Babar Azam Troll: ಬಾಬರ್ ಅಜಂ ಇಂಗ್ಲೀಷ್ ಕೇಳಿದ್ರೆ ತಲೆ ತಿರುಗೋದು ಖಂಡಿತ: ಮತ್ತೆ ಟ್ರೋಲ್ ಗೆ ಆಹಾರವಾದ ಪಾಕ್ ನಾಯಕ

ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ. ಅವರ ಏಳು ವರ್ಷದ ಹಿಂದಿನ ಟ್ವೀಟ್ ಅನ್ನು ಜನರು ಹುಡುಕಿ ತೆಗೆದಿದ್ದು, ಅದರಲ್ಲಿ ಅವರು ಜಿಂಬಾಬ್ವೆಯನ್ನು ಸರಿಯಾಗಿ ಉಚ್ಚರಿಸಿಲ್ಲ. ಟಿ20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ಪಾಕಿಸ್ತಾನವನ್ನು ಸೋಲಿಸಿದ್ದು ಕುತೂಹಲಕಾರಿಯಾಗಿದ್ದು, ಹಲವು ಬಳಕೆದಾರರು ಈ ಸೋಲಿಗೆ ಆ ಟ್ವೀಟ್‌ಗೆ ಲಿಂಕ್ ಮಾಡುತ್ತಿದ್ದಾರೆ

Written by - Bhavishya Shetty | Last Updated : Oct 29, 2022, 04:40 PM IST
    • ಪಾಕಿಸ್ತಾನದ ನಾಯಕ ಬಾಬರ್ ಅಜಮ್ ರನ್ನು ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ
    • ಏಳು ವರ್ಷದ ಹಿಂದಿನ ಟ್ವೀಟ್ ಅನ್ನು ಹುಡುಕಿ ತೆಗೆದು ಟ್ರೋಲ್ ಮಾಡಿದ ಜನರು
    • ಬಾಬರ್ ಅಜಂ ಇಂಗ್ಲೀಷ್ ಕೇಳಿದ್ರೆ ತಲೆ ತಿರುಗೋದು ಖಂಡಿತ
Babar Azam Troll: ಬಾಬರ್ ಅಜಂ ಇಂಗ್ಲೀಷ್ ಕೇಳಿದ್ರೆ ತಲೆ ತಿರುಗೋದು ಖಂಡಿತ: ಮತ್ತೆ ಟ್ರೋಲ್ ಗೆ ಆಹಾರವಾದ ಪಾಕ್ ನಾಯಕ title=
Babar Azam

ಪಾಕಿಸ್ತಾನಿ ಕ್ರಿಕೆಟಿಗರ ಇಂಗ್ಲಿಷ್‌ ಕೇಳಲು ಸಾಮಾನ್ಯವಾಗಿ ಹಾಸ್ಯಾಸ್ಪದಂತಿರುತ್ತದೆ. ಪಂದ್ಯದ ಬಳಿಕ ಅವರು ಕಾಮೆಂಟೇಟರ್‌ನೊಂದಿಗೆ ಮಾತನಾಡುವಾಗ ಆಗಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಬರೆಯುತ್ತಾರೆ ಎಂದಾಗಲು ಪಾಕ್ ಕ್ರೀಡಾಪಟುಗಳ ಇಂಗ್ಲೀಷ್ ನಗು ತರಿಸುತ್ತದೆ. ಈ ವಿಚಾರದಿಂದಲೇ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ.

ಇದನ್ನೂ ಓದಿ: Virat Kohli: ವಿಶ್ವದಾಖಲೆ ಹೊಸ್ತಿಲಲ್ಲಿ ವಿರಾಟ್: ಈ ರೆಕಾರ್ಡ್ ಮಾಡಲು ಬೇಕಾಗಿರೋದು ಕೇವಲ 27 ರನ್!

ಈ ಮಧ್ಯೆ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ. ಅವರ ಏಳು ವರ್ಷದ ಹಿಂದಿನ ಟ್ವೀಟ್ ಅನ್ನು ಜನರು ಹುಡುಕಿ ತೆಗೆದಿದ್ದು, ಅದರಲ್ಲಿ ಅವರು ಜಿಂಬಾಬ್ವೆಯನ್ನು ಸರಿಯಾಗಿ ಉಚ್ಚರಿಸಿಲ್ಲ. ಟಿ20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ಪಾಕಿಸ್ತಾನವನ್ನು ಸೋಲಿಸಿದ್ದು ಕುತೂಹಲಕಾರಿಯಾಗಿದ್ದು, ಹಲವು ಬಳಕೆದಾರರು ಈ ಸೋಲಿಗೆ ಆ ಟ್ವೀಟ್‌ಗೆ ಲಿಂಕ್ ಮಾಡುತ್ತಿದ್ದಾರೆ.

 

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಭಾರತ ಮೊದಲ ಪಂದ್ಯದಲ್ಲಿ ಅವರನ್ನು ಸೋಲಿಸಿತು. ನಂತರ ಜಿಂಬಾಬ್ವೆ ವಿರುದ್ಧ ಸೋಲನ್ನು ಅನುಭವಿಸಿತು. ಇದರಿಂದಾಗಿ ಪಾಕ್ ಸಂಕಷ್ಟಕ್ಕೀಡಾಗಿದೆ. ಈಗ ಅವರು ತಮ್ಮ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕು. ಅಷ್ಟೇ ಅಲ್ಲದೆ, ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಇದೇ ವೇಳೆ ತಂಡದ ನಾಯಕ ಬಾಬರ್ ಅಜಂ ಟ್ರೋಲ್ ಆಗುತ್ತಿದ್ದಾರೆ.

ಬಾಬರ್ ಆಜಂ ಅವರ ಏಳು ವರ್ಷದ ಟ್ವೀಟ್ ವೈರಲ್ ಆಗಿದೆ. ಇದರಲ್ಲಿ ಬಾಬರ್ ಇಂಗ್ಲಿಷ್ ನಲ್ಲಿ 'ವೆಲ್ ಕಮ್ ಜಿಂಬಾಬ್ವೆ' ಎಂದು ಮಾತ್ರ ಬರೆದಿದ್ದಾರೆ. ಬಾಬರ್ ಅದರಲ್ಲಿ ಜಿಂಬಾಬ್ವೆಯ ಅಕ್ಷರಗಳನ್ನು ತಪ್ಪಾಗಿ ಬರೆದಿದ್ದಾರೆ. ಇದರಿಂದಾಗಿ ಅವರು ತೀವ್ರವಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಇದಷ್ಟೇ ಅಲ್ಲದೆ, ಕಾಮೆಂಟೇಟರ್ ಜೊತೆ ಮಾತನಾಡುವಾಗಲು ಅವರು ಚಡಪಡಿಸುತ್ತಿದ್ದ ತನ್ನ ಇಂಗ್ಲೀಷ್ ಗ್ರಾಮರ್ ಮಿಸ್ಟೇಕ್ ಮುಚ್ಚಿಹಾಕಲು ಏನೇನೋ ಮಾತನಾಡುತ್ತಿರುವುದು ಕಾಣಬಹುದು. ಇವೆಲ್ಲಾ ವಿಡಿಯೋವನ್ನು ಹುಡುಕಿ ತೆಗೆದ ಟ್ರೋಲಿಗರು ಬಾಬರ್ ಅಜಂರನ್ನು ಟ್ರೋಲ್ ಮಾಡುತ್ತಿದ್ದಾರೆ.

 

ಇದನ್ನೂ ಓದಿ: KL Rahul ಕಳಪೆ ಫಾರ್ಮ್‌ನಿಂದ ಕೊಹ್ಲಿ ಹಾದಿಯಲ್ಲಿ ನಡೆಯುತ್ತಿರುವ ಕೆ.ಎಲ್.ರಾಹುಲ್!

ಬಾಬರ್ ಅವರ ಈ ಟ್ವೀಟ್ ಮೇ 2015ರಂದು ಮಾಡಲಾಗಿದೆ. ಜಿಂಬಾಬ್ವೆ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಎರಡೂ ತಂಡಗಳ ನಡುವೆ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿ ನಡೆಯಿತು. ಜಿಂಬಾಬ್ವೆ ತಂಡ ಪಾಕಿಸ್ತಾನ ತಲುಪಿದಾಗ ಸ್ವಾಗತಿಸಲು ಬಾಬರ್ ಅಜಂ ಈ ಟ್ವೀಟ್ ಮಾಡಿದ್ದರು. 'ಸ್ವಾಗತ ಜಿಂಬಾವೇ(Zimbaway)’ ಎಂದು ಬರೆದಿದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News