ಭಾರತದ ಆರಂಭಿಕ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ. ಿದು ಕೆಎಲ್ ರಾಹುಲ್ ರನ್ ಗಳಿಸಲು ಸಾಧ್ಯವಾಗುತ್ತಿಲ್ಲವೆಂದಲ್ಲ. ಮೈದಾನದ ಹೊರಗೆ ಸಹ ನಡೆಯುತ್ತಿರುವ ಸಂಗತಿಗಳು ಅವರಿಗೆ ರಾಷ್ಟ್ರೀಯ ತಂಡದಲ್ಲಿ ಪುನರಾಗಮನವನ್ನು ಮಾಡಲು ಬಿಡುತ್ತಿಲ್ಲ. ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದರಲ್ಲಿ ಕೆಎಲ್ ರಾಹುಲ್ ಕಂಡಿಲ್ಲ. ಇದೀಗ ರಾಹುಲ್ ಅವರೇ ಯಾಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಎನ್ಆರ್ಐ ಸೊಸೈಟಿಯಲ್ಲಿ ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ ಲಕ್ಷಾಂತರ ಮೌಲ್ಯದ ವಸ್ತು
ಕೆಎಲ್ ರಾಹುಲ್ ಐಪಿಎಲ್ 2022 ರಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ತವರಿನ ಸರಣಿಯಲ್ಲಿ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರನ್ನು ಟೀಮ್ ಇಂಡಿಯಾದ ನಾಯಕರನ್ನಾಗಿ ಮಾಡಲಾಯಿತು. ಆದರೆ ಬೆನ್ನುನೋವಿನ ಸಮಸ್ಯೆಯಿಂದಾಗಿ ಅವರು ಆಡಲು ಸಾಧ್ಯವಾಗಲಿಲ್ಲ. ಇನ್ನು ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದಲ್ಲೂ ಭಾಗವಹಿಸಿರಲಿಲ್ಲ. ಇದೇ ಸಮಯದಲ್ಲಿ ರಾಹುಲ್ ಅವರ ಸ್ಥಾನವನ್ನು ರಿಪ್ಲೇಸ್ ಮಾಡಲು ಹಲವು ಯುವ ಆಟಗಾರರು ಟೀಂ ಇಂಡಿಯಾದಲ್ಲಿ ತಯಾರಾಗಿ ಕುಳಿತಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲೂ ಅವರನ್ನು ತಂಡದ ಭಾಗವಾಗಿ ಮಾಡಲಾಗಿಲ್ಲ. ಹೀಗಿರುವಾಗ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತಿದೆ.
ಟ್ವೀಟ್ ಮಾಡಿದ ಕನ್ನಡಿಗ:
ಕೆಎಲ್ ರಾಹುಲ್ ಭಾವನಾತ್ಮಕ ಟ್ವೀಟ್ ಮಾಡಿದ್ದು, ಅದರಲ್ಲಿ ರಾಹುಲ್ ಹೀಗೆ ಬರೆದಿದ್ದಾರೆ. "ನನ್ನ ಆರೋಗ್ಯ ಮತ್ತು ಫಿಟ್ನೆಸ್ ಕುರಿತು ನಾನು ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಜೂನ್ನಲ್ಲಿ, ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾನು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ತರಬೇತಿಯನ್ನು ಪ್ರಾರಂಭಿಸಿದೆ. ನಾನು ಯಾವುದೇ ಪರಿಸ್ಥಿತಿಯಲ್ಲಿಯಾದರೂ ಟೀಮ್ ಇಂಡಿಯಾದ ಪರವಾಗಿ ಆಡಲು ಬಯಸುತ್ತೇನೆ. ಇನ್ನು ಜಿಂಬಾಬ್ವೆ ಪ್ರವಾಸದಲ್ಲಿ ಭಾಗವಹಿಸಲು ನಾನು ಸಂಪೂರ್ಣ ಫಿಟ್ ಆಗಿದ್ದೆ. ಆದರೆ ಅದರ ನಂತರ ನಾನು ಕೋವಿಡ್ -19 ಗೆ ತುತ್ತಾಗಿದ್ದೇನೆ. ಹೀಗಾಗಿ ನಾನು ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಬೇಗ ಆಯ್ಕೆಗೆ ಲಭ್ಯವಿರಬೇಕು. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಅತ್ಯುನ್ನತ ಗೌರವ ಮತ್ತು ಟೀಂ ಇಂಡಿಯಾ ಪರ ಆಡಬೇಕು" ಎಂದರು.
ಇದನ್ನೂ ಓದಿ: ‘ಕಿಚ್ಚ’ನಿಗೆ ಥ್ಯಾಂಕ್ಸ್ ಹೇಳಿ ಗುಡ್ಡಿ ಫ್ರೆಂಡ್ ಭಾಸ್ಕರ್ ಬಗ್ಗೆ ರಾಜಮೌಳಿ ಟ್ವೀಟ್
ವಿಶ್ವದ ಅಪಾಯಕಾರಿ ಆರಂಭಿಕರಲ್ಲಿ ಕೆಎಲ್ ರಾಹುಲ್ ಕೂಡ ಒಬ್ಬರು ಎಂದು ಪರಿಗಣಿಸಲಾಗಿದೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ರಾಹುಲ್ ಭಾರತಕ್ಕಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಪಂದ್ಯವನ್ನಾಡಿದ್ದಾರೆ. ಅವರು ಭಾರತ ತಂಡದ ಉಪನಾಯಕರೂ ಆಗಿದ್ದಾರೆ. ಭಾರತ ತಂಡದ ಪರ 43 ಟೆಸ್ಟ್ ಪಂದ್ಯಗಳಲ್ಲಿ 2547 ರನ್, 42 ODIಗಳಲ್ಲಿ 1634 ರನ್ ಮತ್ತು 56 T20 ಪಂದ್ಯಗಳಲ್ಲಿ 1831 ರನ್ ಗಳಿಸಿದ್ದಾರೆ. ಯಾವುದೇ ಪಿಚ್ನಲ್ಲೂ ವಿಕೆಟ್ ಪಡೆಯುವ ಸಾಮರ್ಥ್ಯ ರಾಹುಲ್ಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.