ಸೋನಿಯಾ ಶೂ ಲೇಸ್ ಕಟ್ಟುವ ಫೋಟೋ ವೈರಲ್ ಆಗ್ತಿದ್ದಂತೆ ಬಿಜೆಪಿ ಮಾಡಿದ್ದೇನು ಗೊತ್ತಾ…!!

ಸದ್ಯಕ್ಕೆ ಬಿಜೆಪಿಯ ತಂತ್ರ ಏನೆಂದರೆ ರಾಹುಲ್ ಫೋಟೋ ವೈರಲ್ ಆದ ತಕ್ಷಣ ಬಿಜೆಪಿಯ ಸೋಶಿಯಲ್ ಮೀಡಿಯಾ ಟೀಮ್ ಪ್ರಧಾನಿ ಮೋದಿಯವರ ಚಿತ್ರವನ್ನು ವೈರಲ್ ಮಾಡಲು ತೊಡಗಿದೆ .ನಿಜವಾಗಿಯೂ ಇದು ಸೋಷಿಯಲ್ ಮೀಡಿಯಾದ ಯುಗ. ಡಿಜಿಟಲ್ ಯುದ್ಧ ನೆಲದಷ್ಟೇ ಮುಖ್ಯ ಎನ್ನುವಂತಾಗಿದೆ.

Written by - Bhavishya Shetty | Last Updated : Oct 6, 2022, 10:59 PM IST
    • ಸೋನಿಯಾ ಗಾಂಧಿಯವರ ಶೂ ಲೇಸ್ ಕಟ್ಟಿದ ರಾಹುಲ್ ಗಾಂಧಿ
    • ಇದರ ಬೆನ್ನಲ್ಲೇ ಪ್ರಧಾನಿ ಫೋಟೋ ಕೂಡ ವೈರಲ್
    • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ರಾಜಕೀಯ ನಾಯಕರ ಫೋಟೋಗಳು
ಸೋನಿಯಾ ಶೂ ಲೇಸ್ ಕಟ್ಟುವ ಫೋಟೋ ವೈರಲ್ ಆಗ್ತಿದ್ದಂತೆ ಬಿಜೆಪಿ ಮಾಡಿದ್ದೇನು ಗೊತ್ತಾ…!!  title=
Rahul Gandhi Viral Photo

ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ'ಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಅವರು ವಯಸ್ಸಾದ ವ್ಯಕ್ತಿ ಅಥವಾ ಮಗುವಿನೊಂದಿಗೆ ಇರುವ ಫೋಟೋಗಳು ಕಾಣಿಸಿಕೊಳ್ಳುತ್ತಿವೆ. ಇದೀಗ ಬಿಜೆಪಿ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ಉಸ್ತುವಾರಿಗಳು ರಾಹುಲ್ ಅವರ ಈ ವೈರಲ್ ಚಿತ್ರಗಳನ್ನು ಎದುರಿಸುವುದು ಹೇಗೆ ಎಂಬ ಕಠಿಣ ಸಮಸ್ಯೆಗೆ ಸಿಲುಕಿದ್ದಾರೆ. 

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಟೂರಿಸ್ಟ್ ಬಸ್ ಡಿಕ್ಕಿ - ಒಂಭತ್ತು ಮಂದಿ ಸಾವು, 6 ಜನರ ಸ್ಥಿತಿ ಗಂಭೀರ

ಸದ್ಯಕ್ಕೆ ಬಿಜೆಪಿಯ ತಂತ್ರ ಏನೆಂದರೆ ರಾಹುಲ್ ಫೋಟೋ ವೈರಲ್ ಆದ ತಕ್ಷಣ ಬಿಜೆಪಿಯ ಸೋಶಿಯಲ್ ಮೀಡಿಯಾ ಟೀಮ್ ಪ್ರಧಾನಿ ಮೋದಿಯವರ ಚಿತ್ರವನ್ನು ವೈರಲ್ ಮಾಡಲು ತೊಡಗಿದೆ .ನಿಜವಾಗಿಯೂ ಇದು ಸೋಷಿಯಲ್ ಮೀಡಿಯಾದ ಯುಗ. ಡಿಜಿಟಲ್ ಯುದ್ಧ ನೆಲದಷ್ಟೇ ಮುಖ್ಯ ಎನ್ನುವಂತಾಗಿದೆ. ಹೋರಾಟ ಕೂಡ ನಡೆಯುತ್ತಿದೆ. ಬಿಜೆಪಿ ಸೋಷಿಯಲ್ ಮೀಡಿಯಾದ ಚಾಂಪಿಯನ್ ಎಂದು ಪರಿಗಣಿಸಲ್ಪಟ್ಟಿದೆ, ಆದರೆ ಮೊದಲ ಬಾರಿಗೆ ಭಾರತ್ ಜೋಟೋ ಯಾತ್ರೆ ಮೂಲಕ ಕಾಂಗ್ರೆಸ್ ಬಿಜೆಪಿಗೆ ಪೈಪೋಟಿ ನೀಡುತ್ತಿದೆ.

ರಾಹುಲ್ ಗಾಂಧಿ ಅವರ ಇದೇ ರೀತಿಯ ಚಿತ್ರ ಗುರುವಾರ ವೈರಲ್ ಆಗಿತ್ತು, ಇದರಲ್ಲಿ ಅವರು ತಮ್ಮ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಶೂ ಲೇಸ್ ಅನ್ನು ಕಟ್ಟಿದ್ದಾರೆ. ವಾಸ್ತವವಾಗಿ, ಗುರುವಾರ ಸೋನಿಯಾ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು. ಪ್ರಯಾಣದ ವೇಳೆ ಸೋನಿಯಾ ಅವರ ಪಾದರಕ್ಷೆಯ ಲೇಸ್ ಸಡಿಲವಾಯಿತು. ನಡೆಯಲು ತೊಂದರೆಯಾದಾಗ ರಾಹುಲ್ ಗಾಂಧಿ ಕುಳಿತು ತಾಯಿಯ ಶೂ ಲೇಸ್ ನ್ನು ಕಟ್ಟಿದರು. ಈ ಚಿತ್ರ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕರು, ಬೆಂಬಲಿಗರು ಈ ವಿಡಿಯೋವನ್ನು ಸಖತ್ ವೈರಲ್ ಮಾಡಿದ್ದಾರೆ.

ಈಗ ರಾಹುಲ್ ಅವರ ಈ ಚಿತ್ರವನ್ನು ಹೇಗೆ ಎದುರಿಸುವುದು ಎಂಬ ಸವಾಲು ಬಿಜೆಪಿ ಬೆಂಬಲಿಗರು ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ತಂಡದಲ್ಲಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ಒಂದು ಚಿತ್ರವನ್ನು ಕಂಡುಹಿಡಿದಿದ್ದು, ಅದರಲ್ಲಿ ಪ್ರಧಾನಿ ಬಡ ಮಹಿಳೆಯ ಕಾಲಿಗೆ ಚಪ್ಪಲಿ ಹಾಕುತ್ತಿದ್ದಾರೆ. 

ಇದನ್ನೂ ಓದಿ: IND vs SA ODI: ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ: ಅಯ್ಯರ್-ಸಂಜು ಅಬ್ಬರ ವ್ಯರ್ಥ!

ಇದಕ್ಕೂ ಮುನ್ನ ರಾಹುಲ್ ಮಳೆಯಲ್ಲಿ ನೆನದುಕೊಂದು ಭಾಷಣ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ನಂತರ ಬಿಜೆಪಿ ಸಾಮಾಜಿಕ ಮಾಧ್ಯಮ ಉಸ್ತುವಾರಿಗಳು ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರ ಇದೇ ರೀತಿಯ ಚಿತ್ರಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News