ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್.! ತುಟ್ಟಿ ಭತ್ಯೆ 6% ರಷ್ಟು ಹೆಚ್ಚಳ

7th Pay Commission DA Hike:ಜುಲೈ ತಿಂಗಳ ತುಟ್ಟಿಭತ್ಯೆಯನ್ನು ಸರ್ಕಾರವು ಸೆಪ್ಟೆಂಬರ್‌ನಲ್ಲಿ ಘೋಷಿಸಿದೆ. ಇದರೊಂದಿಗೆ ನೌಕರರಿಗೆ ಮೂರು ತಿಂಗಳ ಅರಿಯರ್ಸ್ ನೀಡುವ ಬಗ್ಗೆಯೂ ನಿರ್ಧರಿಸಲಾಗಿದೆ. 

Written by - Ranjitha R K | Last Updated : Oct 21, 2022, 12:30 PM IST
  • ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ
  • ಶೇ. 6ರಷ್ಟು ತುಟ್ಟಿಭತ್ಯೆ ಹೆಚ್ಚಳ
  • ಕೇಂದ್ರದ ನಂತರ ರಾಜ್ಯಗಳೂ ನೀಡಲಿವೆ ಸಿಹಿ ಸುದ್ದಿ
ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್.!  ತುಟ್ಟಿ ಭತ್ಯೆ 6%  ರಷ್ಟು ಹೆಚ್ಚಳ  title=
7th pay commission

7th Pay Commission DA Hike : ನೌಕರರ ತುಟ್ಟಿಭತ್ಯೆ ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಕೈಗೊಂಡಿತ್ತು. ಜುಲೈ ತಿಂಗಳ ತುಟ್ಟಿಭತ್ಯೆಯನ್ನು ಸರ್ಕಾರವು ಸೆಪ್ಟೆಂಬರ್‌ನಲ್ಲಿ ಘೋಷಿಸಿದೆ. ಇದರೊಂದಿಗೆ ನೌಕರರಿಗೆ ಮೂರು ತಿಂಗಳ ಅರಿಯರ್ಸ್ ನೀಡುವ ಬಗ್ಗೆಯೂ ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಘೋಷಣೆಯ ನಂತರ ಇದೀಗ  ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಡಿಎ ಹೆಚ್ಚಳವನ್ನು ಘೋಷಿಸಿವೆ.

ಡಿಎ ಹೆಚ್ಚಳ ನಿರ್ಧಾರಕ್ಕೆ ಇಂದು ಬೀಳುವುದು ಮುದ್ರೆ : 
ಇದೀಗ ದೀಪಾವಳಿಗೂ ಮುನ್ನ ಪಂಜಾಬ್‌ನ ಭಗವಂತ್ ಮಾನ್ ಸರ್ಕಾರವು ರಾಜ್ಯದ ಸರ್ಕಾರಿ ನೌಕರರ ಡಿಎಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇತರ ರಾಜ್ಯ ಸರ್ಕಾರಗಳಂತೆ, ಪಂಜಾಬ್ ಸರ್ಕಾರವು ಸಹ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.  ಇಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ : Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ

6 ರಷ್ಟು ಡಿಎ ಹೆಚ್ಚಳದ ಬಗ್ಗೆ ಚಿಂತನೆ  : 
ಮೂಲಗಳ ಪ್ರಕಾರ, ಹಣಕಾಸು ಇಲಾಖೆಯು ಮುಖ್ಯಮಂತ್ರಿಗೆ 6 ಶೇಕಡಾ ಡಿಎ ಅನುಮೋದನೆ ಕೋರಿ ಕಡತವನ್ನು ಕಳುಹಿಸಿದೆ. ಮುಖ್ಯಮಂತ್ರಿಗಳ ಒಪ್ಪಿಗೆ ನಂತರ ಡಿಎ ಹೆಚ್ಚಳದ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ. ಇದಾದ ನಂತರ ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಿಸಲಾಗುವುದು. ಗಮನಿಸಬೇಕಾದ ಅಂಶವೆಂದರೆ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಶೇ  6 ರಷ್ಟು ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಯಲಿದೆ. 

ಹರ್ಯಾಣ ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ . ಈ ಮೂಲಕ ಹರಿಯಾಣದಲ್ಲಿ ಉದ್ಯೋಗಿಗಳ ತುಟ್ಟಿಭತ್ಯೆ ಶೇ.34ರಿಂದ ಶೇ.38ಕ್ಕೆ ಏರಿಕೆಯಾಗಿದೆ. ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, 38 ಪ್ರತಿಶತ ತುಟ್ಟಿಭತ್ಯೆ ಜುಲೈ 1, 2022 ರಿಂದ ಅನ್ವಯಿಸುತ್ತದೆ. ನೌಕರರಿಗೆ ಹೆಚ್ಚಿಸಿರುವ ಡಿಎಯನ್ನು ಅಕ್ಟೋಬರ್ ತಿಂಗಳ ವೇತನದಲ್ಲಿ ನೀಡಲಾಗುವುದು. ಇದಲ್ಲದೇ ಜುಲೈನಿಂದ ಸೆಪ್ಟೆಂಬರ್ ವರೆಗಿನ ಮೂರು ತಿಂಗಳ ಬಾಕಿ ನವೆಂಬರ್ ನಲ್ಲಿ ದೊರೆಯಲಿದೆ.

ಇದನ್ನೂ ಓದಿ : Post Office Service : Post Office ಖಾತೆದಾರರಿಗೆ ಸಿಹಿ ಸುದ್ದಿ : ನಿಮಗಾಗಿ ಹೊಸ ಸೌಲಭ್ಯ ಆರಂಭ!

ವರ್ಷದಲ್ಲಿ ಎರಡು ಬಾರಿ ಡಿಎ ಹೆಚ್ಚಳ : 
ಕೇಂದ್ರ ಸರ್ಕಾರದ ಪರವಾಗಿ ಏಳನೇ ವೇತನ ಆಯೋಗದ ಅಡಿಯಲ್ಲಿ, ಜನವರಿ ಮತ್ತು ಜುಲೈನಲ್ಲಿ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಿಸಲು ಘೋಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News