ಕನಕಪುರದಲ್ಲಿ ಭ್ರಷ್ಟಾಚಾರಕ್ಕೆ ಗೊಬ್ಬರ ಹಾಕಿ ಪೋಷಿಸಿದವರು ಬಂಡೆ ಮಕ್ಕಳು: ಬಿಜೆಪಿ

ಕನಕಪುರ ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಅಧಿಕಾರಿಗಳೇ ಸರ್ಕಾರದ ಮರ್ಯಾದೆಯನ್ನು ಕಳೆಯುತ್ತಿದ್ದಾರೆಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದರು.  

Written by - Puttaraj K Alur | Last Updated : Jul 24, 2022, 01:31 PM IST
  • ಕನಕಪುರದಲ್ಲಿ ಕೆಡಿಪಿ ಸಭೆಯಲ್ಲಿ ಡಿಕೆಶಿ ಭ್ರಷ್ಟಾಚಾರ ಬಗ್ಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ
  • ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಡಿಕೆಶಿ ಭ್ರಷ್ಟಾಚಾರದ ವಿರುದ್ಧ ಉಗ್ರವಾಗಿರುವುದು ಹಾಸ್ಯಾಸ್ಪದ
  • ಕನಕಪುರದಲ್ಲಿ ಭ್ರಷ್ಟಾಚಾರಕ್ಕೆ ಗೊಬ್ಬರ ಹಾಕಿ ಪೋಷಿಸಿದವರು ಇದೇ ಬಂಡೆ ಮಕ್ಕಳು ಎಂದು ಬಿಜೆಪಿ ಟೀಕೆ
ಕನಕಪುರದಲ್ಲಿ ಭ್ರಷ್ಟಾಚಾರಕ್ಕೆ ಗೊಬ್ಬರ ಹಾಕಿ ಪೋಷಿಸಿದವರು ಬಂಡೆ ಮಕ್ಕಳು: ಬಿಜೆಪಿ title=
ಡಿಕೆಶಿ ಭ್ರಷ್ಟಾಚಾರದ ಹೇಳಿಕೆಗೆ ಬಿಜೆಪಿ ತಿರುಗೇಟು

ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಕಚೇರಿಯಲ್ಲಿ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ, ಪ್ರಗತಿ ಪರಿಶೀಲನೆ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಕನಕಪುರ ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಅಧಿಕಾರಿಗಳೇ ಸರ್ಕಾರದ ಮರ್ಯಾದೆಯನ್ನು ಕಳೆಯುತ್ತಿದ್ದಾರೆಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದರು.  

ಕನಕಪುರದಲ್ಲಿ ಅಧಿಕಾರಿಗಳಿಂದ ಭ್ರಷ್ಟಾಚಾರ ಮನೆಮಾಡಿದೆ ಎಂಬ ಡಿಕೆಶಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. #ಭ್ರಷ್ಟಡಿಕೆಶಿ ಹ್ಯಾಶ್ ಟ್ಯಾಗ್ ಬಳಸಿ ಭಾನುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕನಕಪುರದಲ್ಲಿ ಭ್ರಷ್ಟಾಚಾರಕ್ಕೆ ಗೊಬ್ಬರ ಹಾಕಿ ಪೋಷಿಸಿದವರು ಇದೇ ಬಂಡೆ ಮಕ್ಕಳು’ ಎಂದು ಕಿಡಿಕಾರಿದೆ.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಲ ಮಾರ್ಗದರ್ಶನ ಇರಲಿದೆ : ಸಿಎಂ ಬೊಮ್ಮಾಯಿ

‘ಕನಕಪುರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರ ಬಗ್ಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಡಿಕೆಶಿ ಅವರು ಭ್ರಷ್ಟಾಚಾರದ ವಿರುದ್ಧ ಉಗ್ರವಾಗಿರುವುದು ಹಾಸ್ಯಾಸ್ಪದ’ವೆಂದು ಬಿಜೆಪಿ ಕುಟುಕಿದೆ.

‘ಭ್ರಷ್ಟಾಚಾರ ಒಂದೇ ದಿನದಲ್ಲಿ ಬೆಳೆದು ನಿಂತಿದ್ದಲ್ಲ. ಕನಕಪುರದಲ್ಲಿ ಭ್ರಷ್ಟಾಚಾರಕ್ಕೆ ಗೊಬ್ಬರ ಹಾಕಿ ಪೋಷಿಸಿದವರು ಇದೇ ಬಂಡೆ ಮಕ್ಕಳು. ಡಿಕೆಶಿ ಅವರಿಗೆ ತಮ್ಮ ಮೂಗಿನ ಕೆಳಗೆ ನಡೆಯುತ್ತಿದ್ದ ಭ್ರಷ್ಟಾಚಾರ ಗೊತ್ತಿರಲಿಲ್ಲವೆಂದೇನಲ್ಲ, ಅದಕ್ಕೆಲ್ಲ ಅಂಕಿತ ಹಾಕಿದ್ದೇ ಡಿಕೆಶಿ’ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ರಾಜ್ಯದ ಸಚಿವ ಸಂಪುಟ ನಿರ್ಣಯಗಳ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಟೀಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News