ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿ ಭೇಟಿಯ ಮರ್ಮವೇನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘#BSYMukthaBJP ಅಧ್ಯಾಯ ಮುಗಿದಿದೆ ಎಂದುಕೊಳ್ಳುತ್ತಿರುವಾಗಲೇ ಯಡಿಯೂರಪ್ಪ ಪುನಃ ದೆಹಲಿಗೆ ಹೊರಟಿದ್ದಾರೆ. ಯತ್ನಾಳ್ ಹೇಳಿದಂತೆ #TirupatiAgreement ನಂತರ ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
#BSYMukthaBJP ಅಧ್ಯಾಯ ಮುಗಿದಿದೆ ಎಂದುಕೊಳ್ಳುತ್ತಿರುವಾಗಲೇ ಯಡಿಯೂರಪ್ಪ ಪುನಃ ದೆಹಲಿಗೆ ಹೊರಟಿದ್ದಾರೆ.
ಯತ್ನಾಳ್ ಹೇಳಿದಂತೆ #TirupatiAgreement
ನಂತರ ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ. @BSYBJP ದೆಹಲಿ ಭೇಟಿಯ ಮರ್ಮವೇನು?— Karnataka Congress (@INCKarnataka) August 26, 2022
ಇದನ್ನೂ ಓದಿ: ಕರಡು ಮತದಾರರ ಪಟ್ಟಿ ಬಿಡುಗಡೆ: ವರ್ಷಾಂತ್ಯದೊಳಗೆ ಬಿಬಿಎಂಪಿ ಚುನಾವಣೆ
ಭ್ರಷ್ಟಾಚಾರದ 'ಮರಿ' ಹೊರಬಂದಿದೆ!
‘#BJPBrashtotsava ಧಾರಾವಾಹಿಯು ದಿನಕ್ಕೊಂದು ಎಪಿಸೋಡ್ನಂತೆ ಹೊರಬರುತ್ತಿದೆ. ಕೊಡಗಿನಲ್ಲಿ ಬಿಜೆಪಿಯ ಅಕ್ರಮದ ಮೊಟ್ಟೆ ಒಡೆದು ಭ್ರಷ್ಟಾಚಾರದ 'ಮರಿ' ಹೊರಬಂದಿದೆ. ಅಧಿಕಾರಿ ಲಂಚ ಪಡೆದು ಸಿಕ್ಕಿಬಿದ್ದರು, ಶಾಸಕ ಬೋಪಯ್ಯ ಆ ಅಧಿಕಾರಿಯಿಂದಲೇ ಲಂಚ ಪಡೆದರು! ಭ್ರಷ್ಟಾಚಾರದ ಆಟ ಚೆನ್ನಾಗಿದೆ! ಸಿಎಂ ಬಸವರಾಜ್ ಬೊಮ್ಮಾಯಿಯವರೇ, ನಿಮ್ಮ ಪಾರದರ್ಶಕ ತನಿಖೆ ಯಾವಾಗ?’ ಎಂದು ‘ಕೈ’ಪಕ್ಷ ಪ್ರಶ್ನಿಸಿದೆ.
ಯತ್ನಾಳ್ ಬಿಜೆಪಿ ಭವಿಷ್ಯ ಹೇಳುವ ನಾಸ್ಟ್ರಾಡಾಮಸ್!
ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಭವಿಷ್ಯ ಹೇಳುವ ನಾಸ್ಟ್ರಾಡಾಮಸ್! ಅವರು ಬಾಯಲ್ಲಿ ಬಂದ #ThirupatiAgreement ಎಂಬ ಸಂಗತಿಯಲ್ಲಿ ಹಲವು ರಹಸ್ಯ ಅಡಗಿರುವುದು ಸತ್ಯ. ಸಿಎಂ ಬೊಮ್ಮಾಯಿಯವರೇ, ಏನು ಆ ರಹಸ್ಯ? ಬಿಟ್ ಕಾಯಿನ್ ಹಗರಣದ್ದೋ?, 40% ಕಮಿಷನ್ ವಿಚಾರದ್ದೋ?, ‘ಸಿಎಂ ಬದಲಾವಣೆ’ಗೆ ಸಂಬಂಧಿಸಿದ್ದೋ? ಅಥವಾ ಸಿಎಂ ಹುದ್ದೆಯ 2,500 ಕೋಟಿಯದ್ದೋ?’ ಎಂದು ಕಾಂಗ್ರೆಸ್ ಕುಟುಕಿದೆ.
ಇದನ್ನೂ ಓದಿ: ಸೆಪ್ಟೆಂಬರ್ 12 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲ ಅಧಿವೇಶನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.