7th Pay Commission : ಕೇಂದ್ರ ನೌಕರರ ತುಟ್ಟಿಭತ್ಯೆ ನಿರೀಕ್ಷೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಶೀಘ್ರವೇ ಸರಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ. ಅಲ್ಲದೆ, ಯಾವ ದಿನ ತುಟ್ಟಿಭತ್ಯೆ ಬಿಡುಗಡೆ ಮಾಡಲಾಗುವುದು ಎನ್ನುವ ಬಗ್ಗೆ ದಿನಾಂಕ ಕೂಡಾ ನಿಗದಿಯಾಗಿದೆ. ಸರ್ಕಾರದಿಂದ ತುಟ್ಟಿಭತ್ಯೆಯ ಅಧಿಕೃತ ಘೋಷಣೆಯನ್ನು ಸೆಪ್ಟೆಂಬರ್ 28 ರಂದು ಮಾಡಲಾಗುವುದು. ಮಾತ್ರವಲ್ಲ ಸೆಪ್ಟೆಂಬರ್ ತಿಂಗಳ ವೇತನದೊಂದಿಗೆ ತುಟ್ಟಿ ಭತ್ಯೆಯನ್ನು ಕೂಡಾ ಪಾವತಿಸಲಾಗುವುದು. ಈ ಸಮಯದಲ್ಲಿ, ನೌಕರರು ಜುಲೈ-ಆಗಸ್ಟ್ ತಿಂಗಳ ಡಿಎ ಬಾಕಿಯ ಲಾಭವನ್ನೂ ಪಡೆಯಲಿದ್ದಾರೆ.
ಡಿಎ ಹೆಚ್ಚಳ ಏನಾಗಲಿದೆ?
AICPI-IW ಸೂಚ್ಯಂಕದ ಡೇಟಾವನ್ನು ಆಧರಿಸಿ ಉದ್ಯೋಗಿಗಳ ತುಟ್ಟಿಭತ್ಯೆ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. AICPI-IW ನ ಮೊದಲಾರ್ಧದ ಅಂಕಿಅಂಶಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಜೂನ್ನಲ್ಲಿ ಸೂಚ್ಯಂಕ 129.2 ತಲುಪಿದೆ. ಸೂಚ್ಯಂಕ ಏರಿಕೆಯಿಂದಾಗಿ ಡಿಎ ಹೆಚ್ಚಳವು ಶೇ 4ರಷ್ಟು ಹೆಚ್ಚಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ : Gold Price Today : ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ , ಬೆಳ್ಳಿ ಕೂಡಾ ಅಗ್ಗ
38% ಡಿಎ ಹಣ ಯಾವಾಗ ಬರುತ್ತದೆ?
ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿದ ನಂತರ ಕೇಂದ್ರ ನೌಕರರ ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆಯಾಗಿದೆ. ಹೆಚ್ಚಳವಾಗುವ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ 2022 ರ ವೇತನದಲ್ಲಿ ಪಾವತಿಸಲಾಗುತ್ತದೆ. ಹೊಸ ತುಟ್ಟಿಭತ್ಯೆ ಜುಲೈ 1, 2022 ರಿಂದ ಅನ್ವಯವಾಗುತ್ತದೆ. ಜುಲೈ, ಆಗಸ್ಟ್ ತಿಂಗಳ ಬಾಕಿಯೂ ಇದರಲ್ಲಿ ಸೇರಲಿದೆ.
ಎಷ್ಟು ಆಗಲಿದೆ ಡಿಎ :
ಶೇ.4ರಷ್ಟು ಹೆಚ್ಚಳವಾದರೆ ಡಿಎ ಶೇ.38ಕ್ಕೆ ಏರಿಕೆಯಾಗಲಿದೆ. ಪ್ರಸ್ತುತ ಕೇಂದ್ರ ನೌಕರರಿಗೆ ಸರ್ಕಾರದಿಂದ ಶೇ.34 ತುಟ್ಟಿ ಭತ್ಯೆ ನೀಡಲಾಗುತ್ತಿದೆ. ಡಿಎ ಶೇಕಡಾ 38 ಆಗಿರುವುದರಿಂದ ವೇತನದಲ್ಲಿ ಗಮನಾರ್ಹ ಜಿಗಿತ ಕಂಡುಬರಲಿದೆ. 4 ಶೇಕಡಾ DA ಯೊಂದಿಗೆ ಕನಿಷ್ಠ ಮತ್ತು ಗರಿಷ್ಠ ಮೂಲ ವೇತನವು ಎಷ್ಟು ಹೆಚ್ಚಾಗುತ್ತದೆ ಎಂದು ನೋಡೋಣ?
ಇದನ್ನೂ ಓದಿ : ಖಾಸಗಿ ಬ್ಯಾಂಕ್ ಗಳಲ್ಲಿಯೇ NRIಗಳು ಹೂಡಿಕೆ ಮಾಡಲು ಕಾರಣವೇನು? ಇಲ್ಲಿದೆ ನೋಡಿ ಉತ್ತರ
ಗರಿಷ್ಠ ಮೂಲ ವೇತನದ ಲೆಕ್ಕಾಚಾರ
1. ನೌಕರನ ಮೂಲ ವೇತನ 56,900 ರೂ.
2. ಹೊಸ ತುಟ್ಟಿಭತ್ಯೆ (38%) 21,622 ರೂ /ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) 19,346 ರೂ /ತಿಂಗಳು
4. ಹೆಚ್ಚಳವಾದ ತುಟ್ಟಿ ಭತ್ಯೆ - 21,622-19,346 = 2260 ರೂ /ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 2260 X12 = ರೂ 27,120
ಕನಿಷ್ಠ ಮೂಲ ವೇತನದ ಲೆಕ್ಕಾಚಾರ
1. ನೌಕರನ ಮೂಲ ವೇತನ 18,000 ರೂ
2. ಹೊಸ ತುಟ್ಟಿಭತ್ಯೆ (38%) 6840 ರೂ/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) 6120 ರೂ/ತಿಂಗಳು
4. ಹೆಚ್ಚಳವಾದ ತುಟ್ಟಿ ಭತ್ಯೆ 6840-6120 = 1080 ರೂ./ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 720X12=8640 ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.