NEET Result 2022: ರಾಜಸ್ಥಾನದ ತನಿಷ್ಕಾಗೆ ಪ್ರಥಮ, ಕರ್ನಾಟಕದ ಹೃಷಿಕೇಶ್‌ಗೆ 3ನೇ ಸ್ಥಾನ

ಎನ್‌ಟಿಎ ಮೂಲಗಳ ಪ್ರಕಾರ ಈ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ದೇಶದಾದ್ಯಂತ 17.64 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.

Written by - Puttaraj K Alur | Last Updated : Sep 8, 2022, 09:45 AM IST
  • ನೀಟ್ ಪರೀಕ್ಷೆಯಲ್ಲಿ ದೇಶದಾದ್ಯಂತ 9.93 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ
  • ರಾಜಸ್ಥಾನದ ತನಿಷ್ಕಾಗೆ ಪ್ರಥಮ ಸ್ಥಾನ & ಕರ್ನಾಟಕದ ರಿಷಿಕೇಶ್ ನಾಗಭೂಷಣ್‍ಗೆ 3ನೇ ಸ್ಥಾನ
  • 17.64 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು
NEET Result 2022: ರಾಜಸ್ಥಾನದ ತನಿಷ್ಕಾಗೆ ಪ್ರಥಮ, ಕರ್ನಾಟಕದ ಹೃಷಿಕೇಶ್‌ಗೆ 3ನೇ ಸ್ಥಾನ title=
NEET UG Exam Result 2022

ನವದೆಹಲಿ: ದೇಶದ ವಿವಿಧ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬುಧವಾರ NEET-UG ಫಲಿತಾಂಶ ಪ್ರಕಟಿಸಿದೆ. ಈ ಪರೀಕ್ಷೆಯ ಮೂಲಕ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡಲಾಗುತ್ತದೆ. ಈ ಪರೀಕ್ಷೆಯಲ್ಲಿ ದೇಶದಾದ್ಯಂತ 9.93 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ರಾಜಸ್ಥಾನದ ತನಿಷ್ಕಾ ಪ್ರಥಮ ಸ್ಥಾನ ಪಡೆದರೆ, ದೆಹಲಿಯ ವಸ್ತ ಆಶೀಶ್ ಬಾತ್ರಾ ದ್ವಿತೀಯ ಮತ್ತು ಕರ್ನಾಟಕದ ರಿಷಿಕೇಶ್ ನಾಗಭೂಷಣ್ ಗಂಗುಲೆ 3ನೇ ಸ್ಥಾನ ಪಡೆದಿದ್ದಾರೆ.  

17.64 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು

ಎನ್‌ಟಿಎ ಮೂಲಗಳ ಪ್ರಕಾರ ಈ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ದೇಶದಾದ್ಯಂತ 17.64 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಉತ್ತೀರ್ಣರಾದವರಲ್ಲಿ ಉತ್ತರಪ್ರದೇಶಲದಲ್ಲಿ ಅತಿ ಹೆಚ್ಚು 1.17 ಲಕ್ಷ ಅಭ್ಯರ್ಥಿಗಳು ಇದ್ದಾರೆ. ಅದೇ ರೀತಿ ಮಹಾರಾಷ್ಟ್ರದಿಂದ 1.13 ಲಕ್ಷ ಮತ್ತು ರಾಜಸ್ಥಾನದಿಂದ 82,548 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. NTA ಈ ವರ್ಷದ ಜುಲೈ 17ರಂದು ಭಾರತದ 497 ನಗರಗಳಲ್ಲಿ ಮತ್ತು ದೇಶದ ಹೊರಗಿನ 14 ನಗರಗಳ 3,570 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಿತ್ತು. ಶೇ.95 ರಷ್ಟು ಅಭ್ಯರ್ಥಿಗಳು ಈ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: 2023ರಲ್ಲಿ ಜೆಡಿಎಸ್ ಸರ್ಕಾರ ಬಂದರೆ ನೀಟ್ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯ: ಎಚ್​ಡಿಕೆ

13 ಭಾಷೆಗಳಲ್ಲಿ ಪರೀಕ್ಷೆ

ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇಂಗ್ಲಿಷ್, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 13 ಭಾಷೆಗಳ ಆಯ್ಕೆಯನ್ನು ಸಂಸ್ಥೆ ನೀಡಿತ್ತು. NTA ಮೊದಲ ಬಾರಿಗೆ NEET-UG ಗಾಗಿ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್, ದುಬೈ ಮತ್ತು ಕುವೈತ್‌ನಲ್ಲಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿದೆ.

ಪ್ರತಿ ವರ್ಗಕ್ಕೂ ಪ್ರತ್ಯೇಕ ಉತ್ತೀರ್ಣ ಅಂಕಗಳು

ಉತ್ತೀರ್ಣರಾದವರಲ್ಲಿ 4 ವಿದ್ಯಾರ್ಥಿಗಳು 720ಕ್ಕೆ 715 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಭ್ಯರ್ಥಿಗಳು ಟಾಪ್ 5ರಲ್ಲಿದ್ದಾರೆ. ಒಟ್ಟು 9 ಅಭ್ಯರ್ಥಿಗಳು 720ಕ್ಕೆ 710 ಅಂಕ ಗಳಿಸಿದ್ದಾರೆ. ಇವರು ಅಖಿಲ ಭಾರತ ಮಟ್ಟದಲ್ಲಿ 6 ರಿಂದ 14ನೇ ರ್ಯಾಂಕ್ ಪಡೆದಿದ್ದಾರೆ. ಈ ಬಾರಿ NEET-UGನಲ್ಲಿ ಅರ್ಹತೆ ಪಡೆಯಲು ವರ್ಗವಾರು ವಿಭಿನ್ನ ಅಂಕಗಳನ್ನು ನಿಗದಿಪಡಿಸಲಾಗಿದೆ. ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳು 720 ಅಂಕಗಳಿಗೆ 116-93 ಅಂಕಗಳನ್ನು ಗಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅದೇ ರೀತಿ ಈ ಅರ್ಹತೆಯನ್ನು ಸಾಮಾನ್ಯ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 116-105 ಅಂಕಗಳಿಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: NEET ಪರೀಕ್ಷೆ ವಿದ್ಯಾರ್ಥಿಗಳು & ಪೋಷಕರ ಪಾಲಿಗೆ ಮರಣಶಾಸನವಾಗಿದೆ: ಎಚ್​ಡಿಕೆ

NEET UG 2022 ಫಲಿತಾಂಶ ನೋಡುವುದು ಹೇಗೆ?

  • ನೀವು ಮೊದಲಿಗೆ ನೀಟ್‍ನ ಅಧಿಕೃತ ವೆಬ್‌ಸೈಟ್‌ neet.nta.nic.in ಅಥವಾ ntaresults.nic.in ಗೆ ಭೇಟಿ ನೀಡಬೇಕು
  • ನಂತರ ಮುಖಪುಟದಲ್ಲಿ ‘NEET UG – 2022 Result 2022’ ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಕು
  • ಬಳಿಕ ನಿಮ್ಮ ಲಾಗಿನ್‌ ಐಡಿ, ಜನ್ಮ ದಿನಾಂಕ, ನೋಂದಣಿ ಸಂಖ್ಯೆ ನಮೂದಿಸಬೇಕು.
  • ಈಗ ನಿಮಗೆ ‘NEET UG Result’ ಪರದೆಯ ಮೇಲೆ ಕಾಣಿಸುತ್ತದೆ.
  • ಬಳಿಕ ಅದರ ಮೇಲೆ ಕ್ಲಿಕ್ ಮಾಡಿ ರಿಸಲ್ಟ್ ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‍ಔಟ್ ತೆಗೆದುಕೊಳ್ಳಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News