ಮದುವೆಗಳ ಮೋಸದ ನೋಂದಣಿಯನ್ನು ತಡೆಯಲು ಯುಪಿ ಸರ್ಕಾರ ಶೀಘ್ರದಲ್ಲೇ ಆಧಾರ್ ಅನ್ನು ಕಡ್ಡಾಯಗೊಳಿಸಲಿದೆ. ಇದಕ್ಕೆ ಉನ್ನತ ಮಟ್ಟದಲ್ಲಿ ಒಪ್ಪಿಗೆ ದೊರೆತಿದ್ದು, ಶೀಘ್ರವೇ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಈ ನಿಟ್ಟಿನಲ್ಲಿ ತಿದ್ದುಪಡಿ ನೀತಿಯನ್ನು ಹೊರಡಿಸಲಿದೆ.
ಇದನ್ನೂ ಓದಿ: Supreme Court: “ಒಂದೋ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಅವಹೇಳನಕ್ಕೆ ಸಿದ್ಧರಾಗಿ“ ಸರ್ಕಾರದ ವಿರುದ್ಧ ಸುಪ್ರೀಂ ಕಿಡಿ
ಉತ್ತರ ಪ್ರದೇಶದಲ್ಲಿ ಮದುವೆ ನೋಂದಣಿಗೆ ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ ಅಧಿಕಾರ ನೀಡಲಾಗಿತ್ತು. ಇದಕ್ಕಾಗಿ ಇಲಾಖೆಯಿಂದ ಆನ್ಲೈನ್ ವ್ಯವಸ್ಥೆ ರೂಪಿಸಲಾಗಿದೆ. ಅರ್ಜಿದಾರರು https:// igrsup.gov.in ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬಹುದಿತ್ತು. ಆದರೆ ಈ ನೀತಿಯನ್ನು ಹೊರಡಿಸಿದ ಸಮಯದಲ್ಲಿ ಆಧಾರ್ ಕಡ್ಡಾಯವಾಗಿರಲಿಲ್ಲ. ಇದರಿಂದ ವಂಚನೆಯಾಗುವ ಸಂಭವ ಹೆಚ್ಚಾಗಿತ್ತು. ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಇದೀಗ ವಿವಾಹ ನೋಂದಣಿಗೆ ಆಧಾರ್ ಕಡ್ಡಾಯಗೊಳಿಸಬೇಕು ಎಂದು ಒಪ್ಪಿಗೆ ನೀಡಲಾಗಿದೆ.
ಇದನ್ನೂ ಓದಿ: Viral Video: ಸಿಂಹವನ್ನು ಫುಟ್ ಬಾಲ್ ನಂತೆ ಒದ್ದು ಆಟವಾಡಿದ ಎಮ್ಮೆಗಳ ಗುಂಪು!
ಪ್ರಸ್ತುತ, ಮದುವೆ ನೋಂದಣಿಗೆ ಗುರುತಿನ ಪುರಾವೆ, ವಯಸ್ಸಿನ ಪುರಾವೆ, ನಿವಾಸ ಪುರಾವೆಗಳನ್ನು ಒದಗಿಸುವುದು ಅವಶ್ಯಕ. ಇದರೊಂದಿಗೆ ಹೊಸ ಫೋಟೋ ಹಾಕಬೇಕು. ಇಬ್ಬರು ಸಾಕ್ಷಿಗಳ ಗುರುತಿನ ಪುರಾವೆ, ವಯಸ್ಸಿನ ಪುರಾವೆಗಳನ್ನು ನೀಡಬೇಕು. ವಧು ಮತ್ತು ವರರಿಂದ ಅಫಿಡವಿಟ್ ನೀಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.