SOMTHING ಸ್ಪೆಷಲ್ ಕೊಡಲು ಬರುತ್ತಿದೆ 'ಸ್ಪೂಕಿ ಕಾಲೇಜು'..! ಅತೀ ಶೀಘ್ರದಲ್ಲಿ ಶುರುವಾಗುತ್ತೆ ಅಡ್ಮಿಶನ್

ಧಾರವಾಡದಲ್ಲಿರುವ 103 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಕಾಲೇಜು ಈ ಚಿತ್ರದ ಕೇಂದ್ರ ಬಿಂದು. ಇಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಕಾಳಿ ನದಿಯಿಂದ ಆವೃತವಾಗಿರುವ, ದಟ್ಟವಾದ ವನಸಿರಿಯನ್ನು ಹೊಂದಿರುವ ದಾಂಡೇಲಿಯಲ್ಲೂ ಚಿತ್ರೀಕರಣ ನಡೆಸಿರುವುದಾಗಿ ಚಿತ್ರತಂಡ ತಿಳಿಸಿದೆ.

Written by - YASHODHA POOJARI | Edited by - Yashaswini V | Last Updated : Oct 31, 2022, 11:47 AM IST
  • ಹಾರಾರ್, ಕಾಮಿಡಿ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಭರತ್ ಜೆ ನಿರ್ದೇಶಿಸುತ್ತಿದ್ದಾರೆ.
  • ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಭರತ್ ಅವರೆ ಬರೆದಿದ್ದಾರೆ.
  • ರೆಡಿಯೋ ಹಾಗೂ ಪ್ರಚಾರ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿರುವ ಭರತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
SOMTHING ಸ್ಪೆಷಲ್ ಕೊಡಲು ಬರುತ್ತಿದೆ 'ಸ್ಪೂಕಿ ಕಾಲೇಜು'..! ಅತೀ ಶೀಘ್ರದಲ್ಲಿ ಶುರುವಾಗುತ್ತೆ ಅಡ್ಮಿಶನ್   title=
Spooky College

ಅಂದು 'ರಂಗಿತರಂಗ' ಸಿನಿಮಾ ಸೃಷ್ಟಿಸಿದ್ಧ ಹವಾ ಯಾವತ್ತಿಗೂ ಕಡಿಮೆಯಾಗಲ್ಲ ಬಿಡಿ. ಇದೀಗ ಅದೇ ಪ್ರೊಡ್ಯೂಸರ್ ಸಾರಥ್ಯದಲ್ಲಿ 'ಸ್ಪೂಕಿ ಕಾಲೇಜು' ಅನ್ನೋ ಅದ್ಭುತ ಸಿನಿಮಾ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಹೆಚ್.ಕೆ.ಪ್ರಕಾಶ್ ಅವರು ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ  ನಿರ್ಮಿಸುತ್ತಿರುವ "ಸ್ಪೂಕಿ ಕಾಲೇಜ್" ಚಿತ್ರದ ಕೆಲಸ ಪೂರ್ಣಗೊಂಡಿದೆ. ಹಾರಾರ್,  ಕಾಮಿಡಿ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಭರತ್ ಜೆ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಭರತ್ ಅವರೆ ಬರೆದಿದ್ದಾರೆ. ರೆಡಿಯೋ ಹಾಗೂ ಪ್ರಚಾರ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿರುವ ಭರತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಪ್ರೀಮಿಯರ್ ಪದ್ಮಿನಿ ಖ್ಯಾತಿಯ ವಿವೇಕ್ ಸಿಂಹ "ಸ್ಪೂಕಿ ಕಾಲೇಜ್" ನ ನಾಯಕ. "ದಿಯಾ" ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ.  ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಪಿ.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ "ಕಾಮಿಡಿ ಕಿಲಾಡಿಗಳು" ಶೋನ‌ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕದಾದ್ಯಂತ ಆಡಿಷನ್ ನಡೆಸುವ ಮೂಲಕ ಕೂಡ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 

ಇದನ್ನೂ ಓದಿ- Watch Video : ಸ್ಟಂಟ್‌ ಶೂಟಿಂಗ್‌ ವೇಳೆ ಕಾಲು ಮುರಿದುಕೊಂಡ ಟೈಗರ್‌ ಶ್ರಾಫ್‌...!

ಧಾರವಾಡದಲ್ಲಿರುವ 103 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಕಾಲೇಜು ಈ ಚಿತ್ರದ ಕೇಂದ್ರ ಬಿಂದು. ಇಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಕಾಳಿ ನದಿಯಿಂದ ಆವೃತವಾಗಿರುವ, ದಟ್ಟವಾದ ವನಸಿರಿಯನ್ನು ಹೊಂದಿರುವ ದಾಂಡೇಲಿಯಲ್ಲೂ ಚಿತ್ರೀಕರಣ ನಡೆಸಿರುವುದಾಗಿ ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ- ʼಜೂಮ್ ಕಾಲ್ʼನಲ್ಲಿ ಹಾರರ್‌ ಕಥೆ ಹೇಳಲು ಹೊರಟ ಹೊಸಬರ ಚಿತ್ರತಂಡ...!

ಕನ್ನಡ ಚಿತ್ರರಂಗದಲ್ಲಿ ಈವರೆಗೂ ಬಂದಿರುವ "ನಾ ನಿನ್ನ ಬಿಡಲಾರೆ", " ಶ್", "ಆಪ್ತಮಿತ್ರ", " ರಂಗಿತರಂಗ" ದಂತಹ ಅದ್ಭುತ ಚಿತಗಳಷ್ಟೇ ನಮ್ಮ ಚಿತ್ರವೂ "ಸ್ಪೂಕಿ" ಯಾಗಿರುತ್ತದೆ ಎನ್ನುತ್ತಾರೆ ನಿರ್ದೇಶಕರು. ಯಾರು ಊಹಿಸಲಾಗದ ಕ್ಲೈಮ್ಯಾಕ್ಸ್ ಸಹ "ಸ್ಪೂಕಿ ಕಾಲೇಜ್" ನಲ್ಲಿರುತ್ತದಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News