Al-Zawahiri Killed: ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕ ಮತ್ತೊಂದು ಯಶಸ್ಸನ್ನು ಸಾಧಿಸಿದೆ. ಕಾಬೂಲ್‌ನಲ್ಲಿ ಡ್ರೋನ್ ದಾಳಿ ಮೂಲಕ ಅಲ್ ಖೈದಾ ನಾಯಕ ಅಯ್ಮಾನ್ ಅಲ್- ಝವಾಹಿರಿಯನ್ನು ಹತ್ಯೆ ಮಾಡಲಾಗಿದೆ. CIA ಡ್ರೋನ್ ದಾಳಿಯಲ್ಲಿ ಉಗ್ರನನ್ನು ಹೊಡೆದುರುಳಿಸಿದ ಬಗ್ಗೆ US ಅಧ್ಯಕ್ಷ ಜೋ ಬಿಡನ್ ಘೋಷಿಸಿದ್ದಾರೆ. ಸೆಪ್ಟೆಂಬರ್ 11 2001 ರಂದು ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಗೂ ಅಲ್- ಝವಾಹಿರಿಗೂ ಪ್ರಮುಖ ನಂಟು ಇತ್ತು.
ತನ್ನ ಅಭ್ಯಾಸವೇ ಮುಳುವಾಯಿತು :
ಅಲ್ ಖೈದಾ ಮುಖ್ಯಸ್ಥ ಅಲ್ ಝವಾಹಿರಿ ತನ್ನ ಹವ್ಯಾಸದ ಕಾರಣದಿಂದಲೇ ಹತನಾದ ಎಂದರೆ ತಪ್ಪಲ್ಲ. ಹೌದು ಈ ಉಗ್ರನಿಗೆ ಪದೇ ಪದೇ ತನ್ನ ಮನೆಯ ಬಾಲ್ಕನಿಗೆ ಬಂದು ನಿಲ್ಲುವ ಹವ್ಯಾಸವಿತ್ತು. ಈತನ ಈ ಅಭ್ಯಾಸದ ಕಾರಣದಿಂದಲೇ ಅಮೆರಿಕಾ ಗುಪ್ತಚರ ಸಂಸ್ಥೆ ಸಿಐಎ ಅಧಿಕಾರಿಗಳಿಗೆ ಈತನ ಅಡಗು ತಾಣವನ್ನು ಪತ್ತೆ ಹಚ್ಚುವುದು ಸುಲಭವಾಯಿತು ಎನ್ನುತ್ತಾರೆ ಯುಎಸ್ ಅಧಿಕಾರಿಗಳು. ಉಗ್ರ ಅಲ್ ಝವಾಹಿರಿ ಎಲ್ಲಿದ್ದಾನೆ ಎಂದು ತಿಳಿದದ್ದೇ ತಡ ಡ್ರೋನ್ ಮೂಲಕ ಹೆಲ್‌ಫೈರ್ ಕ್ಷಿಪಣಿಗಳನ್ನು ಹಾರಿಸಿ ಝವಾಹಿರಿಯನ್ನು ಹೊಡೆದುರುಳಿಸಿದ್ದಾರೆ.
ಇದನ್ನೂ ಓದಿ : Viral Video - 66 ವರ್ಷಗಳ ಹಿಂದೆ ಫ್ರಿಡ್ಜ್ ಹೇಗಿತ್ತು ಗೊತ್ತಾ...? ಭಾರಿ ವೈರಲ್ ಆಗುತ್ತಿದೆ 1956ನೇ ಸಾಲಿನ ಈ ವಿಡಿಯೋ
ಝವಾಹಿರಿಗೆ ಆಶ್ರಯ ನೀಡಿದ್ದ ತಾಲಿಬಾನ್ ಗೃಹ ಸಚಿವ :
ತಾಲಿಬಾನ್ ಗೃಹ ಸಚಿವ ಶಿರಾಜುದ್ದೀನ್ ಹಕ್ಕಾನಿ ಅಲ್-ಝವಾಹಿರಿಗೆ ಆಶ್ರಯ ನೀಡಿದ್ದರು ಎನ್ನಲಾಗುತ್ತಿದೆ. ಈ ದಾಳಿಯಲ್ಲಿ ಹಕ್ಕಾನಿಯ ಸಂಬಂಧಿ ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಝವಾಹಿರಿಯೊಂದಿಗೆ ಅವರ ಕುಟುಂಬವೂ ಅದೇ ಮನೆಯಲ್ಲಿ ವಾಸಿಸುತ್ತಿತ್ತು ಎಂದು ಹೇಳಲಾಗುತ್ತಿದೆ.
ಕಾಬೂಲ್‌ನಲ್ಲಿ ಯಾವುದೇ ಅಮೇರಿಕನ್ ಸೈನಿಕರು ಇರಲಿಲ್ಲ :
ಈ ಕಾರ್ಯಾಚರಣೆಯ ವಿಶೇಷವೆಂದರೆ, ಇದಕ್ಕಾಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಯಾವುದೇ ಅಮೆರಿಕನ್ ಸೈನಿಕ ಬೀಡುಬಿಟ್ಟಿರಲಿಲ್ಲ. ಜುಲೈ 31 ರಂದು, ಅಧ್ಯಕ್ಷ ಜೋ ಬಿಡೆನ್ ಆದೇಶದ ಮೇರೆಗೆ, ಈ ದಾಳಿಯನ್ನು ನಡೆಸಿದೆ.
ಇದನ್ನೂ ಓದಿ : Trending Video: ಓಡಿ ಹೋಗುತ್ತಿದ್ದ ಸಿಂಹವನ್ನು ತನ್ನ ತೋಳುಗಳಲ್ಲಿ ಎತ್ತಿ ತಂದ ಮಹಿಳೆ, ವಿಡಿಯೋ ನೋಡಿ ನೀವು ದಂಗಾಗುವಿರಿ
ದಾಳಿಯನ್ನು ಖಂಡಿಸಿದ ತಾಲಿಬಾನ್ :
ಕಾಬೂಲ್‌ನಲ್ಲಿ ಯುಎಸ್ ನಡೆಸಿದ ಈ ಕಾರ್ಯಾಚರಣೆಯನ್ನು ತಾಲಿಬಾನ್ ಖಂಡಿಸಿದೆ ಮತ್ತು ಇದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಹೇಳಿದೆ. ದಾಳಿಯನ್ನು ದೃಢೀಕರಿಸಿದ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್, ಜುಲೈ 31 ರ ರಾತ್ರಿ ಕಾಬೂಲ್‌ನ ಶೇರ್ಪುರ್ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆದಿದ್ದು, ಅಮೆರಿಕದ ಡ್ರೋನ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಡ್ರೋನ್ ದಾಳಿಯನ್ನು ತಾಲಿಬಾನ್ ಅಂತಾರಾಷ್ಟ್ರೀಯ ಕಾನೂನು ಮತ್ತು ದೋಹಾ ಒಪ್ಪಂದದ ಉಲ್ಲಂಘನೆ ಎಂದು ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.