ಬೆಂಗಳೂರು : ಭಾರತೀಯ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದೆ. ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದ ಸಿನಿಮಾಗೆ ರಾಜಕೀಯ ಗಣ್ಯರು, ನಟರು ಫಿದಾ ಆಗಿದ್ದಾರೆ. ಇನ್ನು ತಲೈವಾ ರಜನಿಕಾಂತ್ ಅವರು ಸಿನಿಮಾ ನೋಡಿದ್ದು, ಹಾಡಿ ಹೊಗಳಿದ್ದಾರೆ.
ಸೆಪ್ಟೆಂಬರ್ 30 ಕ್ಕೆ ಪ್ರಾರಂಭವಾದ ಕಾಂತಾರ ಓಟ ಅಖಂಡ ಭಾರತದಲ್ಲಿ ಇದೂವರೆಗೂ ತಗ್ಗಿಲ್ಲ. ಎಲ್ಲಾ ವರ್ಗದ ಪ್ರೇಕ್ಷಕರ ಮನ ಗೆದ್ದಿದೆ. ಸದ್ಯ ತಲೈವಾ ರಜನಿಕಾಂತ್ ಅವರು ಕಾಂತಾರ ಸಿನಿಮಾ ನೋಡಿದ್ದಾರೆ. ಈ ಕುರಿತು ಟ್ಟೀಟ್ ಮಾಡಿರುವ ಅವರು, ʼತಿಳಿದಿದ್ದಕ್ಕಿಂತ ತಿಳಿಯದಿರುವುದೇ ಹೆಚ್ಚುʼ ಇದನ್ನು ಸಿನಿಮಾದಲ್ಲಿ ಯಾರೂ ಉತ್ತಮವಾಗಿ ಹೇಳಲು ಸಾಧ್ಯವಿಲ್ಲ, ಆದ್ರೆ ಈ ಕೆಲಸವನ್ನು ಹೊಂಬಾಳೆ ಸಿನಿಮಾ ಸಂಸ್ಥೆ ಕಾಂತಾರ ಸಿನಿಮಾದ ಮೂಲಕ ಮಾಡಿದೆ. ಕಾಂತಾರ ನೋಡಿ ನನಗೆ ಗೂಸ್ಬಂಪ್ಸ್ ಬಂತು. ರಿಷಬ್ ಶೆಟ್ಟಿ ಒಬ್ಬ ಬರಹಗಾರ, ನಿರ್ದೇಶಕ ಮತ್ತು ನಟನಾಗಿ ಮಾಡಿದ ಕಾರ್ಯಕೆ ನಿನಗೆ ಹ್ಯಾಟ್ಸ್ ಆಫ್ʼ ಎಂದು ಹೇಳಿದ್ದಾರೆ.
ಇನ್ನು ಸೂಪರ್ ಸ್ಟಾರ್ ರಜಿನಿ ಮೆಚ್ಚುಗೆಗೆ ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ, ಆತ್ಮೀಯ ರಜಿನಿಕಾಂತ್ ಸರ್ ನೀವು ಭಾರತದ ದೊಡ್ಡ ಸೂಪರ್‌ಸ್ಟಾರ್ ಮತ್ತು ನಾನು ಬಾಲ್ಯದಿಂದಲೂ ನಿಮ್ಮ ಅಭಿಮಾನಿ. ನಿಮ್ಮ ಮೆಚ್ಚುಗೆಯೇ ನನ್ನ ಕನಸು, ಇಂದು ಅದು ನನಸಾಗಿದೆ. ನೀವು ಹೆಚ್ಚು ಸ್ಥಳೀಯ ಕಥೆಗಳನ್ನು ಮಾಡಲು ಮತ್ತು ಎಲ್ಲೆಡೆ ನಮ್ಮ ಪ್ರೇಕ್ಷಕರನ್ನು ರಂಚಿಸಲು ನನ್ನನ್ನು ಪ್ರೇರೇಪಿಸುತ್ತೀರಿ. ಧನ್ಯವಾದಗಳು ಸರ್ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಕಿಭಾಯ್ ಸ್ಟೈಲ್ ಕಾಪಿ ಹೊಡೆದ್ರಾ ವಿಜಯ್ : ವಾರಿಸು ಪೋಸ್ಟರ್ ಟ್ರೋಲ್..!
Dear @rajinikanth sir 😍 you are biggest Superstar in India and I have been your fan since childhood. Your appreciation is my Dream come true. You inspire me to do more local stories and inspire our audiences everywhere. Thank you sir 🙏❤️ https://t.co/C7bBRpkguJ
— Rishab Shetty (@shetty_rishab) October 26, 2022
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ನಿರ್ಮಾಣವಾದ ಕಾಂತಾರ ಸಿನಿಮಾ ನಿನ್ನೆವರೆಗೂ 180 ಕೋಟಿಗೂ ಅಧಿಕ ಹಣವನ್ನು ಕಲೆಹಾಕಿದೆ, ಈ ವಾರದ ಕೊನೆಗೆ 200 ಕೋಟಿ ಕ್ಲಬ್ ಸೇರಲಿದೆ ಎಂಬುವುದು ಟ್ರೇಡ್ ಅನಾಲಿಸಿಸ್ ಲೆಕ್ಕಾಚಾರ. ಕರ್ನಾಟಕದಲ್ಲಿ 100 ಕೋಟಿಗೂ ಅಧಿಕ ಹಣ ಕಂತಾರ ಗಳಿಸಿದೆ. ಅಲ್ಲದೆ, ತೆಲಂಗಾಣ, ಉತ್ತರ ಭಾರತ, ಕೇರಳ ಸೇರಿದಂತೆ ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ ತೆರೆಕಂಡ ರಿಷಬ್ ಸಿನಿಮಾ ಒಟ್ಟು 80 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.