ಕೊಚ್ಚಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮತ್ತು ಭಾರತೀಯ ನೌಕಾಪಡೆಯ ಜಂಟಿ ಕಾರ್ಯಾಚರಣೆ ನಡೆಸಿ 1,200 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 200 ಕೆಜಿ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದು, 6 ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಎನ್ಸಿಬಿ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ತಯಾರಿಸಿದ ಹೆರಾಯಿನ್ ಅನ್ನು ಇರಾನ್ ಮೀನುಗಾರಿಕಾ ಹಡಗಿನಲ್ಲಿ ತುಂಬಿಕೊಂಡು ಪಾಕಿಸ್ತಾನ ಮಾರ್ಗವಾಗಿ ಭಾರತಕ್ಕೆ ತರಲಾಗುತ್ತಿತ್ತು. ಈ ಮಾದಕವಸ್ತುವನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಮಾರಾಟ ಮಾಡುವ ಪ್ರಯತ್ನ ನಡೆದಿತ್ತು ಅಂತಾ ತಿಳಿದುಬಂದಿದೆ.
ಇದನ್ನೂ ಓದಿ: ಟ್ರಕ್ಗೆ ಬಸ್ ಡಿಕ್ಕಿ: ಬೆಂಕಿ ಹೊತ್ತಿ 11 ಪ್ರಯಾಣಿಕರ ಸಜೀವ ದಹನ!, 38ಕ್ಕೂ ಹೆಚ್ಚು ಮಂದಿಗೆ ಗಾಯ
ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂ. ಬೆಲೆಬಾಳುವ ಹೆರಾಯಿನ್ ಸೀಜ್ ಮಾಡಲಾಗಿದ್ದು, 6 ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ. ಹೆರಾಯಿನ್ನೊಂದಿಗೆ ದೋಣಿಯನ್ನು ಮಟ್ಟಂಚೇರಿ ವಾರ್ಫ್ಗೆ ತರಲಾಗಿದೆ ಎಂದು ಎನ್ಸಿಬಿಯ ಉಪ ಮಹಾನಿರ್ದೇಶಕ (ಕಾರ್ಯಾಚರಣೆ) ಸಂಜಯ್ ಕುಮಾರ್ ಸಿಂಗ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
Co-ordinated action @ sea b/w #NCB & @indiannavy
👉200kg Afghan Heroin worth Rs 1200 Cr seized
👉Origin of the drug: Pakistan
👉Iranian dhow seized
👉6 Iranian crew members apprehended in Cochin#MissionDrugFreeIndia @PMOIndia @HMOIndia @BhallaAjay26 @PIBHomeAffairs pic.twitter.com/xKFvgawc4M— NCB INDIA (@narcoticsbureau) October 7, 2022
‘ಪ್ರಕರಣ ಸಂಬಂಧ ಎನ್ಸಿಬಿ ಹಡಗು ಮತ್ತು 200 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. 6 ಇರಾನಿನ ಸಿಬ್ಬಂದಿಯನ್ನು ಸಹ ಎನ್ಡಿಪಿಎಸ್ ಆಕ್ಟ್, 1985ರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ಮುಂದುವರೆದಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ. ಜಂಟಿ ಕಾರ್ಯಾಚರಣೆಯಲ್ಲಿ ದೊಡ್ಡ ಡ್ರಗ್ಸ್ ಜಾಲವೇ ಸಿಕ್ಕಿಬಿದ್ದಿದೆ. ವಶಪಡಿಸಿಕೊಂಡಿರುವ ಡ್ರಗ್ಸ್ಅನ್ನು ಜಲನಿರೋಧಕ, 7 ಪದರದ ಪ್ಯಾಕೇಜಿಂಗ್ನಲ್ಲಿ ಇರಾನಿನ ಹಡಗಿನಲ್ಲಿ ಸಾಗಿಸಲು ಪ್ರಯತ್ನಿಸಲಾಗಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Selfie With Tiger: ಸೆಲ್ಫಿಗಾಗಿ ಕಾಡಿನಲ್ಲಿ ಹುಲಿ ಬೆನ್ನಟ್ಟಿದ ಯುವಕರು, ಮುಂದಾಗಿದ್ದೇನು?
ಡ್ರಗ್ಸ್ ಪ್ಯಾಕೆಟ್ಗಳು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಕಾರ್ಟೆಲ್ಗಳಿಗೆ ವಿಶಿಷ್ಟವಾದ ಗುರುತುಗಳು ಮತ್ತು ಪ್ಯಾಕಿಂಗ್ ವಿಶೇಷತೆಗಳನ್ನು ಹೊಂದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕೆಲವು ಡ್ರಗ್ ಪ್ಯಾಕೆಟ್ಗಳ ‘ಚೇಳು’ ಸೀಲ್ ಗುರುತುಗಳನ್ನು ಹೊಂದಿದ್ದರೆ, ಇತರವುಗಳು ‘ಡ್ರ್ಯಾಗನ್’ ಸೀಲ್ ಗುರುತುಗಳನ್ನು ಹೊಂದಿದ್ದವು ಅವರು ಮಾಹಿತಿ ನೀಡಿದ್ದಾರೆ.
ಬಹುಶಃ ಹೆರಾಯಿನ್ ಅನ್ನು ಮೊದಲು ಪಾಕಿಸ್ತಾನದಿಂದ ದೋಣಿಯಲ್ಲಿ ಕಳುಹಿಸಲಾಗಿದೆ. ಇದಾದ ಬಳಿಕ ಮಾರ್ಗಮಧ್ಯೆ ಇರಾನ್ ಹಡಗಿಗೆ ಡ್ರಗ್ಸ್ ರವಾನಿಸಲಾಗಿದೆ. ನಂತರ ಶ್ರೀಲಂಕಾದ ಹಡಗಿಗೆ ಲೋಡ್ ಮಾಡಿಕೊಳ್ಳುವಷ್ಟರಲ್ಲಿ ಭಾರತೀಯ ಅಧಿಕಾರಿಗಳ ಕೈಗೆ ಸಿಕ್ಕಿದೆ. ಇದಲ್ಲದೆ ಇರಾನ್ ಹಡಗಿನಲ್ಲಿದ್ದ ಆರೋಪಿಗಳು ಸಮುದ್ರಕ್ಕೆ ಹಾರಿ ತಪ್ಪಿಸಿಕೊಳ್ಳಲು ಮತ್ತು ಹೆರಾಯಿನ್ ಅನ್ನು ನೀರಿನಲ್ಲಿ ಎಸೆಯಲು ಪ್ರಯತ್ನಿಸಿದ್ದರು ಎಂದು ಎನ್ಸಿಬಿ ಅಧಿಕಾರಿ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಎನ್ಸಿಬಿ ಅಧಿಕಾರಿಗಳು ಬಂಧಿತರ ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.