Rainbow Python Video: ಭೂಮಿಯ ಮೇಲೆ ಕಾಣಸಿಗುವ ಅತ್ಯಂತ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಕೂಡ ಒಂದು. ಹಾವುಗಳಲ್ಲಿ ಅತ್ಯಂತ ಅಪಾಯಕಾರಿ ಹಾವುಗಳು ಎಂದರೆ ಕಿಂಗ್ ಕೋಬ್ರಾ ಮತ್ತು ಹೆಬ್ಬಾವುಗಳು. ಹೆಬ್ಬಾವುಗಳು ಕೆಲವೊಮ್ಮೆ ತಮ್ಮ ಬೇಟೆಯನ್ನು ಜೀವಸಹಿತ ನುಂಗಿ ಹಾಕುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಹೆಬ್ಬಾವಿನ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು ಮತ್ತು ಅವುಗಳನ್ನು ನೋಡಿ ನಿಮ್ಮ ಎದೆ ಝಲ್ ಎಂದಿರಬಹುದು. ಅರ್ಥಾತ್ ನಿಮ್ಮ ಎದೆಯಲ್ಲಿ ನಡುಕ ಹುಟ್ಟಿಸುವ ಹಲವು ವೀಡಿಯೊಗಳಿವೆ. ಇತ್ತೀಚಿನ ದಿನಗಳಲ್ಲಿ ಹೆಬ್ಬಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನಂತರ ನೀವು ನಿಮ್ಮ ಕಣ್ಣುಗಳನ್ನೇ ನಂಬಲು ಸಾಧ್ಯವಾಗುವುದಿಲ್ಲ ಎಂಬುದು ಮಾತ್ರ ಗ್ಯಾರಂಟಿ.
ಇದನ್ನೂ ಓದಿ-Viral Video : 20 ವರ್ಷದ ಯುವತಿಯನ್ನು ಮದುವೆಯಾದ ಬಚ್ಚು ಬಾಯಿ ಮುದುಕನ ಖುಷಿ ನೋಡಿ..
ಹೌದು, ಇಂತಹ ಹೆಬ್ಬಾವನ್ನು ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದೈತ್ಯ ಗಾತ್ರದ ಹೆಬ್ಬಾವಿನೊಂದಿಗೆ ಕುಳಿತಿರುವುದನ್ನು ನೀವು ನೋಡಬಹುದು. ಈ ಹೆಬ್ಬಾವು 'ಕಾಮನಬಿಲ್ಲಿನ ಬಣ್ಣ'ಗಳಿಂದ ಕೂಡಿರುವುದನ್ನು ನೀವು ಕಾಣಬಹುದು. ಈ ರೇನ್ ಬೊ ಪೈಥಾನ್ ವ್ಯಕ್ತಿಯ ಮಡಿಲಲ್ಲಿ ಕುಳಿತಿರುವುದನ್ನು ನೀವು ಗಮನಿಸಬಹುದು. ಇನ್ನೊಂದೆಡೆ ವ್ಯಕ್ತಿಯು ಹೆಬ್ಬಾವಿನ್ನು ಮುದ್ದಾಗಿ ಪ್ರೀತಿಸುತ್ತಿರುವುದನ್ನು ನೋಡಬಹುದು. ಸಾಮಾಜಿಕ ಜಾಲತಾಣದ ಬಳಕೆದಾರರು ಈ ವಿಡಿಯೋ ನೋಡಿ ಭಾರಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿ ಎಂದರೆ ಈ ದೈತ್ಯ ಹೆಬ್ಬಾವು ನೋಡಲು ತುಂಬಾ ಸುಂದರವಾಗಿ ಕಾಣುತ್ತಿದೆ. ವಿಡಿಯೋ ನೋಡಿ-
ಇದನ್ನೂ ಓದಿ-Viral Video: ನಾಗರ ಹಾವು ಮೊಟ್ಟೆ ಇಡುವ ವಿಡಿಯೋ ವೈರಲ್.!
ಕಾಮನಬಿಲ್ಲಿನ ಬಣ್ಣದ ಹೆಬ್ಬಾವಿನೆಡೆಗೆ ಆಕರ್ಷಿತರಾದ ಜನ
ಅಂತಹ ಮಳೆಬಿಲ್ಲು ಡ್ರ್ಯಾಗನ್ ಅನ್ನು ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ. ವಾಸ್ತವದಲ್ಲಿ, ಈ ಹೆಬ್ಬಾವಿನ ದೇಹವನ್ನು ಮಳೆಬಿಲ್ಲಿನ ಬಣ್ಣಗಳಿಂದ ಅಲಂಕರಿಸಲಾಗಿತ್ತು. ಅದರ ನಂತರ ಅದು ಅಷ್ಟೊಂದು ಸುಂದರವಾಗಿ ಕಾಣಿಸಿಕೊಂಡಿದೆ. ವ್ಯಕ್ತಿಯು ಹೆಬ್ಬಾವಿನ ವೈಶಿಷ್ಟ್ಯಗಳನ್ನೂ ಕೂಡ ಹೇಳುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಈ ಸಮಯದಲ್ಲಿ, ಆತ ಹೆಬ್ಬಾವಿನ ಮೇಲೆ ತನ್ನ ಅಪಾರ ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ಸಹ ನೀವು ಗಮನಿಸಬಹುದು. ಈ ಸಂದರ್ಭದಲ್ಲಿ ಹೆಬ್ಬಾವನ್ನು ತನ್ನ ಕೆನ್ನೆಯ ಹಾಗೂ ಕುತ್ತಿಗೆಯ ಸಮೀಪಕ್ಕೆ ಕೊಂಡೊಯ್ಯುವುದನ್ನು ನೀವು ನೋಡಬಹುದು. ಈ ಹೆಬ್ಬಾವಿನ ಬಣ್ಣ ನೆಟ್ಟಿಗರನ್ನು ಭಾರಿ ಆಕರ್ಷಿಸುತ್ತಿದೆ. ಈ ವೀಡಿಯೊವನ್ನು jayprehistoricpets ಹೆಸರಿನ Instagram ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ