ನವದೆಹಲಿ: ಬಹ್ರೇನ್ನಲ್ಲಿ ನಡೆಯುತ್ತಿರುವ 15 ವರ್ಷದೊಳಗಿನವರ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ 15 ವರ್ಷದೊಳಗಿನ ಗ್ರೀಕೊ ರೋಮನ್ ಕುಸ್ತಿ ತಂಡ ಎರಡು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡಿತು.
ಶನಿವಾರದಂದು ಗ್ರೀಕೊ ರೋಮನ್ ಸ್ಟೈಲ್ನ ಎಲ್ಲಾ 10 ತೂಕ ವಿಭಾಗಗಳಲ್ಲಿ ಪಂದ್ಯಗಳು ನಡೆದವು ಮತ್ತು ಭಾರತವು ಒಟ್ಟು 8 ಪದಕಗಳನ್ನು ಗೆದ್ದುಕೊಂಡಿತು.68 ಕೆಜಿಯಲ್ಲಿ ಸಚಿನ್, 72 ಕೆಜಿಯಲ್ಲಿ ಅಭಯ್ ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಪಡೆದರೆ, ಪ್ರಣಯ್ ಚೌಧರಿ 52 ಕೆಜಿ ಮತ್ತು ವರುಣ್ ಕುಮಾರ್ 62 ಕೆಜಿ ವಿಭಾಗದಲ್ಲಿ ಬೆಳ್ಳಿ ಪಡೆದರು.
Aditya Kumar Gaurav from Sports Academy, Khelgaon Ranchi run by CCL under #CclCsrInitiative and Govt of Jharkhand creates history by winning bronze in U-15 Asian Wrestling Championship at Behrain.
He is first athlete from state to achieve this feat.#TeamCCL congratulates him. pic.twitter.com/3aICyfl2xI— Central Coalfields Limited (@CCLRanchi) July 3, 2022
ವರುಣ್ ಸೋಂಕರ್ (38 ಕೆಜಿ), ಆದಿತ್ಯ ಕುಮಾರ್ (48 ಕೆಜಿ), ತುಷಾರ್ ಪಾಟೀಲ್ (57 ಕೆಜಿ) ಮತ್ತು ಹರ್ದೀಪ್ (85 ಕೆಜಿ) ತಮ್ಮ ವಿಭಾಗಗಳಲ್ಲಿ ಕಂಚಿನ ಪದಕ ಪಡೆದರು.
ಇರಾನ್ 205 ಪಾಯಿಂಟ್ಗಳೊಂದಿಗೆ ಏಷ್ಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಕಜಕಿಸ್ತಾನ್ 192 ಪಾಯಿಂಟ್ಗಳೊಂದಿಗೆ ರನ್ನರ್ ಅಪ್ ಮತ್ತು ಭಾರತ 172 ಪಾಯಿಂಟ್ಗಳನ್ನು ಗಳಿಸಿ 3 ನೇ ಸ್ಥಾನವನ್ನು ಪಡೆದುಕೊಂಡಿತು.
ಭಾನುವಾರ ಮಹಿಳೆಯರ ಕುಸ್ತಿಯ ಎಲ್ಲಾ 10 ತೂಕ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.