ದೆಹಲಿ ಸಿಎಂ ಮನೆ ಮುಂದೆ ದಾಂಧಲೆ ಪ್ರಕರಣ: ಆರೋಪಪಟ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೆಸರು!!

Tejasvi Surya: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನಿವಾಸದ ಮುಂದೆ ದಾಂಧಲೆ ಮಾಡಿದ ಪ್ರಕರಣದ ಆರೋಪಪಟ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೆಸರಿದ್ದು, ಅವರು ತಕ್ಷಣವೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಆಗ್ರಹಿಸಿದರು.

Written by - Prashobh Devanahalli | Edited by - Chetana Devarmani | Last Updated : Jul 24, 2022, 04:04 PM IST
  • ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನಿವಾಸದ ಮುಂದೆ ದಾಂಧಲೆ ಪ್ರಕರಣ
  • ಆರೋಪಪಟ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೆಸರು
  • ತಕ್ಷಣವೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಎಪಿ ಆಗ್ರಹ
ದೆಹಲಿ ಸಿಎಂ ಮನೆ ಮುಂದೆ ದಾಂಧಲೆ ಪ್ರಕರಣ: ಆರೋಪಪಟ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೆಸರು!!  title=
ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನಿವಾಸದ ಮುಂದೆ ದಾಂಧಲೆ ಮಾಡಿದ ಪ್ರಕರಣದ ಆರೋಪಪಟ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೆಸರಿದ್ದು, ಅವರು ತಕ್ಷಣವೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಆಗ್ರಹಿಸಿದರು.

ಇದನ್ನೂ ಓದಿ: "ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಬ್ರೇಕ್ ಅಪ್ ಆಗಲು ನಾನೇ ಕಾರಣ"

ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್‌ ವಿ ಸದಂ, “ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬ ನಂಬಿಕೆಯಿಂದ ಬೆಂಗಳೂರು ದಕ್ಷಿಣದ ಜನರು ತೇಜಸ್ವಿ ಸೂರ್ಯರವರನ್ನು ಸಂಸದರನ್ನಾಗಿ ಮಾಡಿದ್ದಾರೆ. ಆದರೆ ಇವರು ದೇಶದ ಯುವಜನತೆಯನ್ನು ಗೂಂಡಾಗಿರಿಗೆ ಬಳಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಮಾರ್ಚ್‌ 30ರಂದು ಸಿಎಂ ಅರವಿಂದ್‌ ಕೇಜ್ರಿವಾಲ್‌ ನಿವಾಸದ ಮೇಲೆ ನಡೆದ ದಾಳಿಯ ಚಾರ್ಜ್‌ಶೀಟ್‌ನಲ್ಲಿ ತೇಜಸ್ವಿ ಸೂರ್ಯ ಆರೋಪಿಯಾಗಿದ್ದಾರೆ. ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹುದ್ದೆಯ ಗೌರವ ಉಳಿಸಲಿ” ಎಂದು ಹೇಳಿದರು.

“ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯರವರು ಪಕ್ಷದ ಯುವ ಕಾರ್ಯಕರ್ತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರ ನಿರ್ಮಾಣಕ್ಕೆ ಬಳಕೆಯಾಗಬೇಕಾದ ಯುವಜನತೆಯನ್ನು ಬಿಜೆಪಿಯು ಕ್ರಿಮಿನಲ್‌ಗಳನ್ನಾಗಿ ಮಾಡುತ್ತಿದೆ. ಮುಖ್ಯಮಂತ್ರಿಯೊಬ್ಬರ ನಿವಾಸದ ಮೇಲೆ ದಾಳಿ ಮಾಡುವಷ್ಟು ಇವರು ಮುಂದುವರಿದಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿಯವರು ರಾಷ್ಟ್ರಮಟ್ಟದಲ್ಲಿ ಕಳಂಕ ತಂದಿದ್ದಾರೆ” ಎಂದು ಜಗದೀಶ್‌ ವಿ ಸದಂ ಹೇಳಿದರು.

ಇದನ್ನೂ ಓದಿ: ಕನಕಪುರದಲ್ಲಿ ಭ್ರಷ್ಟಾಚಾರಕ್ಕೆ ಗೊಬ್ಬರ ಹಾಕಿ ಪೋಷಿಸಿದವರು ಬಂಡೆ ಮಕ್ಕಳು: ಬಿಜೆಪಿ

“ದಾಳಿಯಲ್ಲಿ ಭಾಗಿಯಾಗಿದ್ದಕ್ಕೆ ತೇಜಸ್ವಿ ಸೂರ್ಯ ಹಾಗೂ ಅವರ ಗೂಂಡಾ ಕಾರ್ಯಕರ್ತರಿಗೆ ಬಿಜೆಪಿಯ ದೆಹಲಿ ಘಟಕವು ಸನ್ಮಾನವನ್ನೂ ಮಾಡಿದೆ. ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಹಿಡಿತದಲ್ಲಿರುವುದನ್ನು ದುರ್ಬಳಕೆ ಮಾಡಿಕೊಂಡು ದಾಳಿ ಮಾಡಿ ಸಂಭ್ರಮಿಸುವುದು ಬಿಜೆಪಿಯ ವಿಕೃತ ಮನೋಭಾವನೆಗೆ ಸಾಕ್ಷಿಯಾಗಿದೆ. ಬಿಜೆಪಿ ನಾಯಕರಿಗೆ ಮಾನಮರ್ಯಾದೆಯಿದ್ದರೆ ತೇಜಸ್ವಿ ಸೂರ್ಯರವರ ರಾಜೀನಾಮೆ ಪಡೆಯಲಿ" ಎಂದು ಜಗದೀಶ್‌ ವಿ ಸದಂ ಸವಾಲು ಹಾಕಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News