ಬೆಂಗಳೂರು: 'ಅವಸರವೇ ಅಪಾಯಕ್ಕೆ ಕಾರಣ' ಇದು ನಮ್ಮ ಹಿರಿಯರು ಹೇಳಿದ ಮಾತು. ಆದರೀಗ ಅದು ನಮ್ಮ ಟ್ರಾಫಿಕ್ ಪೊಲೀಸರು ಎಲ್ಲಾ ವಾಹನ ಚಾಲಕರಿಗೂ ಹೇಳುವ ಕಿವಿ ಮಾತು. ಆದರೂ, ವಾಹನ ಈ ಮಾತು ಕಿವಿಗೆ ಹೋಗುವುದೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಬೆಂಗಳೂರಿನ ಹೆದ್ದಾರಿಯೊಂದರಲ್ಲಿ ಚಲಿಸುತ್ತಿದ್ದ ಬೈಕೊಂದು ಮತ್ತೊಂದು ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕಲ್ಲಿದ್ದ ಗಂಡ-ಹೆಂಡತಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಆದರೆ ಬೈಕ್ ವೇಗವಾಗಿ ಚಲಿಸುತ್ತಿದ್ದರಿಂದ ನಿಲ್ಲದೆ, ಮಗುವಿನೊಂದಿಗೆ 300 ಮೀಟರ್ ದೂರ ಚಲಿಸಿ ನಂತರ ರಸ್ತೆ ವಿಭಜಕಕ್ಕೆ ಹೊಡೆದು ಕೆಳಗೆ ಬಿದ್ದಿದೆ. ಆದರೆ ಪಕ್ಕದ ಹುಲ್ಲುಹಾಸಿನ ಮೇಲೆ ಮಗು ಬಿದ್ದಿದ್ದರಿಂದ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ.
ಈ ವೀಡಿಯೋವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಪಕ, ವಿತರಕ ಕಾರ್ತಿಕ್ ಗೌಡ ಅವರು, ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ ಯಾವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
The bike rider had his family on the bike,hit a 2 wheeler & fell down with his wife.The impact of the hit was so much tat the bike went for 300m with d child on it before slowing down,kid fell on d grass unhurt. Recorded on my dashcam 2 hrs ago.Miracle🙏@BlrCityPolice pic.twitter.com/MZFyRRGcAw
— Karthik Gowda (@Karthik1423) August 19, 2018