ಸೋಮಾರಿ ಸಿಬ್ಬಂದಿಯಿಂದ ಖಡಕ್ ಲೇಡಿ ಐಪಿಎಸ್ ಅಧಿಕಾರಿ ಚಾರಿತ್ರ್ಯ ಹರಣಕ್ಕೆ‌ ಯತ್ನ

ಡಿಸಿಪಿ ಆಡಳಿತ ವಿಭಾಗದಿಂದ ನಿಶಾ ಜೇಮ್ಸ್ ಎತ್ತಂಗಡಿ‌ ಮಾಡಿಸಲು ಇಲ್ಲಸಲ್ಲದ ಆರೋಪ‌ ಮಾಡಲಾಗುತ್ತಿದೆ. ಅದು ಕೂಡ ನಿಶಾ ಜೇಮ್ಸ್ ಚಾರಿತ್ರ್ಯ ಹರಣದ ಮೂಲಕ. ನಿಶಾ ಜೇಮ್ಸ್‌ ಗೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಜೊತೆ ಸಂಬಂಧಕಟ್ಟಿ ಅವರು  ತಮ್ಮ ಕಚೇರಿಯ ಸಿಬ್ಬಂದಿಯನ್ನು ಕಾಮದ ದೃಷ್ಟಿಯಿಂದ ನೋಡುತ್ತಾರೆ ಎಂದು ಸಾಕಷ್ಟು ಕೆಟ್ಟದಾಗಿ ಬರೆದು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾದ ದೂರಿನ ಪ್ರತಿ ಲಭ್ಯವಾಗಿದೆ. 

Written by - VISHWANATH HARIHARA | Edited by - Yashaswini V | Last Updated : Oct 17, 2022, 04:07 PM IST
  • ಕಳೆದ ಎರಡು ವರ್ಷದಿಂದ ನಗರ ಪೊಲೀಸ್ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ನಿಶಾ ಜೇಮ್ಸ್ ಸಾಕಷ್ಟು ಕೆಲಸ ಮಾಡಿದ್ದಾರೆ.
  • ಡಿಸಿಪಿ ಆಡಳಿತ ವಿಭಾಗದಿಂದ ನಿಶಾ ಜೇಮ್ಸ್ ಎತ್ತಂಗಡಿ‌ ಮಾಡಿಸಲು ಇಲ್ಲಸಲ್ಲದ ಆರೋಪ‌ ಮಾಡಲಾಗುತ್ತಿದೆ.
  • ಅದು ಕೂಡ ನಿಶಾ ಜೇಮ್ಸ್ ಚಾರಿತ್ರ್ಯ ಹರಣದ ಮೂಲಕ.
ಸೋಮಾರಿ ಸಿಬ್ಬಂದಿಯಿಂದ ಖಡಕ್ ಲೇಡಿ ಐಪಿಎಸ್ ಅಧಿಕಾರಿ ಚಾರಿತ್ರ್ಯ ಹರಣಕ್ಕೆ‌ ಯತ್ನ title=
Khadak Lady IPS Officer Nisha James

ಬೆಂಗಳೂರು: ನಿಶಾ ಜೇಮ್ಸ್ ಸದ್ಯ ಬೆಂಗಳೂರು ಆಡಳಿತ ವಿಭಾಗದ ಖಡಕ್ ಡಿಸಿಪಿಯಾಗಿದ್ದಾರೆ. ಕಳೆದ ಎರಡು ವರ್ಷದಿಂದ ನಗರ ಪೊಲೀಸ್ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ನಿಶಾ ಜೇಮ್ಸ್ ಸಾಕಷ್ಟು ಕೆಲಸ ಮಾಡಿದ್ದಾರೆ. ವರ್ಗಾವಣೆಯಲ್ಲಿ ಪಾರದರ್ಶಕ ನಿಲುವು ಹೊಂದಿದ್ದ ನಿಶಾ ಜೇಮ್ಸ್ ಐದು ವರ್ಷ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ ಪೊಲೀಸರ ಬುಡ ಅಲ್ಲಾಡಿಸಿದ್ದರು. ಜೊತೆಗೆ ಗನ್ ಲೈಸೆನ್ಸ್ ಪರವಾನಗಿ ಹಾಗೂ ನವಿಕರಣದಲ್ಲಿದ್ದ ಲಂಚಗುಳಿತನಕ್ಕೆ ಬ್ರೇಕ್ ಹಾಕಿದ್ದರು. ಸದ್ಯ ನಿಶಾ ಜೇಮ್ಸ್ ವಿರುದ್ಧ ಕೆಲವು ವಿಕೃತ ಮನಸ್ಥಿತಿಯ ಎಸ್ಡಿಎ ಹಾಗೂ ಎಫ್‌ಡಿಎ ಸಿಬ್ಬಂದಿ ಷಡ್ಯಂತ್ರ ನಡೆಸಿದ್ದಾರೆ. 

ಡಿಸಿಪಿ ಆಡಳಿತ ವಿಭಾಗದಿಂದ ನಿಶಾ ಜೇಮ್ಸ್ ಎತ್ತಂಗಡಿ‌ ಮಾಡಿಸಲು ಇಲ್ಲಸಲ್ಲದ ಆರೋಪ‌ ಮಾಡಲಾಗುತ್ತಿದೆ. ಅದು ಕೂಡ ನಿಶಾ ಜೇಮ್ಸ್ ಚಾರಿತ್ರ್ಯ ಹರಣದ ಮೂಲಕ. ನಿಶಾ ಜೇಮ್ಸ್‌ ಗೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಜೊತೆ ಸಂಬಂಧಕಟ್ಟಿ ಅವರು  ತಮ್ಮ ಕಚೇರಿಯ ಸಿಬ್ಬಂದಿಯನ್ನು ಕಾಮದ ದೃಷ್ಟಿಯಿಂದ ನೋಡುತ್ತಾರೆ ಎಂದು ಸಾಕಷ್ಟು ಕೆಟ್ಟದಾಗಿ ಬರೆದು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾದ ದೂರಿನ ಪ್ರತಿ ಲಭ್ಯವಾಗಿದೆ. 

ಇದನ್ನೂ ಓದಿ- Yathindra Siddaramaiah : ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ!

ಜೊತೆಗೆ ನಿಶಾ ಜೇಮ್ಸ್ ಪತಿಯ‌‌ ಹೆಸರನ್ನ ಉಲ್ಲೇಖಿಸಿ  ಸಂಸಾರದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿರುವ  ವಿಕೃತ ಮನಸ್ಸಿನ ವಿರುದ್ಧ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ತಿರುಗಿ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಶಾ ಜೇಮ್ಸ್ ಫೋಟೋ ಹಾಕಿ we support you madam ಎಂದು ಅಭಿಯಾನ‌ ಶುರು ಮಾಡಿದ್ದಾರೆ.

ಇದನ್ನೂ ಓದಿ- “ನಮ್ಮಿಬ್ಬರನ್ನು ನೆನಪಿಸಿಕೊಳ್ಳದಿದ್ದರೆ ಬಿಜೆಪಿಯವರಿಗೆ ಸಮಾಧಾನ ಆಗುವುದಿಲ್ಲ”

ಇನ್ನೂ ಕೆಲಸದ ವಿಚಾರವಾಗಿ  ಏನೇ ಭಿನ್ನಾಭಿಪ್ರಾಯ ಇದ್ದರೂ ಆ ಬಗ್ಗೆ ದೂರು ಕೊಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಈ ರೀತಿ ಖಾಸಗಿ ವಿಚಾರ ಎಳೆತಂದು ಇಲ್ಲಸಲ್ಲದ ಆರೋಪ‌ ಮಾಡಿ ಒಬ್ಬ ಮಹಿಳಾ‌ ಅಧಿಕಾರಿಯ ತೇಜೋವಧೆ ಮಾಡೋದು ಎಷ್ಚರ ಮಟ್ಟಿಗೆ ಸರಿ ಅನ್ನೋದು ಹಲವರ ಪ್ರಶ್ನೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News