ಅದೇನ್ ಕ್ಯಾಮೆರಾ ವರ್ಕ್, ಅದೇನ್ ಸೀನ್ಸ್, ಅದೇನ್ ಕ್ಲೈಮ್ಯಾಕ್ಸ್.. ಅಬ್ಬಬ್ಬಾ ಅದೇನ್ ಬಿಜಿಎಂ ಗುರೂ.. ಅರೆರೆ ಇದು ನಾವು ಹೇಳ್ತಾ ಇರೋದು ಅಲ್ಲ, ಸದ್ಯ ‘ವಿಕ್ರಾಂತ್ ರೋಣ’ ಸಿನಿಮಾ ನೋಡಿ ಬಂದಿರುವವರ ರಿಯಾಕ್ಷನ್. ಹೇಗಂದ್ರೆ ನಿಮಗೆಲ್ಲಾ ಗೊತ್ತಿರುವಂತೆ ಈಗಾಗಲೇ ಹಲವು ಕಡೆ ‘ವಿಕ್ರಾಂತ್ ರೋಣ’ ಚಿತ್ರ ಪ್ರೀಮಿಯರ್ ಶೋ ಮೂಲಕ ತೆರೆಕಂಡಿದೆ. ಹೀಗೆ ಪ್ರೀಮಿಯರ್ ಶೋಗಳಲ್ಲಿ ‘ವಿಕ್ರಾಂತ್ ರೋಣ’ ಕಣ್ತುಂಬಿಕೊಂಡಿರುವ ಹಲವರು ಟ್ವಿಟ್ಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುನಾಮಿ ಎಬ್ಬಿಸಿದ್ದಾರೆ.
#VikrantRona is massive in every sense of this word and beautiful beyond your expectations. Each frame looks painted and #KicchaSudeep, well… he has his swag cap on! This is a treat for fans. Full review @indiacom at 11 am tomorrow. #VikrantRonaReview @KicchaSudeep @VikrantRona
— Vineeta Kumar (@vineeta_ktiwari) July 27, 2022
ಅದರಲ್ಲೂ ಪ್ರಮುಖವಾಗಿ ಇಡೀ ಚಿತ್ರ ಕಿಚ್ಚ ಸುದೀಪ್ ಅವರ ಬಿರುಗಾಳಿಯೇ ಆವರಿಸಿದೆ ಅಂತೆ. ಕ್ಯಾಮೆರಾ ವರ್ಕ್, ಕ್ಲೈಮ್ಯಾಕ್ಸ್ ಸೇರಿದಂತೆ ಬಿಜಿಎಂ ಹಾಗೇ ಇತರ ಕಂಟೆಂಟ್‌ಗಳು ಹಾಲಿವುಡ್ ಚಿತ್ರಗಳನ್ನೂ ಮೀರಿಸುವಂತಿದೆ. ಇನ್ನು ಕಿಚ್ಚ ಸುದೀಪ್ ಅವರ ನಟನೆಗೆ ಪ್ರೇಕ್ಷಕ ಪ್ರಭು ಫಿದಾ ಆಗಿದ್ದು, ‘ವಿಕ್ರಾಂತ್ ರೋಣ’ ಸಿನಿಮಾಗೆ 100ಕ್ಕೆ 100 ಮಾರ್ಕ್ಸ್ ಕೊಟ್ಟಿದ್ದಾನೆ. ಜಗತ್ತಿನಾದ್ಯಂತ ‘ವಿಕ್ರಾಂತ್ ರೋಣ’ ಸಿನಿಮಾ ಬಿರುಗಾಳಿ ಬಿರುಸಾಗಿ ಹರಡುತ್ತಿದೆ.
Boss 👑🔥#VikrantRonaReview 🔥🔥🔥🔥🔥#Mass 🔥
VikrantRona Mania
Record Record Record Nkn 🤙🔥@KicchaSudeep Boss👑@VikrantRona@tv9kannada@AsianetNewsSN@publictvnews@TV5kannada@News18Kannada pic.twitter.com/R1e3ZzqMcS
— The Name Is Kiccha👑 (@TheNameIsKiccha) July 27, 2022
ಫುಲ್ ಪೈಸಾ ವಸೂಲ್..!
ಹಿಂದಿ ಭಾಷಿಕರ ಜಾಗದಲ್ಲಿ ಅಥವಾ ಬಾಲಿವುಡ್ ಚಿತ್ರಗಳ ಹಿಡಿತದಲ್ಲಿದ್ದ ಪ್ರದೇಶಗಳಲ್ಲಿ ಸಿನಿಮಾ ಭಾಷೆಯಲ್ಲಿ ಒಂದು ಮಾತಿದೆ. ಅದೇನು ಅಂದ್ರೆ ಒಂದು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದರೆ ಅದನ್ನು ‘ಫುಲ್ ಪೈಸಾ ವಸೂಲ್’ ಎನ್ನುವ ಮೂಲಕ ಹೊಗಳುತ್ತಾರೆ. ಇದೀಗ ‘ವಿಕ್ರಾಂತ್ ರೋಣ’ ಸಿನಿಮಾ ಕುರಿತು ವಿಮರ್ಶಕರು ಇದೇ ಮಾತನ್ನ ಹೇಳಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ‘ವಿಕ್ರಾಂತ್ ರೋಣ’ ಇದೀಗ ಇಡೀ ಜಗತ್ತನ್ನೇ ಆಳಲು ಬರುತ್ತಿದ್ದಾನೆ. ಈ ಮೂಲಕ ಕನ್ನಡ ಸಿನಿಮಾಗಳ ತಾಕತ್ತು ಏನು ಅನ್ನೋದು ಪ್ರತಿಯೊಬ್ಬರಿಗೂ ಅರ್ಥವಾಗಿದೆ.
Rating 4.5 Yella Kodtiddare😱🔥🔥Yav Level Ge Erbodu #VikrantRona#VikrantRonaTomorrow pic.twitter.com/iRs0QqBzCQ
— PRAJWAL (@prajwal___30) July 27, 2022
ನಾಳೆ ಅಧಿಕೃತವಾಗಿ ‘ವಿಕ್ರಾಂತ್ ರೋಣ’ ಸಿನಿಮಾ ಜಗತ್ತಿನಾದ್ಯಂತ ರಿಲೀಸ್ ಆಗುತ್ತಿದ್ದು, ಈಗಾಗಲೇ ಬಹುತೇಕ ಚಿತ್ರಮಂದಿರಗಳ ಸೀಟ್‌ಗಳು ಫುಲ್ ಫಿಲ್. ಅದ್ರಲ್ಲೂ 3D ಥಿಯೇಟರ್‌ಗಳಲ್ಲಿ ಜನಜಂಗುಳಿ ನೆರೆಯೋದು ಗ್ಯಾರಂಟಿ. ಯಾಕಂದ್ರೆ ‘ವಿಕ್ರಾಂತ್ ರೋಣ’ ಸಿನಿಮಾ 3D ಮೂಲಕ ನೋಡೋದೆ ಒಂದು ಮಜಾ. ಹೀಗಾಗಿ ಕೋಟಿ ಕೋಟಿ ಅಭಿಮಾನಿಗಳು ಮೊದಲ ದಿನವೇ ಸಿನಿಮಾ ಕಣ್ತುಂಬಿಕೊಳ್ಳಲು ಕಾತುರರಾಗಿದ್ದು ಕೆಲವೇ ಗಂಟೆಯಲ್ಲಿ ಥಿಯೇಟರ್‌ಗಳ ಬಾಗಿಲು ಓಪನ್ ಆಗಲಿದೆ. ‘ವಿಕ್ರಾಂತ್ ರೋಣ’ ಪ್ರಪಂಚ ಬೆಳ್ಳಿತೆರೆಯ ಮೇಲೆ ವಿಜೃಂಭಿಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.