ಚಿಕ್ಕೋಡಿ : ಕಿತ್ತೂರ ಉತ್ಸವಕ್ಕೆ ತಾಕ್ಕತ್ತ್ ಇದ್ದರೆ ಬರ್ರಿ ಎಂದು ರೈತ ಮುಖಂಡ ಚುನ್ನಪ್ಪ ಪೂಜೇರಿ ಮುಖ್ಯಮಂತ್ರಿ ಅವರಿಗೆ ಸವಾಲು ಹಾಗೂ ಎಚ್ಚರಿಕೆ ನೀಡಿದ್ದಾರೆ
ಹುಕ್ಕೇರಿ ತಾಲೂಕಿನ ಹ್ತತರಗಿ ಟೋಲ್ ನಾಕಾದಲ್ಲಿ ರೈತರು ಕಬ್ಬಿನ ಪ್ರತಿ ಟನ್ ಗೆ 5500 ರೂ. ನಿಗದಿ ಪಡಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ರೈತ ಮುಖಂಡ ಚುನ್ನಪ್ಪ, ಕಬ್ಬಿನ ಬೆಲೆ 5500 ನಿಗದಿ ಮಾಡದೇ ಇದ್ದರೆ ಕಿತ್ತೂರ ಉತ್ಸವಕ್ಕೆ ಬಂದು ತೋರಿಸಿ. ಸಿಎಂ ಬೊಮ್ಮಾಯಿ ಹೋದ ಕಡೆಯಲ್ಲಿ ನಮ್ಮ ರೈತರು ರಿಪೇರಿ ಮಾಡುತ್ತಾರೆ. ಕಾರ್ಖಾನೆಗಳಿಂದ 27000 ಕೋಟಿ ಸರ್ಕಾರಕ್ಕೆ ತೆರಿಗೆ ಬರುತ್ತೆ. ಪ್ರತಿ ಟನ್ ಗೆ 4000 ರೂ.ಗಳ ತೆರಿಗೆ ಬರುತ್ತೆ. ಈ ತೆರಿಗೆಯಲ್ಲಿ 2000 ರೂ. ತಗೆದು ರೈತರಿಗೆ ಕೊಡಿ. ಈಗ ಇರುವ 3500 ಗೆ 2000 ಸೇರಿಸಿ 5500 ರೂ. ಪ್ರತಿ ಟನ್ ದರ ನಿಗದಿ ಮಾಡಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಅ.26 ರಂದು ಮಲ್ಲಿಕಾರ್ಜುನ್ ಖರ್ಗೆ ಅಧಿಕಾರ ಸ್ವೀಕಾರ; ರಾಹುಲ್ ಗಾಂಧಿ ಸೇರಿ ‘ಕೈ’ ನಾಯಕರು ಭಾಗಿ
ಇನ್ನು ಮುಂದುವರೆದು ಮಾತನಾಡಿದ್ ಅವರು, ಕಬ್ಬಿನ ದರ ನಿಗದಿ ಮಾಡದೇ ಇದ್ದಲ್ಲಿ ಕಿತ್ತೂರ ಉತ್ಸವಕ್ಕೆ ಬಂದು ತೋರಿಸಿ. ಸುವರ್ಣ ಸೌಧ, ಕಿತ್ತೂರು ಉತ್ಸವ ಯಲ್ಲಕಡೆ ಪ್ರತಿಭಟನೆ ಮಾಡುತ್ತೆವೆ. ಪೋಲಿಸರಿಂದ ನಮ್ಮನ್ನ ಹತ್ತಿಕ್ಕುವ ಪ್ರಯತ್ನ ಮಾಡಬೇಡಿ. ಇನ್ನೂ ಮುಂದೇ ನಮ್ನ ಹೋರಾಟ ನೋಡಿ. ರಾಜ್ಯದ ಎಲ್ಲ ಭಾಗದ ರೈತರು ನಿಮ್ಮನ್ನು ರಿಪೇರಿ ಮಾಡುತ್ತಾರೆ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನಿನಕೊಪ್ಪ, ಸಿಎಂ ಬೊಮ್ಮಾಯಿಗೆ ರೈತರು ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ : GT Devegowda : ದೇವೇಗೌಡರ ವಾತ್ಸಲ್ಯಕ್ಕೆ ಕರಗಿ ಕಣ್ಣೀರಿಟ್ಟ ಜಿಟಿ ದೇವೇಗೌಡ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.