ಹಿಮಾಚಲ ಪ್ರದೇಶ ಚುನಾವಣೆ: 68 ಕ್ಷೇತ್ರಗಳಿಗೆ 338 ಅಭ್ಯರ್ಥಿಗಳು

ಕಾಂಗ್ರೇಸ್-ಬಿಜೆಪಿ ನಡುವೆ ನೇರ ಹಣಾಹಣಿ.  

Last Updated : Nov 9, 2017, 09:02 AM IST
ಹಿಮಾಚಲ ಪ್ರದೇಶ ಚುನಾವಣೆ: 68 ಕ್ಷೇತ್ರಗಳಿಗೆ 338 ಅಭ್ಯರ್ಥಿಗಳು title=
Pic: ANI

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಒಟ್ಟು 68 ಕ್ಷೇತ್ರಗಳಲ್ಲಿ 338 ಅಭ್ಯರ್ಥಿಗಳು ಸ್ಪರ್ಧೆಯ ಕಣಕ್ಕಿಳಿದಿದ್ದಾರೆ.

ಪ್ರಸ್ತುತ ಕಾಂಗ್ರೇಸ್ ಅಧಿಕಾರ ಹೊಂದಿರುವ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೇಸ್-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೇಸ್ ನಿಂದ ಹಾಲಿ ಮುಖ್ಯ ಮಂತ್ರಿ ವಿರಭದ್ರ ಸಿಂಗ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರೆ. ಬಿಜೆಪಿಯಿಂದ ಈ ಮೊದಲು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಪ್ರೇಮ್ ಕುಮಾರ್ ದುಮಾಲ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವದ ವಿಷಯವೆಂದು ವಿವರಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಪಾಲ್ಗೊಳ್ಳಲು ಮತದಾರರಿಗೆ ಮನವಿ ಮಾಡಿದ್ದಾರೆ.

 

12 ದಿನ ತೀವ್ರ ಅಭಿಯಾನದಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕ ಚಳುವಳಿಗಾರರು 450 ಕ್ಕೂ ಹೆಚ್ಚು ರ್ಯಾಲಿಯನ್ನು ಮಾಡಿದರು. ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಏಳು ರ್ಯಾಲಿಯಲ್ಲಿ ಪಾಲ್ಗೊಂಡರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಆರು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮೂರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

ಭ್ರಷ್ಟಾಚಾರವನ್ನು ಪ್ರಮುಖ ವಿಷಯವಾಗಿ ಮಾಡುವ ಮೂಲಕ ಪ್ರಚಾರ ಅಭಿಯಾನದಲ್ಲಿ, ಬಿಜೆಪಿಯು ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರನ್ನು ಗುರಿಯಾಗಿಸಿದರೆ, ಇನ್ನು ಕಾಂಗ್ರೆಸ್ಗೆ ಜಿಎಸ್ಟಿ ಮತ್ತು ನೋಟ್-ಬ್ಯಾನ್ ಮೇಲೆ ದಾಳಿ ಮಾಡುವ ಮೂಲಕ ಪ್ರಚಾರ ಮಾಡಿದೆ. ಧರ್ಮಶಾಲಾದಲ್ಲಿ 12 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. 

Trending News