾರಣಹೋಮವಾಗಿರುವ ರಸ್ತೆ ಗುಂಡಿ ಸಂಬಂಧ ಹೈಕೋರ್ಟ್ ಮುಂದೆ ಪಾಲಿಕೆ ಅಧಿಕಾರಿಗಳು ಹಾಜರಾಗಿದ್ದು, ಗುಂಡಿ ಮುಚ್ಚಿರುವ ಕುರಿತು ಸಂಕ್ಷಿಪ್ತ ದಾಖಲೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

Written by - Zee Kannada News Desk | Last Updated : Jun 30, 2022, 08:17 PM IST
  • ಬೆಂಗಳೂರಿನ ರಸ್ತೆಗಳು ಸರಿ ಆಗುವವರೆಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಗಿಸುವುದಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದರು.
ಬಿಬಿಎಂಪಿ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ಛೀಮಾರಿ title=

ಬೆಂಗಳೂರು: ರಾಜಧಾನಿಯ ಮಾರಣಹೋಮವಾಗಿರುವ ರಸ್ತೆ ಗುಂಡಿ ಸಂಬಂಧ ಹೈಕೋರ್ಟ್ ಮುಂದೆ ಪಾಲಿಕೆ ಅಧಿಕಾರಿಗಳು ಹಾಜರಾಗಿದ್ದು, ಗುಂಡಿ ಮುಚ್ಚಿರುವ ಕುರಿತು ಸಂಕ್ಷಿಪ್ತ ದಾಖಲೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹೈಕೋರ್ಟ್ ನ ನ್ಯಾಯಾದೀಶರಿಗೆ ನಮ್ಮ ಬಳಿ ಇರುವ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ. ಆದರೆ, ಹಲವು ಕಾರಣಗಳಿಂದ ಕಾರ್ಯಾದೇಶ ಮಾಡಲು ಸಾಧ್ಯ ಆಗಿರಲಿಲ್ಲ ಎಂದರು.

ಎಲ್ಲೆಲ್ಲಿ ಡೆಡ್ಲಿ ರಸ್ತೆಗುಂಡಿಗಳು ಇವೆಯೋ ಅವುಗಳನ್ನ ಕೂಡಲೆ ಮುಚ್ಚಿಸಲು ಪೈಥಾನ್ ಸಂಸ್ಥೆಯ ಜೊತೆ ಮಾತುಕತೆ ನಡೆದಿದೆ. ನಿನ್ನೆ ಪೈಥಾನ್ ಬಳಸಿ ರಸ್ತೆ ಗುಂಡಿ ಮುಚ್ಚುವ ಬಗ್ಗೆ ಕಾರ್ಯಾದೇಶವೂ ಮಾಡಲಾಗಿದೆ. ಈ ಬಗ್ಗೆ ಲಿಖಿತ ರೂಪದಲ್ಲಿ ಇನ್ನೂ ಹೈಕೋರ್ಟ್ ಗೆ ಮಾಹಿತಿ ಕೊಟ್ಟಿಲ್ಲ ಎಂದು ವಿವರಿಸಿದರು.

ಇದನ್ನೂ ಓದಿ-24-06-2022 Today Vegetable Price: ಇಂದು ತರಕಾರಿ-ಹಣ್ಣಿನ ಬೆಲೆ ಹೀಗಿದೆ

10 ದಿನಗಳ ಒಳಗಾಗಿ ರಸ್ತೆಗುಂಡಿಗಳ ಸಂಬಂಧ ದಾಖಲಾತಿ ಮಾಡಿ ಕೊಡುತ್ತೇವೆ. ಎಲ್ಲ ಮಾಹಿತಿಯನ್ನು ನಾವು ಕಡತ ಮಾಡಿ ತೆಗೆದುಕೊಂಡು‌ ಹೋಗಿದ್ದೆವು. ಆದರೆ ಪ್ರಕ್ರಿಯೆ ಸರಿ ಇಲ್ಲ ಎಂದು 10 ದಿನಗಳ ಒಳಗಾಗಿ ಕೊಡಲು ಕೋರ್ಟ್ ಹೇಳಿದೆ. ತ್ವರಿತಗತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ನ್ಯಾಯಾಲಯ ಸೂಚಿಸಿದೆ ಎಂದು ಮಾಹಿತಿ ನೀಡಿದರು.

ಮತ್ತೊಮ್ಮೆ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ಛೀಮಾರಿ:

ಇಂದು ವಿಚಾರಣೆ ನಡೆಸಿರುವ ಹೈಕೋರ್ಟ್, ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಏನಾದರೂ ಕಷ್ಟಗಳಿವೆಯೇ? ರಸ್ತೆ ಗುಂಡಿಗಳಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಬಿಬಿಎಂಪಿ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿಗಳು  ಬಂದಾಗ ಮಾಡಿದ ರಸ್ತೆಗಳು ಹಾಳಾಗಿರುವ ವರದಿಗಳಿವೆ ಎಂದು ಆಕ್ಷೇಪಿಸಿತು.

ಹೈಕೋರ್ಟ್ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತರ ಪರ ವಕೀಲರಾದ ಶ್ರೀನಿಧಿ, ಪ್ರಧಾನಿ ಭೇಟಿ ವೇಳೆ ನಿರ್ಮಿಸಿದ್ದ ರಸ್ತೆಗಳು ಹಾಳಾಗಿಲ್ಲ. ಒಳಚರಂಡಿ ಸಮಸ್ಯೆಯಿಂದ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಲಾಗಿದೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದರು.

ಇದನ್ನೂ ಓದಿ-Ration Card: ರೇಶನ್ ಕಾರ್ಡ್ ಧಾರಕರಿಗೆ ಬಿಗ್ ಶಾಕ್! ಸರ್ಕಾರದಿಂದ ಬೆಚ್ಚಿಬೀಳಿಸುವ ನಿರ್ಧಾರ

ಜಂಟಿ ಸಮೀಕ್ಷೆಯ ಪ್ರಕಾರ, 847.56 ಕಿಮೀ ರಸ್ತೆಯಲ್ಲಿರುವ ಗುಂಡಿಗಳನ್ನು ಸರಿಪಡಿಸಬೇಕಿದೆ. ಈ ಪೈಕಿ 576 ಕಿಮೀ ರಸ್ತೆ ಗುಂಡಿ ಮುಚ್ಚಲು ಟೆಂಡರ್ ಕರೆಯಲಾಗಿದೆ. 397 ಕಿಮೀ ರಸ್ತೆ ಗುಂಡಿ ರಿಪೇರಿಗೆ ಕಾರ್ಯಾದೇಶ ನೀಡಲಾಗಿದೆ. ಜುಲೈ 15ರಂದು ಟೆಂಡರ್ ತೆರೆಯಲಾಗುವುದು ಎಂದು ಉಲ್ಲೇಖಿಸಿದರು.

ಮುಂದಿನ ತಿಂಗಳು 27ಕ್ಕೆ ವಿಚಾರಣೆ ಮುಂದೂಡಿಕೆ:

ಬೆಂಗಳೂರಿನ ರಸ್ತೆಗಳು ಸರಿ ಆಗುವವರೆಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಗಿಸುವುದಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News