Gowli Updates : 'ಗೌಳಿ' ಚಿತ್ರೀಕರಣ ಕಂಪ್ಲೀಟ್, ರಿಲೀಸ್‌ಗೆ ರೆಡಿ.. ಟ್ರೈಲರ್ ಯಾವಾಗ, ಎಲ್ಲಿ?

Gowli Updates : ಇತ್ತೀಚೆಗೆ ಬಿಡುಗಡೆಯಾದ 'ಮಗಳೇ ಹೆಗಲೆ ವಿಮಾನ ನಿನಗೆ' ಎಂಬ ಹಾಡು ಎಲ್ಲರನ್ನೂ ತಂದೆ-ಮಗಳ ವಾತ್ಸಲ್ಯದಿಂದ ಸೆಳೆದಿತ್ತು. ಕಿಚ್ಚ ಸುದೀಪ್ ಈ ಹಾಡನ್ನ ಬಿಡುಗಡೆ ಶುಭ ಹಾರೈಸಿದ್ದರು. 

Written by - K Karthik Rao | Edited by - Chetana Devarmani | Last Updated : Oct 14, 2022, 12:45 PM IST
  • 'ಗೌಳಿ' ಶ್ರೀನಗರ ಕಿಟ್ಟಿ ಕಂಬ್ಯಾಕ್ ಸಿನಿಮಾ
  • ಸೂರ ನಿರ್ದೇಶನದ 'ಗೌಳಿ' ಚಿತ್ರ
  • 'ಗೌಳಿ' ಚಿತ್ರೀಕರಣ ಕಂಪ್ಲೀಟ್, ರಿಲೀಸ್‌ಗೆ ರೆಡಿ
Gowli Updates : 'ಗೌಳಿ' ಚಿತ್ರೀಕರಣ ಕಂಪ್ಲೀಟ್, ರಿಲೀಸ್‌ಗೆ ರೆಡಿ.. ಟ್ರೈಲರ್ ಯಾವಾಗ, ಎಲ್ಲಿ? title=
ಗೌಳಿ

Gowli Updates : 'ಗೌಳಿ' ಶ್ರೀನಗರ ಕಿಟ್ಟಿ ಕಂಬ್ಯಾಕ್ ಸಿನಿಮಾ. ಸೂರ ನಿರ್ದೇಶನದ, ರಘುಸಿಂಗಂ ನಿರ್ಮಾಣದ ಈ 'ಗೌಳಿ' ಸಿನಿಮಾ ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ. ಕಿಟ್ಟಿಗೆ ನಟಿ ಪಾವನ ಗೌಡ ಜೋಡಿಯಾಗಿದ್ದಾರೆ. ರಂಗಾಯಣ ರಘು, ಶರತ್ ಲೋಲಿತಾಶ್ವ, ಯಶ್ ಶೆಟ್ಟಿ, ಸುದೀ, ಗೋವಿಂದೇ ಗೌಡ ಇನ್ನೂ ಹಲವು ತಾರಾ ಗಣ ಈ ಸಿನಿಮಾದಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೀಗ ಚಿತ್ರದ ಕಂಪ್ಲೀಟ್ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದಿದೆ ಚಿತ್ರತಂಡ.

ಇದನ್ನೂ ಓದಿ : Sudeep and Gayle : ಸೂಪರ್ T10 ಕ್ರಿಕೆಟ್​ ಲೀಗ್​ ಕುರಿತು ಬಿಗ್​ ಅಪ್‌ಡೇಟ್‌ ಕೊಟ್ಟ ಕಿಚ್ಚ ಸುದೀಪ್‌.!

ಇತ್ತೀಚೆಗೆ ಬಿಡುಗಡೆಯಾದ 'ಮಗಳೇ ಹೆಗಲೆ ವಿಮಾನ ನಿನಗೆ' ಎಂಬ ಹಾಡು ಎಲ್ಲರನ್ನೂ ತಂದೆ-ಮಗಳ ವಾತ್ಸಲ್ಯದಿಂದ ಸೆಳೆದಿತ್ತು. ಕಿಚ್ಚ ಸುದೀಪ್ ಈ ಹಾಡನ್ನ ಬಿಡುಗಡೆ ಶುಭ ಹಾರೈಸಿದ್ದರು. ಇದಕ್ಕೂ ಮುಂಚೆ ಬಿಡುಗಡೆ ಯಾಗಿದ್ದಂತಹ 'ಮಹಾರಕ್ಕಸ' ಹಾಡು, ಟೀಸರ್ ಕೂಡ ಎಲ್ಲರನ್ನು ತನ್ನತ್ತ ಸೆಳೆದಿತ್ತು. ಕಿಟ್ಟಿಯ ರಗಡ್ ಲುಕ್ಕಿಗೆ ಸ್ಯಾಂಡಲ್ ವುಡ್ ತಾರೆಯರು, ಪ್ರೇಕ್ಷಕರ ಕಣ್ಸೆಳೆದಿತ್ತು. ಹಳ್ಳಿ ಸೊಗಡಿನ ಆಕ್ಷನ್, ಥ್ರಿಲ್ಲರ್, ಎಮೋಷನ್, ಕಾಮಿಡಿ, ಒಂದು ರಗಡ್ ಕಥೆಹೊತ್ತು ಬರ್ತಾಯಿರೊ ಈ ಸಿನಿಮಾ ಕಿರಿಯರಿಂದ ಹಿರಿಯರ ವರೆಗೂ ನಿರೀಕ್ಷೆ ಹೆಚ್ಚಿಸಿದೆ.

ಸದ್ಯ ಕೊನೆ ಹಂತದ ಚಿತ್ರೀಕರಣ ಮುಗಿಸಿರೋ ಗೌಳಿ ಚಿತ್ರ ತಂಡ ಶೀಘ್ರದಲ್ಲೆ ಟ್ರೈಲರ್ ನೊಂದಿಗೆ ಚಿತ್ರ ಬಿಡುಗಡೆ ದಿನಾಂಕವನ್ನ ಘೋಷಿಸಲಾಗುವುದು ಎಂದು ಜೀ ಕನ್ನಡ ನ್ಯೂಸ್ ಜೊತೆ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ : Adipurush team : ಪ್ರಭಾಸ್, ಸೈಫ್ ಅಲಿ ಖಾನ್, ಓಂ ರಾವುತ್ ವಿರುದ್ಧ ಕೇಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News