Man cut King Cobra head and took out Nagamani pearl : ನಾಗಮಣಿ.. ಈ ಹೆಸರನ್ನು ಹಲವರು ಹಲವು ಬಾರಿ ಕೇಳಿರುತ್ತೀರಾ. ನಾಗರ ಹಾವಿನ ತಲೆಯ ಮೇಲೆ ‘ರತ್ನ’ವಿದೆ ಎಂದು ಹಿರಿಯರು ಹೇಳಿರುವುದನ್ನ ನೀವು ಕೇಳಿರಬಹುದು, ಇದಕ್ಕೆ ‘ನಾಗಮಣಿ’ ಎನ್ನುತ್ತಾರೆ. ನಾಗಮಣಿಗೆ ಸಂಬಂಧಿಸಿದ ಅನೇಕ ಕಥೆಗಳನ್ನು ಪುಸ್ತಕಗಳಲ್ಲಿ ಮತ್ತು ಸಿನಿಮಾಗಲ್ಲಿ ನೋಡಿದ್ದೇವೆ. ಆದರೆ ಸತ್ಯ ಏನು ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಕೆಲವರು ನಾಗಮಣಿ ಇದೆ ಎಂದು ಹೇಳಿದರೆ, ಇನ್ನು ಕೆಲವರು ನಾಗಮಣಿ ಇಲ್ಲ ಎನ್ನುತ್ತಾರೆ. ಆದರೆ ಇಲ್ಲಿ ವ್ಯಕ್ತಿಯೊಬ್ಬ ನಾಗರಹಾವಿನ ತಲೆಯಿಂದ ನಾಗಮಣಿಯನ್ನ ಹೊರತೆಗೆದಿರುವ ವಿಡಿಯೋ ವೈರಲ್ ಆಗಿದೆ. ಆದ್ರೆ, ನಿಜವಾಗ್ಲೂ ಇದು ನಾಗಮಣಿ ಹೌದ ಅಥವಾ ಅಲ್ಲವೇ ಎಂಬುವುದು ಗೊತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾತ್ರ ಸಖತ್ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ, ಹೊಲಗಳ ನಡುವಿನ ಕಾಲು ರಸ್ತೆಯಲ್ಲಿ ನಾಗರಹಾವು ಒಂದು ಹೊತ್ತಿರುತ್ತದೆ. ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೂಬ್ಬ ಅದನ್ನ ತಡೆಯುತ್ತಾನೆ. ಆ ವ್ಯಕ್ತಿ ಅದನ್ನ ಮುಟ್ಟಿದ ತಕ್ಷಣ ಹಾವು ಸುರುಳಿ ಸುತ್ತಿಕೊಂಡು ಹಿಂದಕ್ಕೆ ಹೋಗುತ್ತದೆ. ಹಾವು ಗದ್ದೆಗೆ ರಸ್ತೆ ದಾಟಲು ಪ್ರಯತ್ನಿಸಿದಾಗ, ವ್ಯಕ್ತಿ ಅದರ ಬಾಲ ಹಿಡಿದು ರಸ್ತೆ ಬದಿಗೆ ತರುತ್ತಾನೆ. ಆಗ, ನಾಗರಹಾವು ಅವನ ಕೈ ಕಚ್ಚಲು ಪ್ರಯತ್ನಿಸುತ್ತದೆ.. ಅವನು ಜಾಣತನದಿಂದ ಪಾರಾಗುತ್ತಾನೆ.
ಇದನ್ನೂ ಓದಿ : ಶಾಲೆಯಲ್ಲಿ ಈ ರೀತಿಯ ವರ್ತನೆ ಎಷ್ಟು ಸರಿ ? ವೈರಲ್ ಆಯಿತು ವಿದ್ಯಾರ್ಥಿಗಳ ಲವ್ವಿ ಡವ್ವಿ ವೀಡಿಯೊ
ಕೊನೆಗೆ ನಾಗರ ಹಾವನ್ನು ಹಿಡಿದ ವ್ಯಕ್ತಿ.. ಅದರ ತಲೆಯನ್ನು ಚಾಕುವಿನಿಂದ ಕತ್ತರಿಸಿ. ಅದರೊಳಗಿಂದ ಒಂದು ಸಣ್ಣ ರತ್ನದಂತಹ ವಸ್ತು ಹೊರ ತೆಗೆಯುತ್ತಾನೆ. ತದನಂತರ ನಾಗರಹಾವನ್ನು ಬಿಡುತ್ತಾನೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋ ಹಳೆಯದಾದರೂ ಈಗ ಮತ್ತೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಇದು ನಿಜಕ್ಕೂ ನಾಗಮಣಿಯೇ ಎಂದು ಕಾಮೆಂಟ್ ಮಾಡಿದ್ದಾರೆ. ಸಧ್ಯ ಈ ವೀಡಿಯೊ 11,165,908 ವಿವ್ಸ್ ಪಡೆದುಕೊಂಡಿದೆ.
ವರಾಹ ಮಿಹಿರು ಬರೆದ ಬೃಹತ್ ಸಂಹಿತೆಯ ಪ್ರಕಾರ.. ನಾಗಮಣಿ ಕಾಲ್ಪನಿಕವಲ್ಲ. ಇದು ಹಾವಿನ ತಲೆಯ ಮೇಲಿದೆ ಎಂದು ಹೇಳಲಾಗುತ್ತದೆ. ನಾಗರ ಹಾವುಗಳು ಕಂಡು ಬರುವುದು ಬಹಳ ಅಪರೂಪ. ನಾಗಮಣಿಯನ್ನು ಹೊಂದಿರುವ ಹಾವು ತುಂಬಾ ಪ್ರಕಾಶಮಾನವಾಗಿ ಹೊಳೆಯುತ್ತದೆ ಎಂದು ವರಾಹ ಮಿಹಿರು ಹೇಳುತ್ತಾರೆ. ಆ ಹಾವಿನಿಂದ ಹೊರಹೊಮ್ಮುವ ಬೆಳಕು ಬೆಂಕಿಯಂತೆ ಬೆಳಕನ್ನು ನೀಡುತ್ತದೆ. ಹಾವು ಇರುವ ಪ್ರದೇಶವೆಲ್ಲ ಪ್ರಖರವಾಗಿ ಕಾಣುತ್ತದೆ ಎಂದು ವರಾಹ ಮಿಹಿರು ಹೇಳಿದ್ದಾರೆ.
ಇದನ್ನೂ ಓದಿ : Viral Video: ಈ ಆಂಟಿ ಬಲು ತುಂಟಿ! ಪಾರ್ಕ್‌ಗೆ ಬಂದು ಮಾಡಿರೋದೇನು ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.