Kiccha Sudeep : ಬೆಂಗಳೂರು ನೆರೆ ಸಂತ್ರಸ್ತರಿಗೆ ಕಿಚ್ಚ ಸುದೀಪ್ ಸಹಾಯ ಹಸ್ತ

Bengaluru Flood : ಬೆಂಗಳೂರಿನ ಸಂತ್ರಸ್ತರಿಗೆ ಅಗತ್ಯ ಆಹಾರ, ಸಾಮಾಗ್ರಿಗಳನ್ನ ಒದಗಿಸುವ ಮೂಲಕ ಅಭಿನಯ ಚಕ್ರವರ್ತಿ ಸುದೀಪ್ ನೆರವಿನ ಹಸ್ತ ಚಾಚಿದ್ದಾರೆ.‌ 

Written by - K Karthik Rao | Edited by - Chetana Devarmani | Last Updated : Sep 10, 2022, 04:53 PM IST
  • ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಪರದಾಡುವಂತಹ ಪರಿಸ್ಥಿತಿ
  • ಬೆಂಗಳೂರಿನ ಸಂತ್ರಸ್ತರಿಗೆ ಅಗತ್ಯ ಆಹಾರ, ಸಾಮಾಗ್ರಿ ವಿತರಣೆ
  • ಬೆಂಗಳೂರು ನೆರೆ ಸಂತ್ರಸ್ತರಿಗೆ ಕಿಚ್ಚ ಸುದೀಪ್ ಸಹಾಯ ಹಸ್ತ

Trending Photos

Kiccha Sudeep : ಬೆಂಗಳೂರು ನೆರೆ ಸಂತ್ರಸ್ತರಿಗೆ ಕಿಚ್ಚ ಸುದೀಪ್ ಸಹಾಯ ಹಸ್ತ  title=
ಕಿಚ್ಚ ಸುದೀಪ್

Kiccha Sudeep : ಕೆಲವು ದಿನಗಳಿಂದ ರಾಜ್ಯದೆಲ್ಲೆಡೆ ಧಾರಕಾರ ಮಳೆಯಾಗುತ್ತಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಅಪಾರ ಪ್ರಮಾಣದ ಬೆಳೆ ಹಾನಿ, ಸಾವು-ನೋವುಗಳು ಸಂಭವಿಸಿವೆ. ಅದ್ರಲ್ಲೂ ಕೆಲದಿನಗಳಿಂದ ಬೆಂಗಳೂರಿನ ಮಳೆ ಇಡೀ ದೇಶದ ಗಮನ ಸೆಳೆದಿತ್ತು. ಬೆಂಗಳೂರಲ್ಲೂ ಕೂಡ ಮಳೆಯಿಂದ ಹಲವೆಡೆ  ತೊಂದರೆಯಾಗಿದೆ. ಸಾಕಷ್ಟು ಜನ ಮಳೆಯಿಂದ ಅಗತ್ಯ ವಸ್ತುಗಳಿಗೂ ಪರದಾಡುವಂತೆ ಆಗಿದೆ. ಹಾನಿಗೊಳಗಾದ ಪ್ರದೇಶದ ಶಾಲಾ ಕಾಲೇಜುಗಳಿ ರಜೆ ಕೂಡ ಘೋಷಿಸಲಾಗಿತ್ತು ಅಷ್ಟರ ಮಟ್ಟಿಗೆ ಮಳೆ ಬೆಂಗಳೂರನ್ನ ಕಾಡಿತ್ತು. ಇದೀಗ ಬೆಂಗಳೂರಿನ ಮಳೆ ಹಾನಿ ಸಂತ್ರಸ್ತರಿಗೆ ಕಿಚ್ಚ ಸುದೀಪ್ ನೆರವು ನೀಡಿದ್ದಾರೆ.

ಇದನ್ನೂ ಓದಿ : Mahalakshmi - Ravindar : ಹನಿಮೂನ್ ಮೂಡ್‌ನಲ್ಲಿ ಮಹಾಲಕ್ಷ್ಮಿ, ರವೀಂದರ್

ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಅಗತ್ಯ ವಸ್ತುಗಳಿಗೂ ಪರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಬೆಂಗಳೂರಿನ ಸಂತ್ರಸ್ತರಿಗೆ ಅಗತ್ಯ ಆಹಾರ, ಸಾಮಾಗ್ರಿಗಳನ್ನ ವದಗಿಸುವ ಮೂಲಕ ಅಭಿನಯ ಚಕ್ರವರ್ತಿ ಸುದೀಪ್ ನೆರವಿನ ಹಸ್ತ ಚಾಚಿದ್ದಾರೆ.‌ 

ಸುದೀಪ್ ರವರ 'ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್' ಈ ಹೆಸರನ್ನ ನೀವು ಕೇಳೆ ಇರ್ತಿರ. ಬಡ ಕುಟುಂಬಗಳಿಗೆ, ಆರೋಗ್ಯ ಪೀಡಿತ ಮಕ್ಕಳಿಗೆ ಸದಾ ಒಂದಲ್ಲ ಒಂದು ರೀತಿ ನೇರವು ಆಗ್ತಾಇರುತ್ತೆ ಸರ್ಕಾರಿ ಶಾಲೆಗಳು ಹಾಗೂ ಕೆಲ ಗ್ರಾಮಗಳನ್ನೂ ಸಹ ದತ್ತು ಪಡೆದುಕೊಂಡು ಮುನ್ನಡೆಸುತಿದ್ದಾರೆ ಸುದೀಪ್. ಇದೀಗ ಈ ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ಮೂಲಕ ಬೆಂಗಳೂರಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸುದೀಪ್ ಮತ್ತು ಅವರ ಟೀಂ ನೆರವು ನೀಡಿದ್ದಾರೆ. ಅಗತ್ಯ ಆಹಾರ ಮತ್ತು ಸಾಮಾಗ್ರಿ ವದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ : Viral Video : ಪ್ರಾಧ್ಯಾಪಕರ ಮುಂದೆ ಕಿಸ್‌ ಮಾಡಿದ ಲವರ್ಸ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News