Labh Panchami 2022: ವ್ಯಾಪಾರ ವೃದ್ಧಿ, ತಿಜೋರಿಯಲ್ಲಿ ಹಣದ ಹರಿವು ಹೆಚ್ಚಾಗಲು ಇಂದು ಶುಭ ಮುಹೂರ್ತದಲ್ಲಿ ಈ ಕೆಲಸ ಮಾಡಿ

Labh Panchami 2022 Upay: ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ದೀಪಾವಳಿಯ ನಂತರ ಕೊನೆಯ ಪಂಚಮಿಯಂದು ತಾಯಿ ಲಕ್ಷ್ಮಿಯನ್ನು ಪೂಜಿಸುವ ವಾಡಿಕೆ ಇದೆ. ಈ ದಿನ ಶುಭಯೋಗದಲ್ಲಿ ತಾಯಿ ಲಕ್ಷ್ಮಿಗೆ ಪೂಜೆ ಸಲ್ಲಿಸುವುದರಿಂದ ವ್ಯಕ್ತಿಯು ತನ್ನ ವ್ಯವಹಾರದಲ್ಲಿ ಅಪಾರ ಯಶಸ್ಸು ಮತ್ತು ಕೀರ್ತಿಯನ್ನು ಸಂಪಾದಿಸುತ್ತಾನೆ.   

Written by - Nitin Tabib | Last Updated : Oct 29, 2022, 02:51 PM IST
  • ಲಾಭ ಪಂಚಮಿಯ ದಿನದಂದು ಶಿವ ಕುಟುಂಬ ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸುವ ನಿಯಮವಿದೆ.
  • ಈ ದಿನದಂದು ಹೊಸ ಲೆಕ್ಕ ಪುಸ್ತಕಗಳನ್ನು (ರೋಜು ಕೀರ್ದಿ-ಖಾತೆ ಕೀರ್ದಿ) ಪೂಜಿಸುವ ನಿಯಮವಿದೆ.
  • ಲಾಭ ಪಂಚಮಿಯ ದಿನದಂದು ವ್ಯಾಪಾರದಲ್ಲಿ ಪ್ರಗತಿಯನ್ನು ಕೋರಲಾಗುತ್ತದೆ.
Labh Panchami 2022: ವ್ಯಾಪಾರ ವೃದ್ಧಿ, ತಿಜೋರಿಯಲ್ಲಿ ಹಣದ ಹರಿವು ಹೆಚ್ಚಾಗಲು ಇಂದು ಶುಭ ಮುಹೂರ್ತದಲ್ಲಿ ಈ ಕೆಲಸ ಮಾಡಿ title=
Labh Panchami 2022

Labh Panchami Puja Vidhi: ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗಲು ಕೊನೆಯ ಪಂಚಮಿಯ ತಿಥಿಯಾದ ಇಂದು ಲಕ್ಷ್ಮಿ ದೇವಿಯನ್ನು ಶೃದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ದೀಪಾವಳಿಯ ನಂತರ ಕಾರ್ತಿಕ ಮಾಸದಲ್ಲಿ ಬರುವ ಲಾಭ ಪಂಚಮಿ ಅಥವಾ ಕಡೆಯ ಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನ, ವಿಶೇಷವಾಗಿ ಪೂಜೆ ಮತ್ತು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ಜೀವನದಿಂದ ಬಡತನ ದೂರವಾಗುತ್ತದೆ ಮತ್ತು ವ್ಯಕ್ತಿಯ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ಐದನೇ ದಿನವನ್ನು ಲಾಭ, ಜ್ಞಾನ ಮತ್ತು ಸೌಭಾಗ್ಯ ಪಂಚಮಿ ಎಂದು ಕರೆಯಲಾಗುತ್ತದೆ.

ಲಾಭ ಪಂಚಮಿಯ ದಿನದಂದು ಶಿವ ಕುಟುಂಬ ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸುವ ನಿಯಮವಿದೆ. ಈ ಹಬ್ಬವನ್ನು ವಿಶೇಷವಾಗಿ ಗುಜರಾತ್ ನಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಹೊಸ ಲೆಕ್ಕ ಪುಸ್ತಕಗಳನ್ನು (ರೋಜು ಕೀರ್ದಿ-ಖಾತೆ ಕೀರ್ದಿ) ಪೂಜಿಸುವ ನಿಯಮವಿದೆ. ಲಾಭ ಪಂಚಮಿಯ ದಿನದಂದು ವ್ಯಾಪಾರದಲ್ಲಿ ಪ್ರಗತಿಯನ್ನು ಕೋರಲಾಗುತ್ತದೆ. ಈ ಬಾರಿಯ ಲಾಭ ಪಂಚಮಿ ಅತ್ಯಂತ ಶುಭ ಮುಹೂರ್ತದಲ್ಲಿ ಆಚರಿಸಲಾಗುತ್ತಿದೆ. ಮುಹೂರ್ತದ ಪೂಜೆ ಮತ್ತು ಪೂಜೆಯ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ.

ಲಾಭ ಪಂಚಮಿ 2022 ಶುಭ ಮುಹೂರ್ತ
ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಂಚಮಿ ದಿನಾಂಕವು 29 ಅಕ್ಟೋಬರ್ 2022 ರಂದು ಬೆಳಗ್ಗೆ 08.13 ರಿಂದ ಆರಂಭಗೊಂಡು ಅಕ್ಟೋಬರ್ 30 ರಂದು ಬೆಳಗ್ಗೆ 05:49 ರವರೆಗೆ ಇರಲಿದೆ. ಉದಯತಿಥಿ ಪ್ರಕಾರ, ಅಕ್ಟೋಬರ್ 29 ರಂದು ಲಾಭ ಪಂಚಮಿ ಆಚರಿಸಲಾಗುತ್ತದೆ.

ಲಾಭ ಪಂಚಮಿ 2022 ಶುಭ ಕಾಕತಾಳೀಯ
ಯಾವುದೇ ಹೊಸ ವ್ಯಾಪಾರವನ್ನು ಆರಂಭಿಸಲು ನೀವು ಯೋಜನೆ ರೂಪಿಸುತ್ತಿದ್ದರೆ, ಈ ದಿನದಂದು ಪ್ರಾರಂಭಿಸುವುದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಈ ದಿನ ರವಿ ಮತ್ತು ಸುಕರ್ಮ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಈ ಯೋಗಗಳಲ್ಲಿ ಯಾವುದೇ ಕೆಲಸವನ್ನು ಆರಂಭಿಸುವುದರಿಂದ ಅವು ಫಲಪ್ರದಾಯಿ ಸಾಬೀತಾಗುತ್ತವೆ ಎಂದು ಹೇಳಲಾಗುತ್ತದೆ. ರವಿಯೋಗದ ಪ್ರಭಾವದಿಂದ ಅಶುಭ ಯೋಗಗಳ ಪ್ರಭಾವ ಕಡಿಮೆಯಾಗಿ ಎಲ್ಲಾ ರೀತಿಯ ತೊಂದರೆಗಳು ದೂರಾಗುತ್ತವೆ.

ಬೆಳಗ್ಗೆ 06.31 ರಿಂದ 09.06.00 ರವರೆಗೆ ರವಿಯೋಗ ಇರಲಿದೆ.
ಇದೇ ವೇಳೆ, ಸುಕರ್ಮ ಯೋಗ - ಅಕ್ಟೋಬರ್ 30 ರ ರಾತ್ರಿ 10.23 ರಿಂದ ಬೆಳಗ್ಗೆ 07.16 ರವರೆಗೆ ಇರಲಿದೆ
.

ಲಾಭ ಪಂಚಮಿ 2022 ಪೂಜಾ ವಿಧಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ದಿನದಂದು ಮಾಡಿದ ಲಾಭ ಪಂಚಮಿಯ ಪೂಜೆಯಿಂದ ತಾಯಿ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಮತ್ತು ತನ್ನ ಭಕ್ತರ ಮೇಲೆ ಅಪಾರ ಕ್ರುಪಾವೃಷ್ಟಿ ಸುರಿಸುತ್ತಾರೆ ಎನ್ನಲಾಗುತ್ತದೆ. ಈ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಕೆಂಪು ಬಣ್ಣದ ವಸ್ತ್ರ ಧರಿಸಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ.

ಶುಭ ಮುಹೂರ್ತದಲ್ಲಿ ಶ್ರೀಗಂಧ, ಪುಷ್ಪ, ಅಕ್ಷತೆ, ಮೌಳಿ ಮುಂತಾದವುಗಳಿಂದ ಗಣೇಶ, ಶಿವನನ್ನು ಪೂಜಿಸಿ. ದೂರ್ವಾ, ಸಿಂಧೂರ ಮತ್ತು ಮೋದಕವನ್ನು ಗಣೇಶನಿಗೆ ಅರ್ಪಿಸಿ. ಇದಾದ ನಂತರ ಪೂಜೆಯ ವೀಳ್ಯದೆಲೆಯ ಮೇಲೆ ಅಡಿಕೆಯನ್ನಿಟ್ಟು ಗಣಪತಿ ರೂಪದಲ್ಲಿ ಪೂಜಿಸಿ. ಇದರ ಜೊತೆಗೆ ಧತ್ತೂರಿ ಮತ್ತು ಭಸ್ಮವನ್ನು ಶಿವನಿಗೆ ಅರ್ಪಿಸಿ.

ದೀಪಾವಳಿಯಂದು ಹೊಸ ಪುಸ್ತಕಗಳನ್ನು ಪೂಜಿಸಲು ಸಾಧ್ಯವಾಗದವರು ಲಾಭ ಪಂಚಮಿಯ ದಿನದಂದು ಶುಭ ಕಾರ್ಯಗಳನ್ನು ಮಾಡಬಹುದು ಎಂದು ಹೇಳಲಾಗುತ್ತದೆ. ತಾಯಿ ಲಕ್ಷ್ಮಿಗೆ ಸುಗಂಧ, ಕಮಲದ ಹೂವು, ಬಿಳಿ ಸಿಹಿತಿಂಡಿಗಳನ್ನು ಅರ್ಪಿಸಿ, ದೇಹದಲ್ಲಿ ಸ್ವಾಹಾ ಮಂತ್ರವನ್ನು ಜಪಿಸಿ.

ಇದನ್ನೂ ಓದಿ-Chanakya Niti: ಈ ವಿಷಯಗಳಲ್ಲಿ ಪುರುಷರು ಮಹಿಳೆಯರ ಮುಂದೆ ಸೋಲೋಪ್ಪಿಕೊಳ್ಳಲೇಬೇಕು!

ಸಂತೋಷ, ಅದೃಷ್ಟ ಮತ್ತು ಲಾಭಕಾಗಿ ಉಪವಾಸ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಮತ್ತು ವ್ಯಕ್ತಿಯು ವ್ಯವಹಾರದಲ್ಲಿ ಪ್ರಗತಿಯನ್ನು ಸಾಧಿಸುತ್ತಾನೆ. 

ಇದನ್ನೂ ಓದಿ-Lucky Finger: ಪತ್ನಿಯ ಬೆರಳುಗಳು ಹೀಗಿದ್ದರೆ ಪತಿಗೆ ಅದೃಷ್ಟ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News