Connection of Surya Grahan 2022 with Mahabharata War: ಈ ಬಾರಿಯ ಕಾರ್ತಿಕ ಮಾಸ ಹಲವು ಆತಂಕಗಳು ಮತ್ತು ಅನಿಶ್ಚಿತತೆಗಳನ್ನು ತರಲಿದೆ. ಈ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ 2 ಗ್ರಹಣಗಳು ಸಂಭವಿಸುತ್ತಿವೆ. ಮಹಾಭಾರತ ಯುದ್ಧ ನಡೆಯುವ ಮೊದಲು ಕೂಡ ಕಾರ್ತಿಕ ಮಾಸದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅದರ ನಂತರ ನಡೆದ ಮಹಾಯುದ್ಧದಲ್ಲಿ ಲಕ್ಷಾಂತರ ಜನರು ಹತರಾಗಿದ್ದರು. ಹಾಗಾದರೆ ಈ ಬಾರಿಯೂ ಮಹಾಭಾರತ ಯುದ್ಧದಂತಹ ದೊಡ್ಡ ಅಹಿತಕರ ಘಟನೆ ನಡೆಯುತ್ತಾ? ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಲಾಗುತ್ತಿದೆ. ಅಕ್ಟೋಬರ್ 25 ರಂದು ನಡೆಯಲಿರುವ ಸೂರ್ಯಗ್ರಹಣದ ವಿಶೇಷ ಏನೆಂದು ತಿಳಿಯೋಣ.
ಅಕ್ಟೋಬರ್ 25 ರಂದು ಬೆಳಗ್ಗೆ 11.28 ರಿಂದ ಗ್ರಹಣ ಸಂಭವಿಸಲಿದೆ
ಖಗೋಳಶಾಸ್ತ್ರಜ್ಞರ ಪ್ರಕಾರ, ಈ ವರ್ಷದ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 25 ರಂದು ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಗ್ರಹಣವು ಅಕ್ಟೋಬರ್ 25 ರಂದು ಬೆಳಗ್ಗೆ 11.28 ಕ್ಕೆ ಪ್ರಾರಂಭವಾಗುತ್ತದೆ. ಈ ಗ್ರಹಣವು ಸುಮಾರು 07:05 ಗಂಟೆಗಳ ನಂತರ ಸಂಜೆ 5.24 ಕ್ಕೆ ಮುಕ್ತಾಯಗೊಳ್ಳಲಿದೆ. ಗ್ರಹಣ ಸಂಭವಿಸುವ 12 ಗಂಟೆಗಳ ಮೊದಲು ಅಂದರೆ ಅಕ್ಟೋಬರ್ 24ರ ರಾತ್ರಿ 11.28ಕ್ಕೆ ಸೂತಕ ಕಾಲ ಆರಂಭವಾಗಲಿದೆ. ಈ ಕಾರಣದಿಂದಾಗಿ, ದೀಪಾವಳಿಯ ಮಾರನೆಯ ದಿನ ಬೆಳಗ್ಗೆ ಗೋವರ್ಧನ ಪೂಜೆಯ ಬದಲಿಗೆ ಸೂತಕ ಗ್ರಹಣದಲ್ಲಿ ಕಳೆದುಹೊಗಲಿದೆ.
ಸೂರ್ಯನ ಶೇ.44ರಷ್ಟು ಭಾಗ ಗ್ರಹಣಕ್ಕೆ ಒಳಗಾಗಲಿದೆ
ಜ್ಯೋತಿಷಿಗಳ ಪ್ರಕಾರ, ಈ ಸೂರ್ಯ ಗ್ರಹಣವು ಈಶಾನ್ಯ ಭಾರತವನ್ನು ಹೊರತುಪಡಿಸಿ ಭಾರತದ ಉಳಿದ ಭಾಗಗಳಲ್ಲಿ ಗೋಚರಿಸಲಿದೆ. ಈ ವರ್ಷದ ಸೂರ್ಯಗ್ರಹಣ ಸೂರ್ಯ, ಚಂದ್ರ, ಶುಕ್ರ ಮತ್ತು ಕೇತುಗಳ ಸಂಯೋಗದಲ್ಲಿರುತ್ತದೆ. ಕೃಷ್ಣನ ನಗರವಾಗಿರುವ ಮಥುರಾದಲ್ಲಿ ಈ ಸೂರ್ಯಗ್ರಹಣವು ಅಕ್ಟೋಬರ್ 25 ರಂದು ಸಂಜೆ 4:32 ಕ್ಕೆ ಆರಂಭವಾಗಲಿದ್ದು, ಸಂಜೆ 05:42 ರವರೆಗೆ ಮುಂದುವರಿಯಲಿದೆ. ಈ ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯಾಸ್ತವೂ ಸಂಭವಿಸುತ್ತದೆ. ನಗರದಲ್ಲಿ 1 ಗಂಟೆ 10 ನಿಮಿಷಗಳ ಕಾಲ ಈ ಗ್ರಹಣ ಇರಲಿದೆ. ಈ ಬಾರಿ ಸೂರ್ಯನ ಶೇ.44 ರಷ್ಟು ಭಾಗ ಗ್ರಹಣಕ್ಕೆ ಒಳಗಾಗಲಿದೆ.
ಇದನ್ನೂ ಓದಿ-Surya Grahan 2022: ದೀಪಾವಳಿ ಮರುದಿನ ಸಂಭವಿಸಲಿದೆ ಸೂರ್ಯಗ್ರಹಣ: ಅಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!
ದೊಡ್ಡ ಅಪಘಾತ ಸಂಭವಿಸಲಿದೆಯೇ?
ಖಗೋಳಶಾಸ್ತ್ರಜ್ಞರ ಪ್ರಕಾರ, ಈ ವರ್ಷ ಕಾರ್ತಿಕ ಮಾಸದಲ್ಲಿ ಒಟ್ಟು 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳು ಸಂಭವಿಸುತ್ತಿವೆ. ಅಕ್ಟೋಬರ್ 25 ರಂದು ಸೂರ್ಯಗ್ರಹಣ ಇರುತ್ತದೆ, ನವೆಂಬರ್ 8 ರಂದು ಚಂದ್ರ ಗ್ರಹಣ ಇರುತ್ತದೆ. ಭಾರತೀಯ ಕಾಲಮಾನದ ಪ್ರಕಾರ, ಈ ಚಂದ್ರಗ್ರಹಣವು ನವೆಂಬರ್ 8 ರ ಮಂಗಳವಾರ ಮಧ್ಯಾಹ್ನ 1.32 ರಿಂದ ರಾತ್ರಿ 7.27 ರವರೆಗೆ ಇರಲಿದೆ. ಮಹಾಭಾರತ ಯುದ್ಧದ ಮೊದಲು ಕೂಡ, ಕಾರ್ತಿಕ ಮಾಸದಲ್ಲಿ, ಎರಡು ಗ್ರಹಣಗಳು ಸಂಭವಿಸಿದವು, ನಂತರ ಭೀಕರ ಯುದ್ಧವೆ ನಡೆದುಹೋಗಿತ್ತು , ಇದರಲ್ಲಿ ಎರಡೂ ಕಡೆಯ ಲಕ್ಷಾಂತರ ಸೈನಿಕರು ಹತರಾಗಿದ್ದರು. ಈ ಎರಡು ಗ್ರಹಣಗಳು ಈ ಬಾರಿಯೂ ಯಾವುದಾದರೂ ಅಶುಭ ಸೂಚನೆ ನೀಡುತ್ತಿವೆಯೇ? ಈ ಬಗ್ಗೆ ಜ್ಯೋತಿಷಿಗಳಲ್ಲಿ ಹಲವು ಊಹಾಪೋಹಗಳಿವೆ.
ಇದನ್ನೂ ಓದಿ-ಅಪ್ಪಿತಪ್ಪಿಯೂ ಇಂದು ಈ ವಸ್ತುಗಳನ್ನು ಖರೀದಿಸಿದ್ರೆ ಬಡತನ ಕಟ್ಟಿಟ್ಟ ಬುತ್ತಿ..!
(ಹಕ್ಕುತ್ಯಾಗ- ಈ ಲೆಕಹನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ