ವಾಸ್ತು ಪ್ರಕಾರ ಕನ್ನಡಿಯನ್ನು ತಪ್ಪು ದಿಕ್ಕಿನಲ್ಲಿ ಇದುವುದರಿಂದ ಆರ್ಥಿಕ ತೊಂದರೆ ಎದುರಾಗುತ್ತದೆ
ಬೆಂಗಳೂರು : ಮನೆಯ ಗೋಡೆಯ ಮೇಲಿನ ಫೋಟೋ ಕೂಡ ನಿಮಗೆ ಹಾನಿ ಉಂಟು ಮಾಡಬಹುದು. ಅನೇಕ ಜನರು ಮನೆಯಲ್ಲಿ ಕನ್ನಡಿಯನ್ನು ತಪ್ಪು ದಿಕ್ಕಿನಲ್ಲಿ ಇಡುತ್ತಾರೆ. ವಾಸ್ತು ಪ್ರಕಾರ ಕನ್ನಡಿಯನ್ನು ತಪ್ಪು ದಿಕ್ಕಿನಲ್ಲಿ ಇದುವುದರಿಂದ ಆರ್ಥಿಕ ತೊಂದರೆ ಎದುರಾಗುತ್ತದೆ. ಯಾವ ರೀತಿಯ ಕನ್ನಡಿಯನ್ನು ಎಲ್ಲಿ ಹಾಕಬೇಕು ಎಂಬ ನಿಯಮವನ್ನು ಕೂಡಾ ವಾಸ್ತುವಿನಲ್ಲಿ ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವಾಸ್ತು ಶಾಸ್ತ್ರದಲ್ಲಿ ಮನೆ ಕಟ್ಟುವಾಗ ಮಾಸ್ಟರ್ ಬೆಡ್ ರೂಂ ಇರುವ ದಿಕ್ಕಿನ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಮಾಸ್ಟರ್ ಬೆಡ್ ರೂಂ ಮನೆಯ ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿರಬೇಕು. ಭೂಮಿಯ ಅಂಶವು ಅದರ ಹಿಂದೆ ಪ್ರಬಲವಾಗಿದೆ, ಆದರೆ ಕನ್ನಡಿಯನ್ನು ನೀರಿನ ಅಂಶವೆಂದು ಪರಿಗಣಿಸಲಾಗಿದೆ. ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಕನ್ನಡಿ ಹಾಕಬಾರದು.
ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಅನ್ನು ಇರಿಸಿದರೆ, ಅದರ ಕನ್ನಡಿ ಹಾಸಿಗೆಯ ಮುಂದೆ ಇರಬಾರದು. ಮನೆಯ ಕಪಾಟಿನಲ್ಲಿ ಕನ್ನಡಿ ಇದ್ದರೆ ಅದನ್ನು ಮುಚ್ಚಿಡಿ. ವಾಸ್ತು ಪ್ರಕಾರ, ಕನ್ನಡಿಯ ದಿಕ್ಕು ಮಲಗುವ ಕೋಣೆಯ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಇರಬೇಕು.
ಲಿವಿಂಗ್ ರೂಮಿನ ಮುಖ್ಯ ಬಾಗಿಲು ತೆರೆದಿದ್ದರೆ, ಬಾಗಿಲಿಗೆ ಎದುರಾಗಿ ಕನ್ನಡಿ ಹಾಕಬಾರದು. ಹೀಗೆ ಮಾಡಿದರೆ ಮನೆಯ ಹೊರಗಿನಿಂದ ಬರುವ ಉತ್ತಮ ಶಕ್ತಿಯು ಮನೆಯೊಳಗೆ ಬರದಂತೆ ಕನ್ನಡಿ ತಡೆಯುತ್ತದೆ.
ಲಿವಿಂಗ್ ರೂಮಿನಲ್ಲಿ ಕಿಟಕಿಯ ಎದುರು ಕನ್ನಡಿಯನ್ನು ಇರಿಸಿದರೆ, ಧನಾತ್ಮಕ ಶಕ್ತಿಯು ಮನೆಯ ಒಳಗೆ ಪ್ರವೇಶಿಸುತ್ತದೆ.