IND vs NZ 2022 : ಭಾರತ - ನ್ಯೂಜಿಲೆಂಡ್‌ ಟೆಸ್ಟ್ ಪಂದ್ಯ ಮುಂದೂಡಿಕೆ

ವಾಣಿಜ್ಯನಗರಿ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ  ಭಾರತ-ಎ ಹಾಗೂ ನ್ಯೂಜಿಲೆಂಡ್‌-ಎ ತಂಡಗಳ ನಡುವಣ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯವು ನಾಳೆಗೆ ಮುಂದೂಡಿಕೆಯಾಗಿದೆ.

Written by - Chetana Devarmani | Last Updated : Sep 8, 2022, 06:26 PM IST
  • ಭಾರತ - ನ್ಯೂಜಿಲೆಂಡ್‌ ಟೆಸ್ಟ್ ಪಂದ್ಯ
  • ಟೆಸ್ಟ್ ಪಂದ್ಯ ಮುಂದೂಡಿಕೆ
  • ತೇವಾಂಶ ಹೆಚ್ಚಿದ್ದ ಕಾರಣ ಮುಂದೂಡಿಕೆ
IND vs NZ 2022 : ಭಾರತ - ನ್ಯೂಜಿಲೆಂಡ್‌ ಟೆಸ್ಟ್ ಪಂದ್ಯ ಮುಂದೂಡಿಕೆ  title=
ಭಾರತ - ನ್ಯೂಜಿಲೆಂಡ್‌

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ  ಭಾರತ-ಎ ಹಾಗೂ ನ್ಯೂಜಿಲೆಂಡ್‌-ಎ ತಂಡಗಳ ನಡುವಣ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯವು ನಾಳೆಗೆ ಮುಂದೂಡಿಕೆಯಾಗಿದೆ. ಮೈದಾನದಲ್ಲಿ ತೇವಾಂಶ ಹೆಚ್ಚಿದ್ದ ಕಾರಣ ಬೆಳಿಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಸುಮಾರು ಕಾಲ ವಿಳಂಬವಾಗಿತ್ತು. ಈ ನಡುವೆ ಮಧ್ಯಾಹ್ನದ ವರೆಗೂ ಕೂಡ ತೇವಾಂಶ ಹಿಡಿತಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪಂದ್ಯ ನಾಳೆಗೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: Team India : ಏಷ್ಯಾಕಪ್ ಸೋಲಿನ ನಂತರ, ಟೀಂ ಇಂಡಿಯಾದಲ್ಲಿ ಮಾಡಬೇಕು ಈ 3 ಬದಲಾವಣೆಗಳು!

ನಿನ್ನೆ ರಾತ್ರಿ ಹಾಗೂ ಇಂದು ನಸುಕಿನಲ್ಲಿ ಸ್ವಲ್ಪ ಮಳೆಯಾಗಿದ್ದು, ಕ್ರೀಡಾಂಗಣ ತೇವಗೊಂಡಿದೆ. ಕ್ರೀಡಾಂಗಣದ ಹಲವು ಸಿಬ್ಬಂದಿ ತೇವಾಂಶ ಹೊರಹಾಕಲು ಶ್ರಮಿಸುತ್ತಿದ್ದಾರೆ. ಅಪರೂಪಕ್ಕೆ ನಡೆಯುವ ಇಂಥ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಕ್ರೀಡಾಂಗಣದಲ್ಲಿ ನೆರೆದಿದ್ದು, ಪಂದ್ಯದ ಆರಂಭಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಆಗೀಗ ಕ್ರೀಡಾಂಗಣಕ್ಕೆ ಬರುವ ನ್ಯೂಜಿಲೆಂಡ್‌ ಹಾಗೂ ಭಾರತ ತಂಡದ ಆಟಗಾರರನ್ನು ಕಂಡು, ಕೂಗಿ, ಕೈಬೀಸಿ ಸಂಭ್ರಮಿಸಿದ ದೃಶ್ಯ ಕಂಡುಬಂತು. ಕಳೆದ ಮೂರು ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಸಲು ಬಿಸಿಸಿಐ ಅವಕಾಶ ನೀಡಿದ್ದು ಸಾಕಷ್ಟು ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ ತೇವಾಂಶ ಹಾಗೂ ಮೇಲಿಂದ ಮೇಲೆ ತುಂತುರು ಮಳೆಯಿಂದ ಪಂದ್ಯ ನಾಳೆಗೆ ಮುಂದೂಡಿಕೆಯಾಗಿದೆ. ಕ್ರಿಕೆಟ್ ಪಂದ್ಯಾವಳಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನೋಂದಾಯಿತ ಅಕಾಡೆಮಿಯ ಕ್ರಿಕೆಟ್ ಕಲಿಕಾ ಆಟಗಾರರು ಒಳಗೊಂಡಂತೆ ಸುಮಾರು 2 ಸಾವಿರ ಜನರಿಗೆ ಉಚಿತ ಪ್ರವೇಶ ನೀಡಲಾಗಿದೆ.

ಇದನ್ನೂ ಓದಿ: Asia Cup 2022: ‘ಕೊಹ್ಲಿ & ರೋಹಿತ್ ಮೇಲಿನ ಒತ್ತಡದಿಂದ ತಂಡವೇ ಹಾಳಾಗುತ್ತಿದೆ’!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News