ಬಹುದಾಖಲೆ ಬರೆದ ಟೀಂ ಇಂಡಿಯಾ: ಮೊದಲ ಬಾರಿ ಭಾರತದಲ್ಲಿ ಸೋಲಿನ ರುಚಿ ಕಂಡ ಸೌತ್ ಆಫ್ರಿಕಾ

ಬ್ಯಾಟಿಂಗ್‌ಗೆ ಇಳಿದ ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ 10 ಓವರ್‌ಗಳಲ್ಲಿ 96 ರನ್ ಗಳಿಸುವುದರೊಂದಿಗೆ ಅಸಾಧಾರಣ ಆರಂಭವನ್ನು ಮಾಡಿದ್ದರು. ವಿರಾಟ್ ಕೊಹ್ಲಿ ಕೂಡ ಉತ್ತಮ ಲಯದಲ್ಲಿಯೇ ಫಾರ್ಮ್ ನಲ್ಲಿ ಆಟವಾಡಿದ್ದು ಒಂದು ರನ್ ಅಂತರದಿಂದ ಅರ್ಧ ಶತಕ ಮಿಸ್ ಮಾಡಿಕೊಂಡರು.

Written by - Bhavishya Shetty | Last Updated : Oct 3, 2022, 12:15 AM IST
    • ಬಹುದಾಖಲೆ ಬರೆದ ಟೀಂ ಇಂಡಿಯಾದ ಸಂಪೂರ್ಣ ಡೀಟೆಲ್ಸ್ ಇಲ್ಲಿದೆ
    • ಯಾದವ್ 18 ಎಸೆತಗಳಲ್ಲಿ ಅರ್ಧ ಶತಕವನ್ನು ಪೂರ್ಣಗೊಳಿಸಿದ್ದಾರೆ
    • ನಲ್ಲಿ ವೇಗವಾಗಿ 1000 ರನ್‌ಗಳನ್ನು ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆ
ಬಹುದಾಖಲೆ ಬರೆದ ಟೀಂ ಇಂಡಿಯಾ: ಮೊದಲ ಬಾರಿ ಭಾರತದಲ್ಲಿ ಸೋಲಿನ ರುಚಿ ಕಂಡ ಸೌತ್ ಆಫ್ರಿಕಾ title=
Team India

ಮೂರು ಪಂದ್ಯಗಳ ಸರಣಿಯ ಎರಡನೇ T20I ನಲ್ಲಿ ಗುವಾಹಟಿಯಲ್ಲಿ ಜಯಗಳಿಸುವ ಮೂಲಕ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಮೊಟ್ಟಮೊದಲ ಸರಣಿ ಜಯವನ್ನು ಖಚಿತಪಡಿಸಿದೆ. ಭಾರತದಲ್ಲಿ ಆಡಿದ ಹಿಂದಿನ ಮೂರು ಸರಣಿಗಳಲ್ಲಿ, ದಕ್ಷಿಣ ಆಫ್ರಿಕಾ ಒಮ್ಮೆ (2015) ಅಗ್ರಸ್ಥಾನ ಪಡೆದಿದ್ದರೆ ಉಳಿದ ಎರಡು ಸರಣಿಗಳು ಡ್ರಾಗೊಂಡಿದ್ದವು (2019, 2022). 

ಇದನ್ನೂ ಓದಿ: ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ, ರೋಹಿತ್ ಬದಲಿಗೆ ಈ ಆಟಗಾರ ಕ್ಯಾಪ್ಟನ್!

ಬ್ಯಾಟಿಂಗ್‌ಗೆ ಇಳಿದ ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ 10 ಓವರ್‌ಗಳಲ್ಲಿ 96 ರನ್ ಗಳಿಸುವುದರೊಂದಿಗೆ ಅಸಾಧಾರಣ ಆರಂಭವನ್ನು ಮಾಡಿದ್ದರು. ವಿರಾಟ್ ಕೊಹ್ಲಿ ಕೂಡ ಉತ್ತಮ ಲಯದಲ್ಲಿಯೇ ಫಾರ್ಮ್ ನಲ್ಲಿ ಆಟವಾಡಿದ್ದು ಒಂದು ರನ್ ಅಂತರದಿಂದ ಅರ್ಧ ಶತಕ ಮಿಸ್ ಮಾಡಿಕೊಂಡರು. ಇನ್ನು ಸೂರ್ಯ ಕುಮಾರ್ ಯಾದವ್ ಮತ್ತೊಮ್ಮೆ ಪಂದ್ಯದ ಸಂಪೂರ್ಣ ಬಣ್ಣವನ್ನು ಬದಲಾಯಿಸಿದರು ಎನ್ನಬಹುದು.

ಭಾರತದ ಮಿಸ್ಟರ್ 360 ಎಂದೇ ಖ್ಯಾತಿ ಪಡೆದ ಯಾದವ್ 18 ಎಸೆತಗಳಲ್ಲಿ ಅರ್ಧ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆದರೆ 2007ರ ICC T20 ವಿಶ್ವಕಪ್‌ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆಯನ್ನು ಯುವರಾಜ್ ಸಿಂಗ್ ಈಗಲೂ ಹೊಂದಿದ್ದಾರೆ. ಯಾದವ್ ಅವರು ಅದ್ಭುತ ಅರ್ಧಶತಕವನ್ನು ಬಾರಿಸುವ ಮೂಲಕ ಕೆಎಲ್ ರಾಹುಲ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

ಯಾದವ್ ಅವರು ತಮ್ಮ ನಾಕ್ ಸಮಯದಲ್ಲಿ ಮತ್ತೊಂದು ದಾಖಲೆಯನ್ನು ಸಹ ರಚಿಸಿದ್ದಾರೆ. T20I ನಲ್ಲಿ ವೇಗವಾಗಿ 1000 ರನ್‌ಗಳನ್ನು ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಹೀಗಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸಾಧನೆಯನ್ನು ಮುರಿದಿದ್ದಾರೆ.

ಕೊಹ್ಲಿ ಮತ್ತು ಯಾದವ್ 42 ಎಸೆತಗಳಲ್ಲಿ 102 ಜೊತೆಯಾಟವಾಡಿದ್ದಾರೆ. ಭಾರತವು ಮೊದಲು ಬ್ಯಾಟಿಂಗ್ ಮಾಡಿದ್ದುಮ ಮೂರು ವಿಕೆಟ್ ನಷ್ಟಕ್ಕೆ 237 ರನ್ ಬಾರಿಸಿತ್ತು. ಇದು ನಾಲ್ಕನೇ ಅತ್ಯಧಿಕ T20 ಮೊತ್ತ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೆ, ಕೊನೆಯ 10 ಓವರ್‌ಗಳಲ್ಲಿ ಭಾರತ 141 ರನ್ ಬಾರಿಸಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ T20I ಗಳಲ್ಲಿ ಮಾಡಿದ ಗರಿಷ್ಠ T20I ಮೊತ್ತವಾಗಿದೆ. 

ಇದನ್ನೂ ಓದಿ: ವಿಶ್ವದಾಖಲೆ ನಿರ್ಮಿಸಿದ ಕೆ.ಎಲ್.ರಾಹುಲ್ ರೋಹಿತ್ ಶರ್ಮಾ ಜೋಡಿ..!

ಇನ್ನು ದಕ್ಷಿಣ ಆಫ್ರಿಕಾ ತಂಡದ ಮೊದಲ ಎರಡು ವಿಕೆಟ್ ನ್ನು ಅರ್ಶ್‌ದೀಪ್ ಸಿಂಗ್ ಪಡೆದುಕೊಂಡರು. ಈ ವೇಳೆ ಕೇವಲ 5 ರನ್ ಪೇರಿಸಿತ್ತು. ಆದರೆ ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ಮಿಲ್ಲರ್ ಶತಕದ ಜೊತೆಯಾಟದಿಂದ ದಕ್ಷಿಣ ಆಫ್ರಿಕಾಕ್ಕೆ ಗುರಿಯನ್ನು ತಲುಪುವ ಅವಕಾಶವಿತ್ತು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News