Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದ ಬಳಿ ಮಿಸ್ ಆಗಿಯೂ ಸಹ ಕೆಲವು ವಸ್ತುಗಳನ್ನು ಇಡಲೇಬಾರದು ಎಂದು ಹೇಳಲಾಗುತ್ತದೆ.
Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದ ಬಳಿ ಮಿಸ್ ಆಗಿಯೂ ಸಹ ಕೆಲವು ವಸ್ತುಗಳನ್ನು ಇಡಲೇಬಾರದು ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ಮನೆಯ ಮುಖ್ಯದ್ವಾರದ ಬಳಿ ಕೆಲವು ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ. ಇದರಿಂದ ಮನೆಯ ಶಾಂತಿ ನೆಮ್ಮದಿ ಹಾಳಾಗುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ, ವಾಸ್ತು ಶಾಸ್ತ್ರದಲ್ಲಿ ಅನೇಕ ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸುವುದರಿಂದ ಅಂತಹ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರವು ಕೇವಲ ಮನೆಯನ್ನು ಪ್ರವೇಶಿಸುವ ದಾರಿಯಲ್ಲ. ಮನೆಯಲ್ಲಿ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯ ಪ್ರವೇಶವೂ ಇಲ್ಲಿಂದಲೇ ನಡೆಯುತ್ತದೆ. ಅದಕ್ಕಾಗಿಯೇ ಜನರು ಯಾವಾಗಲೂ ಮನೆಯ ಗೇಟ್ ಅನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಮನೆಯ ಮುಖ್ಯ ಬಾಗಿಲಿಗೆ ಸಂಬಂಧಿಸಿದಂತೆ ವಾಸ್ತುದಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಈ ಸಲಹೆಗಳನ್ನು ಅನುಸರಿಸುವ ಮನೆಗಳಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರದ ಬಳಿ ಎಂದಿಗೂ ಸಹ ಕೆಲವು ವಸ್ತುಗಳನ್ನು ಇಡಲೇಬಾರದು ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕಸ: ಮನೆಯ ಮುಖ್ಯ ದ್ವಾರದ ಬಳಿ ಎಂದಿಗೂ ಸಹ ಕಸ ಹಾಕಬಾರದು. ಇದರಿಂದ ನಕಾರಾತ್ಮಕ ಶಕ್ತಿ ಮನೆಯೊಳಗೆ ಬರುತ್ತದೆ. ಮಾತ್ರವಲ್ಲ, ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ಸಹ ಇದರಿಂದ ಕೋಪಗೊಳ್ಳುತ್ತಾಳೆ. ಇದರಿಂದಾಗಿ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಶೂ, ಚಪ್ಪಲಿ ಇತ್ಯಾದಿ : ಶೂ ಮತ್ತು ಚಪ್ಪಲಿಗಳನ್ನು ಮನೆಯ ಮುಖ್ಯ ಗೇಟಿನ ಹೊರಗೆ ಅಥವಾ ಹತ್ತಿರ ಇಡಬಾರದು. ತಾಯಿ ಲಕ್ಷ್ಮಿಯು ಮುಖ್ಯ ದ್ವಾರದ ಮೂಲಕವೇ ಮನೆಯನ್ನು ಪ್ರವೇಶಿಸುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ಎದುರಿಗೆ ಪಾದರಕ್ಷೆ ಮತ್ತು ಚಪ್ಪಲಿಗಳನ್ನು ಕಂಡಾಗತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಇದರಿಂದ ಮನೆಯಲ್ಲಿ ಹಣದ ನಷ್ಟವಾಗಬಹುದು ಎನ್ನಲಾಗುವುದು.
ಮನಿ ಪ್ಲಾಂಟ್: ಅನೇಕ ಜನರು ಮುಖ್ಯ ದ್ವಾರದ ಹೊರಗೆ ಮನಿ ಪ್ಲಾಂಟ್ ನೆಡುತ್ತಾರೆ. ಆದರೆ ವಾಸ್ತು ಪ್ರಕಾರ ಹೀಗೆ ಮಾಡುವುದು ಸರಿಯಲ್ಲ. ಮನಿ ಪ್ಲಾಂಟ್ ಅನ್ನು ಸಂಪತ್ತಿನ ಸಸ್ಯವೆಂದು ಪರಿಗಣಿಸಲಾಗುತ್ತದೆ. ಮನೆಯ ಹೊರಗೆ ನೆಟ್ಟರೆ ಎಲ್ಲರ ಕಣ್ಣು ಅದರ ಮೇಲೆ ಬೀಳುತ್ತದೆ. ಇದರಿಂದ ಮನೆಯ ಆರ್ಥಿಕ ಸ್ಥಿತಿ ಹದಗೆಡುತ್ತದೆ.
ಪೊರಕೆ: ವಾಸ್ತುವಿನಲ್ಲಿ ಪೊರಕೆಯನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅದನ್ನು ಎಂದಿಗೂ ಬಾಗಿಲಿನ ಬಳಿ ಇಡಬಾರದು. ಏಕೆಂದರೆ ಹೀಗೆ ಮಾಡುವುದರಿಂದ ನೀವು ಆಕಸ್ಮಿಕವಾಗಿ ಪೊರಕೆಯನ್ನು ತುಳಿಯಬಹುದು. ಇದರ ಹೊರತಾಗಿ ಯಾರೂ ಪೊರಕೆಯತ್ತ ನೋಡಬಾರದು. ಆದ್ದರಿಂದ,, ಪೊರಕೆಯನ್ನು ಎಂದಿಗೂ ಮುಖ್ಯ ದ್ವಾರದ ಬಳಿ ಇಡಬೇಡಿ. ಬದಲಿಗೆ ಅದನ್ನು ಯಾರಿಗೂ ಕಾಣದ ಜಾಗದಲ್ಲಿ ಇಡಿ.
ವಿದ್ಯುತ್ ತಂತಿಗಳು ಅಥವಾ ಕಂಬಗಳು: ಮನೆಯ ಮುಖ್ಯ ಬಾಗಿಲಿನ ಮುಂದೆ ವಿದ್ಯುತ್ ತಂತಿಗಳು ಅಥವಾ ಕಂಬಗಳು ಇರಬಾರದು. ಇದು ಕೆಟ್ಟ ಪರಿಣಾಮ ಬೀರುತ್ತದೆ. ವಿದ್ಯುತ್ ತಂತಿ, ಕಂಬಗಳು ಬಿದ್ದಿರುವುದರಿಂದ ಮನೆಯಲ್ಲಿ ಮಹಿಳೆಯರು ಮಕ್ಕಳಿಗೆ ತೊಂದರೆ ಆಗುತ್ತದೆ. ಮಾತ್ರವಲ್ಲ, ಇದು ಮನೆಯ ಆರ್ಥಿಕ ಸ್ಥಿತಿಯ ಮೇಲೂ ಸಹ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.