ವಿಶ್ವಸಂಸ್ಥೆಯಲ್ಲಿ ಮಹಾತ್ಮಾ ಗಾಂಧಿ ಪ್ರತ್ಯಕ್ಷ..!

ಮೊದಲ ಬಾರಿಗೆ, ಮಹಾತ್ಮಾ ಗಾಂಧಿಯವರು ವಿಶ್ವಸಂಸ್ಥೆಯಲ್ಲಿ ವಿಶೇಷವಾಗಿ ಕಾಣಿಸಿಕೊಂಡು ಶಿಕ್ಷಣದ ಬಗ್ಗೆ ತಮ್ಮ ಸಂದೇಶವನ್ನು ಹಂಚಿಕೊಂಡರು.ಅಕ್ಟೋಬರ್ 2 ರಂದು ಅಂತರಾಷ್ಟ್ರೀಯ ಅಹಿಂಸಾ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಸಂದೇಶ ಬಂದಿದೆ.

Written by - Zee Kannada News Desk | Last Updated : Oct 1, 2022, 08:01 PM IST
ವಿಶ್ವಸಂಸ್ಥೆಯಲ್ಲಿ ಮಹಾತ್ಮಾ ಗಾಂಧಿ ಪ್ರತ್ಯಕ್ಷ..! title=
file photo

ವಿಶ್ವಸಂಸ್ಥೆ: ಮೊದಲ ಬಾರಿಗೆ, ಮಹಾತ್ಮಾ ಗಾಂಧಿಯವರು ವಿಶ್ವಸಂಸ್ಥೆಯಲ್ಲಿ ವಿಶೇಷವಾಗಿ ಕಾಣಿಸಿಕೊಂಡು ಶಿಕ್ಷಣದ ಬಗ್ಗೆ ತಮ್ಮ ಸಂದೇಶವನ್ನು ಹಂಚಿಕೊಂಡರು.ಅಕ್ಟೋಬರ್ 2 ರಂದು ಅಂತರಾಷ್ಟ್ರೀಯ ಅಹಿಂಸಾ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಸಂದೇಶ ಬಂದಿದೆ.

ವಿಶ್ವಸಂಸ್ಥೆಯ ಭಾರತದ ಖಾಯಂ ಮಿಷನ್ ಮತ್ತು ಯುನೆಸ್ಕೋ ಮಹಾತ್ಮಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಅಂಡ್ ಸಸ್ಟೈನಬಲ್ ಡೆವಲಪ್‌ಮೆಂಟ್ (ಎಂಜಿಐಇಪಿ) ಶುಕ್ರವಾರದಂದು ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಅಂತರಾಷ್ಟ್ರೀಯ ದಿನದ ಸ್ಮರಣಾರ್ಥ ಆಯೋಜಿಸಿದ್ದ ಪ್ಯಾನೆಲ್ ಚರ್ಚೆಯಲ್ಲಿ ಗಾಂಧಿಯವರ ವಿಶೇಷ ಜೀವನ ಗಾತ್ರದ ಹೊಲೊಗ್ರಾಮ್ ಅನ್ನು ಪ್ರಕ್ಷೇಪಿಸಲಾಯಿತು.

ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಗುತ್ತದೆ. ಇದರ ಸ್ಮರಣಾರ್ಥ ಜೂನ್ 2007 ರ ಸಾಮಾನ್ಯ ಸಭೆಯ ನಿರ್ಣಯದ ಪ್ರಕಾರ, ಈ ದಿನವು ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ ಸೇರಿದಂತೆ ಅಹಿಂಸೆಯ ಸಂದೇಶವನ್ನು ಪ್ರಸಾರ ಮಾಡಲು ಒಂದು ವಿಶೇಷ ಸಂದರ್ಭವಾಗಿದೆ.

ಈ ನಿರ್ಣಯದಲ್ಲಿ ಅಹಿಂಸೆಯ ತತ್ವದ ಸಾರ್ವತ್ರಿಕ ಪ್ರಸ್ತುತತೆ ಮತ್ತು ಶಾಂತಿ, ಸಹನೆ, ತಿಳುವಳಿಕೆ ಮತ್ತು ಅಹಿಂಸೆಯ ಸಂಸ್ಕೃತಿಯನ್ನು ಭದ್ರಪಡಿಸುವ ಬಯಕೆಯನ್ನು ಪುನರುಚ್ಚರಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News